ಕುಶಾಲನಗರ, ಆ. ೧೯: ಕೊಡಗು ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಟಿ.ಎಸ್. ಶಾಂಭಶಿವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಂಘದ ಗೌರವಾಧ್ಯಕ್ಷ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಶಾಂಭಶಿವಯ್ಯ ಮಾತನಾಡಿ, ೩೦ ತಿಂಗಳ ಹಿಂದೆ ಪ್ರಾರಂಭವಾದ ಸಂಘ ಮಾರ್ಚ್ ೨೦೨೬ರ ಅಂತ್ಯಕ್ಕೆ ೧೩೬೪ ಸದಸ್ಯರೊಂದಿಗೆ ರೂ. ೧೮.೩೮ ಕೋಟಿ ವಹಿವಾಟನ್ನು ನಡೆಸಿದೆ. ಸಂಘದ ಮೂಲಕ ಸಾಲ ಪಡೆದ ಹಣವನ್ನು ಸಂಬAಧಿಸಿದ ಸದಸ್ಯರು ಶೇ. ೧೦೦ ರಷ್ಟು ಮರುಪಾವತಿ ಮಾಡಿದ್ದಾರೆ. ಆ ಮುÆಲಕ ರೂ. ೨.೫೦ ಲಕ್ಷ ವಾರ್ಷಿಕ ಆದಾಯ ಬಂದಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಪಿ. ಉದಯಕುಮಾರ್ ನಿರ್ದೇಶಕರಾದ ಹೆಚ್.ವಿ. ಶಿವಪ್ಪ, ಪುಟ್ಟರಾಜು ಹೆಚ್.ಎಸ್., ಸುರೇಶ್ ಎಸ್.ಎಸ್., ಮೋಕ್ಷಿಕ್ ರಾಜ್ ಹೊನ್ನಗುಡಿ, ಪ್ರಶಾಂತ್ ಕೆ.ಡಿ., ಮಮತಾ ಎ.ಆರ್., ಯಶೋದ ಜಿ.ಎಸ್., ಬಸವರಾಜು, ಶುಭಶೇಖರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ಬಸವಣ್ಣಯ್ಯ, ಲೆಕ್ಕಪರಿಶೋಧಕ ಚಂದ್ರಶೇಖರ್ ಇದ್ದರು.