ಪೊನ್ನಂಪೇಟೆ, ಆ. ೧೮: ವಿಶ್ವ ಮಾನವೀಯತೆ ದಿನಾಚರಣೆಯ ಅಂಗವಾಗಿ ಪ್ರತಿಷ್ಠಿತ ರಾಷ್ಟಿçÃಯ ಮಾನವ ಶ್ರೇಷ್ಠತಾ ಪ್ರಶಸ್ತಿ-೨೦೨೬ಗೆ ಆಯ್ಕೆಗೊಂಡಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರನ್ನು ಕೆ.ಎಂ.ಎ. ವತಿಯಿಂದ ಸನ್ಮಾನಿಸಲಾಯಿತು. ಕೆ.ಎಂ.ಎ. ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು ಅಧ್ಯಕ್ಷತೆಯಲ್ಲಿ ವೀರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯದ ಪರವಾಗಿ ಸಂಸ್ಥೆ ವತಿಯಿಂದ ಆಡಳಿತ ಮಂಡಳಿ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಕೆ.ಎಂ.ಎ. ಕೋಶಾಧಿಕಾರಿ ಹರಿಶ್ಚಂದ್ರAಡ ಎ. ಹಂಸ, ಕೊಡವ ಮುಸ್ಲಿಂ ಅಸೋಸಿಯೇಷನ್ಗೆ ಕಳೆದ ೧೮ ವರ್ಷಗಳಿಂದ ಸಮರ್ಥವಾದ ನೇತೃತ್ವ ನೀಡಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅಧ್ಯಕ್ಷರಾದ ಸೂಫಿ ಹಾಜಿ ಅವರು ರಾಷ್ಟಿçÃಯ ಮಾನವ ಶ್ರೇಷ್ಠತಾ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕೆ.ಎಂ.ಎ. ಸಂಸ್ಥೆಗೂ ಸಂದ ಗೌರವವಾಗಿದೆ ಎಂದರು.
ಅಕ್ಕಳತAಡ ಎಸ್. ಮೊಯ್ದು ಮಾತನಾಡಿ, ಸೂಫಿ ಹಾಜಿಯವರ ಸ್ವಾರ್ಥರಹಿತ ಮತ್ತು ನಿಷ್ಕಳಂಕವಾದ ಸಮಾಜ ಸೇವೆ ಸಮಾಜಕ್ಕೆ ಮಾದರಿಯಾದದ್ದು, ಜಾತಿ ಧರ್ಮದ ಭೇದವಿಲ್ಲದೆ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇವರು ತೋರುವ ಕಾಳಜಿ ನಿಜಕ್ಕೂ ಪ್ರಶಂಶನೀಯ ಎಂದರು. ಸೂಫಿ ಹಾಜಿ ಮಾತನಾಡಿ, ಚಿಕ್ಕಂದಿನಿAದಲೇ ಅನುಭವಿಸಿದ ಬಡತನದ ಬೇಗೆಯೆ ಸಮಾಜಮುಖಿ ಕಾರ್ಯಗಳಿಗೆ ಸ್ಪೂರ್ತಿಯಾಯಿತು. ಬಡತನದ ಕಠಿಣ ಪರಿಸ್ಥಿತಿ ಮತ್ತು ನೋವುಗಳೇ ಒಬ್ಬ ವ್ಯಕ್ತಿಯನ್ನು ಸಮಾಜ ಸೇವೆಗೆ ಪ್ರೇರೇಪಿಸುವ ಪ್ರಮುಖ ಶಕ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಮಂಡೇAಡ ಎ. ಮೊಯ್ದು, ಕುಪ್ಪೋಡಂಡ ಅಬ್ದುಲ್ ರಶೀದ್, ಕೋಳುಮಂಡ ರಫೀಕ್ ಮುಂತಾದವರು ಮಾತನಾಡಿದರು. ಸಂಸ್ಥೆಯ ಪದಾಧಿಕಾರಿಗಳಾದ ಪುದಿಯತ್ತಂಡ ಎ. ಷಂಶುದ್ದೀನ್, ಪೊಯಕೆರ ಎಸ್. ರಫೀಕ್, ಪುದಿಯಾಣೆರ ಹನೀಫ್, ಪುಡಿಯಂಡ ಹನೀಫ್, ದುದ್ದಿಯಂಡ ಹೆಚ್. ಮೊಯ್ದು, ಆಲೀರ ಅಬ್ದುಲ್ ಲತೀಫ್, ಕುಂಡAಡ ರಜ್ಹಾಕ್, ಪರವಂಡ ಸಿರಾಜ್ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿದರು.