ಮಡಿಕೇರಿ, ಆ. ೧೭: ನಾಗರ ಪಂಚಮಿ ಹಬ್ಬವನ್ನು ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಪ್ರಯುಕ್ತ ಮನೆಗಳಲ್ಲಿ, ದೇವಾಲಯಗಳಲ್ಲಿ ನಾಗನಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ನಗರದ ಓಂಕಾರೇಶ್ವರ ದೇವಾಲಯ ಬಳಿಯಿರುವ ಅಶ್ವತ್ಥ ಕಟ್ಟೆಯಲ್ಲಿ ವ್ಯವಸ್ಥಾಪನಾ ಸಮಿತಿ ವತಿಯಿಂದ ಕ್ಷೀರಾಭಿಷೇಕ, ಎಳನೀರು ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆದವು. ದಂಡಿನ ಮಾರಿಯಮ್ಮ ದೇವಾಲಯದಲ್ಲೂ ಪಂಚಾಮೃತ ಅಭಿಷೇಕ ನಾಗತಂಬಿಲ ಇತ್ಯಾದಿ ಪೂಜೆಗಳು ನಡೆದವು. ಮುತ್ತಪ್ಪ ದೇವಾಲಯದಲ್ಲೂ ನಾಗರ ಪಂಚಮಿ ಪ್ರಯುಕ್ತ ಪೂಜಾ ಕಾರ್ಯಗಳು ನೆರವೇರಿದವು.ಹೊದ್ದೂರು ಗ್ರಾಮದಲ್ಲಿ ನೆಲೆನಿಂತಿರುವ ನಾಗ ಬನದಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಪ್ರಾತಃಕಾಲ ಅರ್ಚಕ ಜಯರಾಜ್ ಭಟ್ಟರ ಸಮ್ಮುಖದಲ್ಲಿ ಎಳನೀರು ಅಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ನಂತರ ಅಲಂಕಾರ ಪೂಜೆ, ಮಂಗಳಾರತಿ ನಡೆಯಿತು. ಪ್ರಮುಖರಾದ ಕೂಡಂಡ ರಾಜೇಂದ್ರ ಅಯ್ಯಮ್ಮ, ಪೂಣಚ್ಚ, ರಂಜನ್ ಮುಂತಾದವರು ಪಾಲ್ಗೊಂಡಿದ್ದರು.ಮಡಿಕೇರಿ : ಮಡಿಕೇರಿಯ ಕನ್ನಂಡಬಾಣೆಯಲ್ಲಿರುವ ದೃಷ್ಠಿ ಗಣಪತಿ ದೇವಸ್ಥಾನದಲ್ಲಿ ನಾಗ ರಾಣಿ-ನಾಗ ರಾಜ-ನಾಗ, ಕನ್ನಿಕೆ ದೇವರಿಗೆ ಕ್ಷೀರಾಭಿಷೇಕ ಎಳನೀರು ಅಭಿಷೇಕ ತಾಂಬಿಲ ಪೂಜೆ ಹಾಗೂ ಹೂವಿನ ಅಲಂಕಾರ ಸೇವೆ ನಡೆಸಲಾಯಿತು. ನೆರೆದಿದ್ದ ಭಕ್ತರಿಗೆ ತೀರ್ಥ ಮತ್ತು ಪ್ರಸಾದ ವಿತರಿಸಲಾಯಿತು.
ಗುಡ್ಡೆಹೊಸೂರು: ಸಮೀಪದ ಬೆಟ್ಟಗೇರಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದ ನಾಗರಬನದಲ್ಲಿ ನಾಗರಪಂಚಮಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಈ ಪೂಜಾ ಕಾರ್ಯವನ್ನು ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅರ್ಚಕರಾದ ಸೋಮಶೇಖರ್ ಭಟ್ ಮತ್ತು ಅನಂತಪದ್ಮನಾಭ ಭಟ್ ನೆರವೇರಿಸಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ. ಬಿ ಶಿವಕುಮಾರ್ ಮತ್ತು ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.ವೀರಾಜಪೇಟೆ: ಸಮೀಪದ ಹೆಗ್ಗಳ ಗ್ರಾಮದ ಪಾಲ್ಟ್ ಮಕ್ಕಿಯಲ್ಲಿರುವ ನಾಗಬನದಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಯಿತು.
ನಾಗರ ಪಂಚಮಿ ಪ್ರಯುಕ್ತ ಬೆಳಿಗ್ಗೆಯಿಂದಲೇ ಶ್ರೀ ನಾಗ ದೇವರಿಗೆ ವಿವಿಧ ಅಭಿಷೇಕ ಅಲಂಕಾರ ಪೂಜೆ, ನಾಗ ತಂಬಿಲ ಸೇವೆ ನಡೆಯಿತು. ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಿತು. ನಾಗರ ಪಂಚಮಿ ಹಬ್ಬದ ಪ್ರಯುಕ್ತ ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕರೆಯ ಶ್ರೀ ಮಹಾದೇವರ ದೇವಾಲಯ ಸಮಿತಿಯ ವತಿಯಿಂದ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.ಕೂಡಿಗೆ: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನಾಗರ ಪಂಚಮಿ ಹಬ್ಬದ ಆಚರಣೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವರಿಗೆ ವಿವಿಧ ಅಭಿಷೇಕ, ಹೂವಿನಿಂದ ಅಲಂಕಾರ ಸೇರಿದಂತೆ ಪೂಜಾ ಕಾರ್ಯಗಳು ನಡೆದವು.ವೀರಾಜಪೇಟೆ: ಸಮೀಪದ ಬೇಟೋಳಿ ಗ್ರಾಮದಲ್ಲಿರುವ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು.
