ಕಡAಗ: ಸ್ಥಳೀಯ ವಿಜಯ ವಿದ್ಯಾಸಂಸ್ಥೆಯಲ್ಲಿ ೮೦ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು.

ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಲ್ಯಂಡ ಉದಯ ಹಾಗೂ ಆಡಳಿತ ಮಂಡಳಿ ಸದಸ್ಯರಿಂದ ಧ್ವಜರೋಹಣ ನೆರವೇರಿತು.

ನಂತರ ವಿದ್ಯಾರ್ಥಿಗಳಿಂದ ಆಕರ್ಷಕ ಮೆರವಣಿಗೆಯು ಕಡಂಗದ ಪಟ್ಟಣದ ಮೂಲಕ ಸಾಗಿತು. ಸಭಾ ಕಾರ್ಯಕ್ರಮ ಬಳಿಕ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಇತ್ತೀಚಿಗೆ ಶಾಲೆಯಿಂದ ನಿವೃತ್ತಿ ಹೊಂದಿದ ಶಿಕ್ಷಕಿ ಕೋಡಿರ ದರ್ಶಿನಿ ತಮ್ಮಯ್ಯ ಮತ್ತು ಶಾಲಾ ಸಹಾಯಕಿ ನೆರಪಂಡ ಗಂಗಮ್ಮ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಲ್ಲಚಂಡ ಮಾದಯ್ಯ, ಕಾಂಗೀರ ರವಿ ಮಾಚಯ್ಯ, ಕೋದಂಡ ಸುಬ್ಬಯ್ಯ, ಬಲ್ಲಚಂಡ ಗೌತಮ್, ಕೋಡಿರ ಪ್ರಸನ್ನ ತಮ್ಮಯ್ಯ, ಮುಕ್ಕಾಟಿರ ಬೋಪಯ್ಯ, ವಿದ್ಯಾರ್ಥಿಗಳು ಪೋಷಕರು, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ವಾಗತವನ್ನು ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪಟ್ರಪಂಡ ಗೀತಾ ಬೋಜಮ್ಮ ನಿರ್ವಹಿಸಿದರು.