ಪ್ರಿಯರೇ.,

ನಾಡಿನಾದ್ಯಂತ ೮೦ನೇ ಸ್ವಾತಂತ್ರೊö್ಯÃತ್ಸವವನ್ನು ಸಂಭ್ರಮದಿAದ ಆಚರಿಸಲಾಗಿದೆ. ನೀವುಗಳು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದೀರಿ. ನೀವು ಈ ಬಾರಿಯ ಸ್ವಾತಂತ್ರೊö್ಯÃತ್ಸವವನ್ನು ವಿಶೇಷವಾಗಿ., ಮರೆಯಲಾರದ ಕ್ಷಣವಾಗಿ ಆಚರಿಸಿದ್ದೀರಾ ಎಂಬದಕ್ಕೆ ನೀವುಗಳು ನಮಗೆ ಕಳುಹಿಸಿರುವ ಚಿತ್ರಗಳೇ ಸಾಕ್ಷಿ.,

ಹೌದು., ಈ ಬಾರಿಯ ಸ್ವಾತಂತ್ರೊö್ಯÃತ್ಸವ ಆಚರಣೆಯ ಸಂಭ್ರಮ ಮನದಾಳದಲ್ಲಿ ಉಳಿಯುವಂತೆ ಮಾಡುವ ಸಲುವಾಗಿ ನಾವು ನಿಮಗೆ ಗಿಡ ನೆಟ್ಟು, ನೀವುಗಳು ನೆಟ್ಟ ಗಿಡಗಳೊಂದಿಗೆ ಫೋಟೋ ತೆಗೆದು ಕಳುಹಿಸಿಕೊಡಲು ಹೇಳಿದ್ದೆವು. ನಮ್ಮ ಕರೆಯನ್ನು ಪ್ರೀತಿ ಮತ್ತು ಪ್ರೇಮದಿಂದ ಸ್ವೀಕರಿಸಿದ ನೀವುಗಳು ಚಿತ್ರ ಕಳುಹಿಸಿಕೊಟ್ಟಿದ್ದೀರಿ. ಶಾಲೆ, ಹಾಸ್ಟೆಲ್, ಮನೆಯ ಆವರಣ, ತೋಟಗಳಲ್ಲಿ ಗಿಡ ನೆಟ್ಟಿರುವದಲ್ಲದೆ ಆ ಗಿಡಗಳ ಮಹತ್ವ, ಗಿಡಗಳನ್ನು ನೆಡುವ ಉದ್ದೇಶದ ಬಗ್ಗೆಯೂ ತಿಳಿಸಿದ್ದೀರಿ. ಜನರಲ್ಲಿ ಪರಿಸರ ಪ್ರಜ್ಞೆ., ಪರಿಸರದ ಬಗ್ಗೆ ಕಾಳಜಿ ಮೂಡಿಸುವ ನಮ್ಮ ಈ ಉದ್ದೇಶಕ್ಕೆ ಕೈ ಜೋಡಿಸಿದ ನಿಮಗೆ ಪ್ರೀತಿಯ ವಂದನೆಗಳು.

ಕೆಲವು ಮಕ್ಕಳು, ಪೋಷಕರು ನೆಟ್ಟ ಗಿಡಗಳ ಮುಂದೆ ಫೋಸ್ ಕೊಟ್ಟರೆ, ಇನ್ನೂ ಕೆಲವರು ಎಂದೋ ನೆಟ್ಟು ಬೆಳೆದ ಗಿಡಗಳ ಬುಡಗಳಡಿ ಕೈಯ್ಯನ್ನಿಟ್ಟು ಫೋಸ್ ಕೊಟ್ಟಿದ್ದೀರಾ !! ವಿಶೇಷವೆಂದರೆ ನಾವು ಆಗಸ್ಟ್ ೧೫ರಂದು ಗಿಡನೆಟ್ಟು ಆಚರಣೆ ಮಾಡಲು ತಿಳಿಸಿದ್ದರೂ ಅನೇಕ ಮಂದಿ ಆಗಸ್ಟ್ ೧೫ ಬರುವ ಮುಂಚೆಯೇ ಗಿಡನೆಟ್ಟು ಫೋಟೋ ಕಳುಹಿಸಿದ್ದಾರೆ. ಹೆಸರು, ವಿಳಾಸ, ಕಳುಹಿಸಲು ತಿಳಿಸಿದ್ದರೂ ಕೂಡಾ ಕೆಲವರು ಯಾವುದೇ ಮಾಹಿತಿ ಇಲ್ಲದೆ ಕೇವಲ ಹೆಸರು, ಫೋಟೋ ಮಾತ್ರ ಕಳುಹಿಸಿದ್ದಾರೆ. ಏನೇ ಇರಲಿ ನಿಮ್ಮ ಆಸಕ್ತಿ, ಪ್ರಯತ್ನ ಮೆಚ್ಚುವಂತಹುದು. ರಜಾ ಸಿಕ್ಕಿತೆಂದು ಮೊಬೈಲ್ ಹಿಡಿದು ಕೂರುವ ಬದಲಿಗೆ ಇಂತಹ ಪರಿಸರ ಕಾಳಜಿಯುಳ್ಳ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸಿದ್ದು ಸಂತೋಷದ ವಿಷಯ.

