ಮಡಿಕೇರಿ, ಆ. ೧೭: ಮೂಲತಃ ಕೊಡಗಿನವರಾದ ಮುಕ್ಕಾಟಿರ (ಕುಂಜಿಲಗೇರಿ) ವಂಶಿಕ ಅವರು ಐಸ್ ಸ್ಕೇಟಿಂಗ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಗೊಂಡಿದ್ದಾರೆ. ಉತ್ತರಾಖಂಡದಲ್ಲಿ ನಡೆಯುತ್ತಿರುವ ಏಷ್ಯನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ಟ್ರೋಫಿಯಲ್ಲಿ ಇವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ತಾ.೧೭ ರಿಂದ ಕ್ರೀಡಾಕೂಟ ಪ್ರಾರಂಭವಾಗಿದ್ದು ತಾ.೨೦ ರವರೆಗೆ ನಡೆಯಲಿದೆ.
ಬೆಂಗಳೂರಿನಲ್ಲಿ ಪದವಿ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಂಶಿಕ ಅವರು ೨೦೨೫ ಹಾಗೂ ೨೦೨೬ ಐಸ್ ಸ್ಕೇಟಿಂಗ್ ನ್ಯಾಷನಲ್ಸ್ ಕ್ರೀಡೆಯಲ್ಲಿಯೂ ಪಾಲ್ಗೊಂಡಿದ್ದರು. ಇವರು ಮುಕ್ಕಾಟಿರ ವಿಜಯ್ ಹಾಗೂ ಪದ್ಮಾವತಿ(ತಾಮನೆ - ಬೊಪ್ಪಂಡ) ದಂಪತಿಯ ಪುತ್ರಿ.