ಕೆ.ಎಂ ಇಸ್ಮಾಯಿಲ್ ಕಂಡಕರೆ

ಮಡಿಕೇರಿ, ಆ. ೧೭: ಚುನಾವಣಾ ಆಯೋಗ ರಾಜ್ಯಾದ್ಯಂತ ಜೂನ್ ೩೦ ರಿಂದ ಆಗಸ್ಟ್ ೧೭ರವರೆಗೆ ನಡೆಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಮೊದಲ ಹಂತ ತಾ. ೧೭ಕ್ಕೆ ಮುಕ್ತಾಯಗೊಂಡಿದ್ದು, ತಾ. ೨೪ರಂದು ಮತದಾರರ ಕರಡು ಪಟ್ಟಿ ಪ್ರಕಟಗೊಳ್ಳಲಿದೆ. ಜಿಲ್ಲೆಯಲ್ಲಿ ಜೂನ್ ೧೬ ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ೪,೬೮,೬೫೭ ಮತದಾರರ ಎನ್ಯುಮರೇಶನ್ ಫಾರ್ಮ್ ಪ್ರಿಂಟ್ ಆಗಿತ್ತು. ಆಗಸ್ಟ್ ೧೭ರವರೆಗೆ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಸೇರಿ ೪,೦೫,೮೩೩ ಮತದಾರರ ಎನ್ಯುಮರೇಶನ್ ಫಾರ್ಮ್ ಅಪ್ಲೋಡ್ ಆಗಿದ್ದು, ಶೇಕಡ ೮೬.೫೯ರಷ್ಟು ಎಸ್‌ಐಆರ್ ಪ್ರಗತಿ ಕಂಡಿದೆ.

ಎನ್ಯುಮರೇಶನ್ ಫಾರ್ಮ್ ಅಪ್ಲೋಡ್ ಆಗಿರುವ ಮತದಾರರ ಹೆಸರು ಆಗಸ್ಟ್ ೨೪ರಂದು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟಗೊಳ್ಳಲಿದೆ.

ಜಿಲ್ಲೆಯಲ್ಲಿ ಂSಆಆಔ (ಗೈರು, ಸ್ಥಳಾಂತರ, ಸಾವು, ನಕಲಿ, ಇತರೆ) ಪಟ್ಟಿಯಲ್ಲಿ ೬೨,೮೨೪ ಮತದಾರರನ್ನು ಸೇರಿಸಲಾಗಿದೆ. ಇದರಲ್ಲಿ ಗೈರು ಮತದಾರರು ೯,೫೮೩, ಶಾಶ್ವತ ಸ್ಥಳಾಂತರ ೩೩,೫೫೫, ಮರಣ ೧೩,೭೩೧ ಎರಡು ಕಡೆ ಹೆಸರು ನೋಂದಾಯಿಸಿರುವ ಮತದಾರರು ೬,೦೩೯ ಹಾಗೂ ಇತರೆ ೧೧೬ ಮತದಾರರನ್ನು ಸೇರಿ ಶೇಕಡ ೧೩.೪೫ ರಷ್ಟು ಮತದಾರರು ಇದ್ದಾರೆ.

ತಪ್ಪಾಗಿ ಂSಆಆಔ ಪಟ್ಟಿಯಲ್ಲಿ ಸೇರಿಸಲಾಗಿದ್ದ ಅರ್ಹ ಮತದಾರರಿಗೆ ಚುನಾವಣಾ ಆಯೋಗ ರೋಲ್ ಬ್ಯಾಕ್ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಆದರೆ ಬಹುತೇಕ ಗ್ರಾಮೀಣ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಭಾಗದಲ್ಲಿರುವ ಮತದಾರರಿಗೆ ರೋಲ್ ಬ್ಯಾಕ್ ಬಗ್ಗೆ ಮಾಹಿತಿಯೇ ಇಲ್ಲ. ಚುನಾವಣಾ ಆಯೋಗ ರೋಲ್ ಬ್ಯಾಕ್ ಮಾಡಿಕೊಳ್ಳಲು ಅವಕಾಶ ನೀಡಿದ ಬಳಿಕ ಜಿಲ್ಲೆಯಲ್ಲಿ ಜುಲೈ ೩೦ ರಿಂದ ಆಗಸ್ಟ್ ೧೭ರವರೆಗೆ ೨,೧೩೩ ಮತದಾರರು ರೋಲ್ ಬ್ಯಾಕ್ ಮಾಡಿಕೊಂಡಿದ್ದಾರೆ.

೩೩,೫೫೫ ಮತದಾರರು ಸ್ಥಳಾಂತರ

ಕೊಡಗು ಜಿಲ್ಲೆಯಲ್ಲಿ ೬೨,೮೨೪ ಮತದಾರರ ಹೆಸರು ಕರಡು ಪಟ್ಟಿಯಿಂದ ಡಿಲೀಟ್ ಆಗಲಿದ್ದು,ಇದರಲ್ಲಿ ೩೩,೫೫೫ ಮತದಾರರನ್ನು ಶಾಶ್ವತ ಸ್ಥಳಾಂತರ ಎಂದು ಗುರುತಿಸಲಾಗಿದೆ. ಈ ಮಾಹಿತಿಯ ಬಗ್ಗೆ ಈಗಾಗಲೇ ಹಲವು ಅನುಮಾನಗಳು ವ್ಯಕ್ತವಾಗಿವೆ. ಂSಆಆಔ ಪಟ್ಟಿಯಿಂದ ಇದುವರೆಗೆ ೨,೧೩೩ ಮತದಾರರು ರೋಲ್ ಬ್ಯಾಕ್ ಮಾಡಿಕೊಂಡಿದ್ದಾರೆ. ಆಗಸ್ಟ್ ೧೭ರಂದು ಕೂಡ ೧೮೪ ಮತದಾರರು ರೋಲ್ ಬ್ಯಾಕ್ ಮಾಡಿಕೊಂಡು ಎನ್ಯುಮರೇಶನ್ ಫಾರ್ಮ್ ಭರ್ತಿಮಾಡಿ ನೀಡಿದ್ದಾರೆ. ಕೆಲ ಮತಗಟ್ಟೆ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೆ ಅರ್ಹ ಮತದಾರರನ್ನು ಕೂಡ ಂSಆಆಔ ಪಟ್ಟಿಗೆ ಜಿಲ್ಲೆಯಲ್ಲಿ ಸೇರ್ಪಡೆಗೊಳಿಸಿದ್ದಾರೆ. ಆಗಸ್ಟ್ ೨೪ ರಂದು ಪ್ರಕಟಗೊಳ್ಳಲಿರುವ ಕರಡು ಮತದಾರರ ಪಟ್ಟಿಯಿಂದ ಹೆಸರು ಹೊರಗುಳಿದಲ್ಲಿ ಮತದಾರರು, ದಾಖಲೆಗಳನ್ನು ಸಲ್ಲಿಸಿ ಹೊಸದಾಗಿ ಸೇರ್ಪಡೆ ಮಾಡಬೇಕಾದ ಅನಿವಾರ್ಯತೆ ಇದೆ.

ಲಾಜಿಕಲ್ ಡಿಸ್ಕಿçಪೆನ್ಸಿ - ಗೊಂದಲಕ್ಕೀಡಾದ ಮತದಾರರು!

ಲಾಜಿಕಲ್ ಡಿಸ್ಕಿçಪೆನ್ಸಿ ಎಂದು ಕೆಲ ಮತದಾರರನ್ನು ಪ್ರತ್ಯೇಕಿಸಲಾಗಿದೆ. ಆದರೆ ಲಾಜಿಕಲ್ ಡಿಸ್ಕ್ರಿಪೆನ್ಸಿ ಬಗ್ಗೆ ಬಿಎಲ್‌ಓ ಆ್ಯಪ್‌ನಲ್ಲಿ ಮಾಹಿತಿ ಇದೆಯೇ ಎಂಬ ಬಗ್ಗೆ ಕೆಲ ಬಿಎಲ್‌ಓಗಳಿಗೆ ಗೊತ್ತೇ ಇಲ್ಲ. ಕೆಲವು ಭಾಗಗಳಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಇರುವ ಮತದಾರರಿಗೆ ಮಾಹಿತಿ ನೀಡಿ ಬಿಎಲ್‌ಓಗಳು ತಾವೇ ಖುದ್ದಾಗಿ ಸರಿಪಡಿಸಿದ್ದಾರೆ. ಆದರೆ ಬಹುತೇಕ ಕಡೆಗಳಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಬಗ್ಗೆ ಬಿಎಲ್‌ಓಗಳಿಗೆ ಅರಿವೇ ಇಲ್ಲದಂತಾಗಿದೆ. ಲಾಜಿಕಲ್ ಡಿಸ್ಕಿçಪೆನ್ಸಿ ಯಾವ ರೀತಿಯಲ್ಲಿ ಸರಿಪಡಿಸಬಹುದೆಂಬ ಗೊಂದಲಕ್ಕೆ ಮತದಾರರು ಸಿಲುಕಿಕೊಂಡಿದ್ದಾರೆ.ಇದರ ಬಗ್ಗೆ ಮಾಹಿತಿ ನೀಡಬೇಕಾದ ರಾಷ್ಟ್ರೀಯ ಪಕ್ಷಗಳ ಏಜೆಂಟರುಗಳಿಗೆ ಲಾಜಿಕಲ್ ಡಿಸ್ಕಿçಪೆನ್ಸಿ ಬಗ್ಗೆ ಕಿಂಚಿತ್ತೂ ಅರಿವೇ ಇಲ್ಲ. ಆಗಸ್ಟ್ ೨೪ರ ಬಳಿಕ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಡಿಯಲ್ಲಿ ಪ್ರತ್ಯೇಕಿಸಲಾಗಿರುವ ಮತದಾರರಿಗೆ ಕೂಡ ನೋಟಿಸ್ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮತದಾರರು ದಾಖಲೆಗಳನ್ನು ನೀಡಿದ್ದಲ್ಲಿ ಮಾತ್ರ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಪ್ರಕಟಗೊಳ್ಳಲು ಸಾಧ್ಯ,ಇಲ್ಲದಿದ್ದರೆ ಅರ್ಹ ಮತದಾರರು ಕೂಡ ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ.

೨೩,೮೮೪ ಮತದಾರರು ನೋ ಮ್ಯಾಪಿಂಗ್

ಎನ್ಯುಮರೇಶನ್ ಫಾರ್ಮ್ ಬಿ.ಎಲ್.ಒ ಗಳಿಗೆ ಹಿಂತಿರುಗಿಸಿ ಅಪ್ಲೋಡ್ ಆಗಿರುವ ೪,೦೫,೬೪೬ ಮತದಾರರ ಪೈಕಿ ೨೩,೮೮೪ ಮತದಾರರ ಅನ್ ಮ್ಯಾಪಿಂಗ್ ಪಟ್ಟಿಯಲ್ಲಿ ಇದ್ದಾರೆ. ಅಂದರೆ,ಈ ಮತದಾರರಿಗೆ ತಮ್ಮ ವೈಯಕ್ತಿಕ ಅಥವಾ,ತಂದೆ,ತಾಯಿ, ಅಜ್ಜ, ಅಜ್ಜಿ ೨೦೦೨ರ ಮತದಾರರ ಪಟ್ಟಿಯ ಮಾಹಿತಿ ಸಿಕ್ಕಿಲ್ಲ. ಇವರು ತಮ್ಮ ಪ್ರಸ್ತುತ ಮಾಹಿತಿಯನ್ನು ಭರ್ತಿ ಮಾಡಿ ಎನ್ಯುಮರೇಶನ್ ಫಾರ್ಮ್ ಹಿಂತಿರುಗಿಸಿದ್ದಾರೆ. ಆಗಸ್ಟ್ ೨೪ರ ಬಳಿಕ ಅನ್ ಮ್ಯಾಪಿಂಗ್ ಎಂದು ಗುರುತಿಸಿರುವ ೨೩,೮೪೪ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಆ ಸಂದರ್ಭದಲ್ಲಿ ಚುನಾವಣಾ ಆಯೋಗ ಸೂಚಿಸಿರುವ ದಾಖಲೆಗಳನ್ನು ಸಲ್ಲಿಸಿ, ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಬೇಕು. ದಾಖಲೆ ಸಲ್ಲಿಸದ ಮತದಾರರ ಹೆಸರು ಅಕ್ಟೋಬರ್ ೨೭ರಂದು ಪ್ರಕಟಗೊಳ್ಳಲಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರಕಟಗೊಳ್ಳುವುದಿಲ್ಲ.

ರಾಜ್ಯದಲ್ಲಿ ೨೫,೭೭,೮೪೨ ಮತದಾರರು ನೋಮ್ಯಾಪಿಂಗ್ ಪಟ್ಟಿಯಲ್ಲಿ ಇದ್ದಾರೆ.

ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಸೇರಿ ೧೯೯೮ ಮತದಾರರು ಎನ್ಯುಮರೇಶನ್ ಫಾರ್ಮ್ ಅನ್ನು ಆನ್ ಲೈನ್ ಮೂಲಕ ಭರ್ತಿ ಮಾಡಿದ್ದು,ಇವರೆಲ್ಲರ ಎನ್ಯುಮರೇಶನ್ ಫಾರ್ಮ್ ಬಿಎಲ್‌ಓ ಪರಿಶೀಲಿಸಿ ನೋಂದಣಿ ಮಾಡಿಕೊಂಡಿದ್ದಾರೆ. ೧,೭೩,೪೪೫ ಮತದಾರರು ಸೆಲ್ಫ್ ಮ್ಯಾಪಿಂಗ್ ಹಾಗೂ ೨,೦೮,೩೩೫ ಮತದಾರರು ಪ್ರೊಜಿನಿ(ಸಂಬAಧಿಕರೊAದಿಗೆ) ಮ್ಯಾಪಿಂಗ್ ಮಾಡಿಕೊಂಡಿದ್ದಾರೆ.