ಬಹುಮಾನ ವಿಜೇತರು

ಅಂದ ಹಾಗೆ ನಾವು ಕೇವಲ ಗಿಡ ನೆಡುವದಷ್ಟನ್ನೇ ಹೇಳಿರಲಿಲ್ಲ., ಹೆಚ್ಚು ಗಿಡ ನೆಟ್ಟವರಿಗೆ ಬಹುಮಾನ ಕೊಡುತ್ತೇವೆ ಎಂದೂ ಹೇಳಿದ್ದೆವು ಸುಮಾರು ನೂರಕ್ಕೂ ಹೆಚ್ಚು ಮಂದಿ ಚಿತ್ರಗಳನ್ನು ಕಳುಹಿಸಿಕೊಟ್ಟಿದ್ದು, ಈ ಪೈಕಿ ಮೂರ್ನಾಡು ಜ್ಞಾನಜ್ಯೋತಿ ಎಜುಕೇಶನ್ ಸೊಸೈಟಿಯ ೮ನೇ ತರಗತಿ ವಿದ್ಯಾರ್ಥಿನಿ ಗ್ರಂಥ ಡಿ. ಕೆ. ಅವರು ಅತಿ ಹೆಚ್ಚು ಅಂದರೆ, ೧೨ ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಬಹುಮಾನಕ್ಕೆ ಭಾಜನರಾಗಿದ್ದಾರೆ. ನಂತರದಲ್ಲಿ ಪೊನ್ನಂಪೇಟೆಯ ಸಿಐಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಐಚೆಟ್ಟಿರ ಕವನ್ ಕಾರ್ಯಪ್ಪ ೫ ಗಿಡಗಳನ್ನು ನೆಟ್ಟಿದ್ದರೆ, ಪೊನ್ನಂಪೇಟೆಯ ಮತ್ತೂರು ಗ್ರಾಮದ ಅಪೂರ್ವ ಜೆ.ಭಟ್ ೪ ಗಿಡಗಳನ್ನು ನೆಟ್ಟಿದ್ದಾರೆ. ಈ ಮೂವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಾ ಎಲ್ಲರ ಪರಿಸರ ಕಾಳಜಿ ಹೀಗೆಯೇ ಮುಂದುವರಿದು ನಿಮ್ಮಿಂದ ನಾಡಿಗೆ ಒಳಿತಾಗಲಿ ಎಂದು ಹಾರೈಸುತ್ತೇವೆ.

- ಜಿ. ಚಿದ್ವಿಲಾಸ್

ಸಂಪಾದಕ.

ನಾನು ಅಪ್ಪನೊಂದಿಗೆ ೧೦ ತೆಂಗಿನ ಗಿಡವನ್ನು ನಮ್ಮ ತೋಟದಲ್ಲಿ ನೆಟ್ಟಿರುವೆನು. ತೆಂಗಿನಮರವನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ಏಕೆಂದರೆ ಇದರ ಪ್ರತಿಯೊಂದು ಭಾಗವು ಎಳನೀರು, ಕಾಯಿ, ಗರಿ, ಕಾಂಡ, ನಾರು ಮಾನವನಿಗೆ ಅಂತ್ಯತ ಉಪಯುಕ್ತವಾಗಿದೆ. ಆಹಾರ ಔಷಧ ಧಾರ್ಮಿಕ ಕಾರ್ಯಗಳು ಹಾಗೂ ಕೈಗಾರಿಕೆಗಳಲ್ಲಿ ತೆಂಗಿನ ಮರದ ಕೊಡುಗೆ ಹಿರಿದಾಗಿದೆ.

-ಕುಡೆಕಲ್ಲು ಡಿಲನ್ಯ ಹರೀಶ್ ಕುಮಾರ್, ೬ನೇ ತರಗತಿ,

ಎಸ್. ಎಂ.ಎಸ್. ಶಾಲೆ, ಅರಮೇರಿಕೂವೆ ಗಿಡ : ಕೂವೆ ಗಿಡದ ಬೇರುಗಳನ್ನು ಆಹಾರವಾಗಿ ಬಳಸಲಾಗುತ್ತದೆ.

ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿ ನೀಡುತ್ತವೆ.

ಕೂವೆ ಗಿಡವನ್ನು ಔಷಧೀಯ ಸಸ್ಯವಾಗಿ ಬೆಳೆಸಲಾಗುತ್ತದೆ.