ದೇವಸ್ಥಾನದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ವನದುರ್ಗೆ ದೇವರುಗಳಿಗೆ ಪೂಜೆ ಸಲ್ಲಿಸಿ, ಶ್ರೀ ನಾಗನ ಗುಡಿಯಲ್ಲಿ ನಾಗ ದೇವರಿಗೆ ಪ್ರಾರ್ಥನೆ ಹಾಗೂ ಹಾಲಿನ ಅಭಿಷೇಕ, ಪುಷ್ಪಾರ್ಚನೆ, ಕುಂಕುಮಾರ್ಚನೆ ಮಾಡಿ ನಾಗ ತಂಬಿಲವನ್ನು ನೆರವೇರಿಸಲಾಯಿತು. ನೆರೆದ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಜರುಗಿತು. ವೀರಾಜಪೇಟೆ: ವೀರಾಜಪೇ ಟೆಯ ಚಿಕ್ಕಪೇಟೆ ಬಳಿ ಇರುವ ಶ್ರೀ ಮಹಾವಿಷ್ಣು ದೇವಾಲಯದ ಆವರಣದಲ್ಲಿರುವ ಶ್ರೀ ನಾಗ ದೇವರ ಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ಪೂಜಾ ಕೈಂಕರ್ಯಗಳು ಭಕ್ತಿ-ಶ್ರದ್ಧೆಯಿಂದ ನೆರವೇರಿದವು.
ಪಂಚಾಮೃತ ಅಭಿಷೇಕ, ಕ್ಷೀರ ಅಭಿಷೇಕ, ಎಳನೀರು ಅಭಿಷೇಕ ಹಾಗೂ ವಿಶೇಷ ನಾಗತಂಬಿಲ ಪೂಜಾ ಸೇವೆಗಳು ಜರುಗಿದವು. ತದನಂತರ ಮಧ್ಯಾಹ್ನ ಶ್ರೀ ಮಹಾವಿಷ್ಣುವಿಗೆ ಮಹಾಪೂಜೆ ಮತ್ತು ಮಹಾಮಂಗಳಾರತಿ ನಡೆಯಿತು.
ವೀರಾಜಪೇಟೆಯ ಶ್ರೀ ಮಾರಿಯಮ್ಮ ದೇವಾಲಯ, ಮುನೀಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಮಡಿಕೇರಿ ಸಮೀಪದ ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿರುವ ನಾಗ ದೇವರಿಗೆ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಗದೇವರಿಗೆ ಎಳನೀರು, ಹಾಲು, ಮೊಸರು, ಜೇನು, ತುಪ್ಪ, ಸಕ್ಕರೆ ಅಭಿಷೇಕ ಮಾಡಿ ಪೂಜಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಹಾಗೂ ಗುಳಿಗ ದೈವಕ್ಕೂ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಮಡಿಕೇರಿಯ ದೃಷ್ಟಿ ಗಣಪತಿ ದೇವಾಲಯದ ಅರ್ಚಕ ಶ್ರೀ ಶೈಲ ಶಾಸ್ತಿçಗಳು ಪೂಜಾ ಕಾರ್ಯ ನೆರವೇರಿಸಿದರು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಕಟ್ಟೆಮನೆ ಗಣೇಶ್, ಪದಾಧಿಕಾರಿಗಳಾದ ಧರ್ಮರಾಜ, ಕೋಡಿಯಡ್ಕ ರಾಜು, ರವಿ, ಬಿ.ಎಸ್. ತಿಮ್ಮಪ್ಪ, ನಾಗೇಶ, ಕುಡೆಕಲ್ ಸಂತೋಷ್, ಬಾಳೆಕಜೆ ಕೇಶವ, ಚಂದಪ್ಪ, ಹೊನ್ನಮ್ಮ, ವತ್ಸಲ, ತಂಗಮಣಿ, ಕುದುಪಜೆ ಹೇಮಲತಾ, ಪೂವಮ್ಮ ಅರ್ಚಕ ಗಂಗಾಧರ, ಪೂಜಾರಿ ಕುದುಪಜೆ ವಿಕಾಸ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಡಿಕೇರಿ: ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವರ ನಾಗಬನದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಶ್ರೀ ನಾಗದೇವರಿಗೆ ಎಳನೀರಾಭಿಷೇಕ, ಕ್ಷೀರಾಭಿಷೇಕ, ಸಂಕಲ್ಪ ಪೂಜೆ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ ನೆರವೇರಿದವು. ಪ್ರಸಾದ ವಿತರಣೆ, ಪಾಯಸ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಸಮಿತಿಯ ಅಧ್ಯಕ್ಷ ಸುಧೀರ್, ಪ್ರಮುಖರಾದ ಉಣ್ಣಿಕೃಷ್ಣ ಎನ್ ವಿ, ಸುಬ್ರಮಣಿ ಕೆ.ವಿ, ರಮೇಶ್ ಕೆ ಎಸ್, ರೆಜಿ, ಸುಕುಮಾರ, ವಿನೋದ್, ಮೋಹನ್ ಕೆ.ಕೆ, ವಿಜಯ ಕುಮಾರ್, ಸುಬ್ರಮಣಿ ಪಿ.ಜಿ ಹಾಗೂ ಸಮಿತಿ ಸದಸ್ಯರು ಮತ್ತು ಶ್ರೀ ಮುತ್ತಪ್ಪ ಮಹಿಳಾ ವೇದಿಕೆಯ ಪ್ರಮುಖರು ಪಾಲ್ಗೊಂಡಿದ್ದರು.