ಮಡಿಕೇರಿ: ೮೦ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಸಂಪಾಜೆ ಬಿಜೆಪಿ ಶಕ್ತಿ ಕೇಂದ್ರದಿAದ ಕೊಯನಾಡಿನಿಂದ ಸಂಪಾಜೆ ಸೊಸೈಟಿ ವರೆಗೆ ತಿರಂಗಾ ಯಾತ್ರೆ ಬೈಕ್ ಜಾಥಾ ಆಯೋಜಿಸಲಾಗಿತ್ತು.

ಶಕ್ತಿ ಕೇಂದ್ರದ ಅಧ್ಯಕ್ಷರಾದ ಉದಯ ಹನಿಯಡ್ಕ ಕೊಯನಾಡಿನಲ್ಲಿ ಬೈಕ್ ಜಾಥಾಕ್ಕೆ ಚಾಲನೆ ನೀಡಿ ದರು. ಚೆಂಬು ಬಿಜೆಪಿ ಶಕ್ತಿ ಕೇಂದ್ರದಿAದ ಕೂಡಡ್ಕ ದಿಂದ ಬಾಲಂಬಿ ಸೊಸೈಟಿ ವರೆಗೆ ತಿರಂಗಾ ಯಾತ್ರೆ ಬೈಕ್ ಜಾಥಾ ನಡೆಯಿತು. ಶಕ್ತಿ ಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ ಕೂಡಡ್ಕದಲ್ಲಿ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.

ಸಂಪಾಜೆಯ ಆದರ್ಶ ಫ್ರೆಂಡ್ಸ್ ಮತ್ತು ಬಾಲಂಬಿಯ ಯುವಕೇಸರಿ ಬಳಗ ಮತ್ತು ಯುವಮೋರ್ಚಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.