ಮಡಿಕೇರಿ ಆ. ೧೭: ಭಾರತ ಸರ್ಕಾರದ ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಡಿಯಲ್ಲಿ ಬರುವ ಮಂಗಳೂರಿನ ‘ಶಾಖಾ ಎಂಎಸ್‌ಎAಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ’ಯು ನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗಾಗಿ ‘ಬ್ಲೌಸ್ ಹೊಲಿಗೆ’ ಕುರಿತು ಆರು ವಾರಗಳ ಉಚಿತ ‘ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ’ ಆಯೋಜಿಸಿದ್ದು, ಆಗಸ್ಟ್ ೩೧ ರಿಂದ ಆರಂಭಗೊಳ್ಳಲಿದೆ. ಭಾಗವಹಿಸುವವರಿಗೆ ಬ್ಲೌಸ್ ಹೊಲಿಗೆಯ ಪ್ರಾಯೋಗಿಕ ಕೌಶಲ್ಯಗಳನ್ನು ಒದಗಿಸುವ ಹಾಗೂ ಉದ್ಯಮಶೀಲತೆ, ವ್ಯಾಪಾರ ಅವಕಾಶಗಳು, ಸರ್ಕಾರಿ ಯೋಜನೆಗಳು, ಉದ್ಯಮ್ ನೋಂದಣಿ, ಆರ್ಥಿಕ ನೆರವು ಮತ್ತು ಮಾರುಕಟ್ಟೆ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.

ಸ್ವಯಂ ಉದ್ಯೋಗ ಮತ್ತು ಆದಾಯ ಗಳಿಕೆಯ ಚಟುವಟಿಕೆಯಾಗಿ ಹೊಲಿಗೆ ವೃತ್ತಿಯನ್ನು ಕೈಗೊಳ್ಳಲು ಬಯಸುವವರು, ಹಾಗೂ ತಮ್ಮ ಹೊಲಿಗೆ ಉದ್ಯಮವನ್ನು ಪ್ರಾರಂಭಿಸಲು ಅಥವಾ ಬಲಪಡಿಸಲು ಆಸಕ್ತಿ ಹೊಂದಿರುವ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯುವಂತೆ ಕೋರಿದೆ.

ಆಸಕ್ತರು ಕಾರ್ಯಕ್ರಮದ ನೋಂದಣಿಗಾಗಿ ಕಾರ್ಯಕ್ರಮ ಸಂಯೋಜಕರಾದ ಸುಮನ್ ಎಸ್.ರಾಜು (ಸಹಾಯಕ ನಿರ್ದೇಶಕರು) ಅವರನ್ನು ೯೪೪೮೩೮೩೭೨೦ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.