ಸೋಮವಾರಪೇಟೆ, ಆ. ೧೮: ಇಲ್ಲಿನ ಸಾರ್ವಜನಿಕ ಶ್ರೀ ಗೌರಿ ಗಣೇಶ ಉತ್ಸವ ಸಮಿತಿ ಸಭೆ ಪಟ್ಟಣದ ಪತ್ರಿಕಾಭವನದಲ್ಲಿ ಸಮಿತಿ ಅಧ್ಯಕ್ಷ ಕೆ.ಎಸ್. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ಸಾಲಿನ ವಾರ್ಷಿಕ ವರದಿ ವಾಚನದ ನಂತರ ಈ ಸಾಲಿನ ಉತ್ಸವ ಆಚರಣೆ ಸಂಬAಧ ಚರ್ಚೆ ನಡೆಯಿತು. ನೂತನ ಸಮಿತಿ ರಚಿಸುವ ಬಗ್ಗೆ ನಡೆದ ಚರ್ಚೆಯಲ್ಲಿ ಅಧ್ಯಕ್ಷರನ್ನಾಗಿ ಕೆ.ಎಸ್. ಪ್ರಕಾಶ್ ಅವರನ್ನೇ ಮುಂದುವರೆಸುವ ಬಗ್ಗೆ ತೀರ್ಮಾನಿಸಲಾಯಿತು. ಉಪಾಧ್ಯಕ್ಷರಾಗಿ ರಾಜೀವ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ. ಮೋಹನ್ ಕುಮಾರ್, ಖಜಾಂಚಿಯಾಗಿ ಕೆ.ಎ. ಸಾಗರ್, ಸಹ ಕಾರ್ಯದರ್ಶಿಯಾಗಿ ಕಿರಣ್ ಹಾಗೂ ಗೌರವಾಧ್ಯಕ್ಷರಾಗಿ ದರ್ಶನ್ ಜೋಯಪ್ಪ ನೇಮಕಗೊಂಡರು.