ಕೂಡಿಗೆ, ಆ. ೧೭: ಹಾರಂಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಕಳೆದ ೧೫ ದಿನಗಳಿಂದ ಹೆಚ್ಚುವರಿಯಾದ ನೀರನ್ನು ನದಿಗೆ ಇಲಾಖೆಯ ನಿಯಮಾನುಸಾರವಾಗಿ ಹರಿಸಲಾಗುತ್ತಿದೆ. ಇದರ ಜೊತೆಯಲ್ಲಿ ಅಣೆಕಟ್ಟೆಯ ನಾಲೆಯ ಮುಖ್ಯ ಗೇಟ್‌ಗಳ ಮೂಲಕ ಸೋರಿಕೆಯ ನೀರು ನಾಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ನಾಟಿ ಕಾರ್ಯವನ್ನು ಆರಂಭಿಸಿದ್ದಾರೆ.

ವರ್ಷಂಪ್ರತಿಯAತೆ ಅಣೆಕಟ್ಟೆಯ ಸಮೀಪದ ಒಂದರಿAದ ೬ನೇ ತೂಬಿನವರಗಿನ ಅಚ್ಚುಕಟ್ಟು ಪ್ರದೇಶವು ಜೊಗ್ಗು ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಭತ್ತದ ಬೆಳೆಯನ್ನು ಬಿಟ್ಟರೆ ಬೇರೆ ಬೆಳೆಯನ್ನು ಬೆಳೆಯಲು ಸಾಧ್ಯವಾಗುವುದಿಲ್ಲ.

ಈಗಾಗಲೇ ಸಣ್ಣ ಪ್ರಮಾಣದ ಮಳೆಯನ್ನೇ ಅವಲಂಭಿಸಿ ನೂರಾರು ರೈತರು ಭತ್ತದ ಸಸಿಮಡಿಗಳನ್ನು ಮಾಡಿಕೊಂಡು ಜಮೀನಿನ ಸಿದ್ಧತೆಯಲ್ಲಿ ತೊಡಗಿದ್ದ ರೈತರು ಇದೀಗ ಸಣ್ಣ ಪ್ರಮಾಣದ ನೀರು ಹಾರಂಗಿ ಮುಖ್ಯ ನಾಲೆಯಲ್ಲಿ ಹರಿದ ಪರಿಣಾಮವಾಗಿ ಭತ್ತದ ನಾಟಿಯಲ್ಲಿ ತೊಡಗಿದ್ದಾರೆೆ.

ಹುದುಗೂರು, ಮದಲಾಪುರ, ಕೂಡಿಗೆ, ಹೆಬ್ಬಾಲೆ, ಶಿರಂಗಾಲ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ ಗ್ರಾಮಗಳಲ್ಲಿ ಆರಂಭಗೊAಡಿದೆ. - ಕೆ.ಕೆ. ನಾಗರಾಜಶೆಟ್ಟಿ.