ಗುಡ್ಡೆಹೊಸೂರು, ಆ. ೧೭: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಶ್ರೀ ಚೌಡೇಶ್ವರಿ ಜೀರ್ಣೋದ್ಧಾರ ಸಮಿತಿ ವತಿಯಿಂದ ನಡೆಯುತ್ತಿರುವ ದೇವಸ್ಥಾನದ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ವೀರೇಂದ್ರ ಹೆಗಡೆ ಅವರಿಂದ ರೂಪಾಯಿ ಒಂದುವರೆ ಲಕ್ಷವನ್ನು ಡಿಡಿ ರೂಪದಲ್ಲಿ ನೀಡಲಾಯಿತು. ಈ ಸಂದರ್ಭ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರು, ಕಾವೇರಿ ಆರತಿ ಬಳಗದ ಅಧ್ಯಕ್ಷರು, ಕುಶಾಲನಗರ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಚಂದ್ರಮೋಹನ್, ಈ ಭಾಗದ ಸಂಸ್ಥೆಯ ಮೇಲ್ವಿಚಾರಕಿ ಪವಿತ್ರಾಕ್ಷಿ, ಸೇವಾ ಪ್ರತಿನಿಧಿ ರೋಹಿಣಿ, ದೇವಸ್ಥಾನ ಟ್ರಸ್ಟಿನ ಅಧ್ಯಕ್ಷ ಬಿ.ಬಿ. ಶಿವಕುಮಾರ್, ಉಪಾಧ್ಯಕ್ಷ ಕೆ.ಕೆ. ಚಿದಾನಂದ. ಕಾರ್ಯದರ್ಶಿ ಕೆ.ಕೆ. ತಿಮ್ಮಯ್ಯ, ಸಹ ಕಾರ್ಯದರ್ಶಿ ಅಂಬಾಡಿ ರವಿ, ಖಜಾಂಚಿ ಬಾಲಕೃಷ್ಣ ಹಾಗೂ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.