- ಅಪೂರ್ವ. ಜೆ .ಭಟ್

ಮತ್ತೂರು ಗ್ರಾಮ ಪೊನ್ನಂಪೇಟೆ

ಮೊ : ೯೪೮೦೩೭೧೪೦೧

ಮೊದಲನೆಯದಾಗಿ ನಾಡಿನ ಸಮಸ್ತ ಜನರಿಗೆ ಸ್ವಾತಂತ್ರೊö್ಯÃತ್ಸವದ ಹಾರ್ದಿಕ ಶುಭಾಶಯಗಳು. ನಾನು ೮೦ನೇ ಸ್ವಾತಂತ್ರö್ಯ ದಿನಾಚರಣೆಯ ಪ್ರಯುಕ್ತ ಕಿತ್ತಳೆಹಣ್ಣಿನ ಸಸಿಯನ್ನು ನೆಡುತ್ತಿದ್ದೇನೆ. ಗಿಡ ನೆಡುವುದರ ಪ್ರಯೋಜನಗಳು : ಶುದ್ದ ಗಾಳಿ, ಮರಗಳು ಛಿo೨ ಹೀರಿಕೊಂಡು ಆಮ್ಲಜನಕ ಕೊಡುತ್ತವೆ. ಬೇಸಿಗೆಯಲ್ಲಿ ವಾತಾವರಣ ವನ್ನು ತಂಪಾಗಿಡುತ್ತದೆ. ಬೇರುಗಳು ಮಣ್ಣು ಸವೆತ ತಡೆದು ಮಣ್ಣನ್ನು ಆರೋಗ್ಯಕರವಾಗಿಡುತ್ತದೆ. ಹಣ್ಣಿನ ಮರಗಳು, ತರಕಾರಿ, ಗಿಡಮೂಲಿಕೆಗಳಿಂದ ಆಹಾರ ಮತ್ತು ಹಣ ಸಿಗುತ್ತದೆ. ಅನೇಕ ಮರಗಳು ದಶಕಗಳವರೆಗೆ ಬದುಕಿ ಮುಂದಿನ ಪೀಳಿಗೆಗೆ ಸಹಾಯ ಮಾಡುತ್ತವೆ. ಹಸಿರು ಮನಸ್ಸಿಗೆ ನೆಮ್ಮದಿ ಕೊಡುತ್ತದೆ ಮತ್ತು ಸ್ಥಳವನ್ನು ಸುಂದರಗೊಳಿಸುತ್ತದೆ.

-ಪರಶಿವ ಎಸ್. ಪಿ., ೭ನೇ ತರಗತಿ,

ಪ್ರತಿಭಾ ಆಂಗ್ಲ ಮಾಧ್ಯಮ ಶಾಲೆ, ಬಾಳೆಲೆಮರವಿಲ್ಲದ ಊರು ಮರುಭೂಮಿ

ಮರ ಬೆಳೆಸುವುದು ಜೀವ ಉಳಿಸುವುದು.

ಗಿಡನೆಟ್ಟು ಬೆಳೆಸಿದರೆ ಅದು ಮರವಾಗಿ ಮುಂದಿನ ಪೀಳಿಗೆಗೆ ಜೀವ ಕೊಡುವುದು.

೮೦ನೇ ಸ್ವಾತಂತ್ರö್ಯ ದಿನಾಚರಣೆಯ ಅಂಗವಾಗಿ ನಾನು ಇಂದು ನಮ್ಮ ಮನೆಯ ಪಕ್ಕದಲ್ಲಿ ಮಾವಿನ ಹಣ್ಣಿನ ಗಿಡ ಹಾಗೂ ಹನುಮಾನ್ ಫಲ ಎರಡು ಗಿಡಗಳನ್ನು ನೆಟ್ಟಿರುವೆನು.

ಹನುಮಾನ್ ಫಲ ಇದು ಒಂದು ಔಷಧೀಯ ಗುಣ ಇರುವ ಹಣ್ಣು ಇದು ಆರೋಗ್ಯಕ್ಕೆ ಉತ್ತಮ. ಮಾವಿನ ಮರವು ಪಕ್ಷಿಗಳಿಗೆ ಹಾಗೂ ನಮಗೂ ಹಣ್ಣುಗಳನ್ನು ಕೊಡುತ್ತದೆ.

ಮರಗಳು ಪಕ್ಷಿಗಳಿಗೆ ಆಶ್ರಯವನ್ನು ಕೊಡುತ್ತದೆ. ಮಾವಿನ ಮರದಿಂದ ಪೂಜೆಗಳಿಗೆ ಉಪಯೋಗವಾಗುತ್ತದೆ. ಮರಗಳು ನಮ್ಮ ಏಕೈಕ ಸ್ನೇಹಿತ.

ಒಂದು ಮಗುವಿಗೆ ಒಂದು ಮರ ಎಂಬAತೆ ಪ್ರತಿಯೊಬ್ಬರೂ ಗಿಡನೆಟ್ಟು ಈ ಗಿಡಗಳಿಗೆ ಉತ್ತಮ ರೀತಿಯಿಂದ ನೀರು ಹಾಗೂ ಗೊಬ್ಬರ ಹಾಕಿ ಹೆಮ್ಮರವಾಗಿಸೋಣ. ನಮಗೂ ಹಾಗೂ ಮುಂದಿನ ಪೀಳಿಗೆಗೆ ಇದು ಉಪಯುಕ್ತವಾಗಲಿ.

-ಪ್ರಜ್ವಲ್ ಮಂದಣ್ಣ, ಹುದಿಕೇರಿ.