ಮಡಿಕೇರಿ, ಅ. ೧೬: ನಾಗರ ಪಂಚಮಿ ಪ್ರಯುಕ್ತ ತಾ. ೧೭ ರಂದು (ಇಂದು) ಶ್ರೀ ಓಂಕಾರೇಶ್ವರ ದೇವಾಲಯದ ಬಳಿ ಇರುವ ಅಶ್ವತ್ಥ ಕಟ್ಟೆಯಲ್ಲಿ ವ್ಯವಸ್ಥಾಪನಾ ಸಮಿತಿ ವತಿಯಿಂದ ವಿವಿಧ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ೬.೩೦ ರಿಂದ ೧೨ ಗಂಟೆವರೆಗೆ ಕ್ಷೀರಾಭಿಷೇಕ, ಎಳನೀರಿನ ಅಭಿಷೇಕ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
* ಮಡಿಕೇರಿ ನಗರದ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ನಾಗರ ಪಂಚಮಿ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.
ಬೆಳಿಗ್ಗೆ ೯ ಗಂಟೆಗೆ ಹಾಲು, ಎಳನೀರು, ಪಂಚಾಮೃತ ಅಭಿಷೇಕ, ೧೧.೩೦ಕ್ಕೆ ನಾಗದೇವರುಗಳ ಅಲಂಕಾರ, ನಾಗ ತಂಬಿಲ, ಮಹಾಮಂಗಳಾರತಿ ಸೇವೆ ನಡೆಯಲಿದೆ ಎಂದು ದೇವಾಲಯ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.