ವೀರಾಜಪೇಟೆ, ಆ. ೧೯: ಕಾರ್ಮಿಕನೊಬ್ಬ ಪುತ್ರನನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿರುವ ಘಟನೆ ವೀರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದಲ್ಲಿ ನಡೆದಿದೆ.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಪರಂಬು ಪೈಸಾರಿ ನಿವಾಸಿ ದಿ. ಮೇದು ಅವರ ಪುತ್ರ ಉಮೇಶ್ ವೈ.ಎಂ. (೪೪) ನಾಪತ್ತೆಯಾಗಿರುವ ವ್ಯಕ್ತಿ.

ಉಮೇಶ್ ಕೂಲಿ ಕಾರ್ಮಿಕರಾಗಿದ್ದು, ವಿವಾಹಿತರಾಗಿದ್ದರು. ಅವರ ಪತ್ನಿ ರೇವತಿ ಅವರು ಸುಮಾರು ೧೦ ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ೧೨ ವರ್ಷದ ಪುತ್ರನಿದ್ದಾನೆ. ತಾ. ೧೭ರಂದು ಉಮೇಶ್ ಕಕ್ಕಬ್ಬೆಗೆ ಕೆಲಸಕ್ಕೆ ತೆರಳಿ ಬಳಿಕ ಮನೆಗೆ ಹಿಂದಿರುಗಿದ್ದರು. ಮರುದಿನ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಬೆಳಿಗ್ಗೆ ಮನೆಯ ಸಮೀಪದ ಸಂಬAಧಿಕರು ಮನೆಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಪುತ್ರ ನಿರಂಜನ್, ತಾನು ಎಚ್ಚರಗೊಂಡಾಗ ತಂದೆ ಮನೆಯಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾರೆ.

ಬಳಿಕ ಸಂಬAಧಿಕರು ಹಾಗೂ ಗ್ರಾಮಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದರೂ ಉಮೇಶ್ ಪತ್ತೆಯಾಗಿಲ್ಲ. ಅವರ ಸಂಬAಧಿ ಜೂಬಿ ಅವರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉಮೇಶ್ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ, ವೀರಾಜಪೇಟೆ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಅಥವಾ ವೀರಾಜಪೇಟೆ ವೃತ್ತ ನಿರೀಕ್ಷಕರಿಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.