ಪ್ರಿಯ ಓದುಗ ಬಂಧು.,
ಐತಿಹಾಸಿಕ ಹಿನ್ನೆಲೆಯುಳ್ಳ ಮಡಿಕೇರಿ ದಸರಾ ಉತ್ಸವ ಜಗತ್ಪçಸಿದ್ಧಿ ಹೊಂದಿದೆ., ಲಕ್ಷಾಂತರ ಮಂದಿ ಈ ನಾಡಹಬ್ಬವನ್ನು ಕಣ್ತುಂಬಿಕೊಳ್ಳಲು ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದಲೂ ಜನರು ಆಗಮಿಸಿ ಉತ್ಸವದ ಯಶಸ್ಸಿಗೆ ಸಾಕ್ಷೀಕರಿಸುತ್ತಾರೆ., ಅಂತೆಯೇ ನಾಡ ಹಬ್ಬ ದಸರಾಗೂ ಮುನ್ನ ಬರುವ ಗಣೇಶೋತ್ಸವ ಕೂಡ ಐತಿಹಾಸಿಕ ಹಿನ್ನೆಲೆಯುಳ್ಳದ್ದಾಗಿದೆ. ಅದರಲ್ಲೂ ತಿಂಗಳುಗಳ ಕಾಲ ಆಚರಿಸಲ್ಪಡುವ ವೀರಾಜಪೇಟೆ ಗಣೇಶೋತ್ಸವ ದಸರಾದಂತೆಯೇ ಹೆಸರುವಾಸಿ. ಪಟ್ಟಣದಾದ್ಯಂತ ಸುಮಾರು ೨೨ ಕಡೆಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟು ಕಡೇ ದಿನ ಎಲ್ಲಾ ಕಡೆಯಿಂದಲೂ ಹೊರಡುವ ವಿಸರ್ಜನೋತ್ಸವದ ಉತ್ಸವ ಮಂಟಪಗಳ ಮೆರುಗು ಕಣ್ಮನ ಸೆಳೆಯುತ್ತವೆ. ಅಲ್ಲಿನ ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯ ಸಮಿತಿ ಹಾಗೂ ಗಣೇಶೋತ್ಸವ ಸಮಿತಿಯ ಇತಿಹಾಸವನ್ನು ಓದುಗರಿಗಾಗಿ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂದಿನಿAದ ಪತ್ರಿಕೆಯ ಒಳಪುಟದಲ್ಲಿ ಗಣೇಶೋತ್ಸವದ ಅವಲೋಕನ ರಜಿತಾ ಕಾರ್ಯಪ್ಪ ಅವರ ಬರಹದಲ್ಲಿ ಮೂಡಿಬರಲಿದೆ.
ಜಿ. ಚಿದ್ವಿಲಾಸ್
ಸಂಪಾದಕ