ನಾಪೋಕ್ಲು, ಆ. ೧೫: ಚೇರಂಬಾಣೆಯ ಬೇಂಗ್ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ಕಕ್ಕಡ ತೀನಿ ಪೈಪೋಟಿ ಕಾರ್ಯಕ್ರಮ ವಿಜೃಂಭಣೆಯಿAದ ನಡೆಯಿತು .
ಕಾರ್ಯಕ್ರಮವನ್ನು ಬೇಂಗ್ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ ಉದ್ಘಾಟಿಸಿ ಕಾರ್ಯಕ್ರಮದ ಯಶಸ್ಸಿಗೆ ಶುಭ ಕೋರಿದರು. ಪೊಮ್ಮಕ್ಕಡ ಕೂಟದಿಂದ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ಮೂಡಿಬರುವಂತಾಗಲಿ ಎಂದರು.
ಬೇಂಗ್ನಾಡ್ ಕೊಡವ ಸಮಾಜದ ಮಾಜಿ ಅಧ್ಯಕ್ಷ ಕುಟ್ಟೇಟಿರ ಕೆ.ಕುಂಞಪ್ಪ ಮಾತನಾಡಿ, ಬೇಂಗ್ನಾಡ್ ಕೊಡವ ಸಮಾಜ, ಪೊಮ್ಮಕ್ಕಡ ಕೂಟ, ರಿಕ್ರಿಯೇಷನ್ ಕ್ಲಬ್ ಜೊತೆಗೂಡಿ ಕೊಡವ ಜನಾಂಗದ ಏಳಿಗೆಗೆ ಶ್ರಮಿಸುವಂತಾಗಬೇಕು. ಪಂಜಿನ ಮೆರವಣಿಗೆ ಅಂತಹ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಅಪ್ಪಾರAಡ ರತಿ ಬಿದ್ದಪ್ಪ ‘ಕಕ್ಕಡತರ ಬದುಕು ಅಂದು-ಇAದು’ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿದರು. ೫ ದಶಕಗಳ ಹಿಂದೆ ಕಕ್ಕಡದಲ್ಲಿ ನಡೆಯುತ್ತಿದ್ದ ಕೃಷಿ ಕೆಲಸ ಒಗ್ಗಟ್ಟಿನಿಂದ ನಡೆಯುತ್ತಿತ್ತು. ಇಂದೂ ಒಗ್ಗಟ್ಟಿನಿಂದ ಕೆಲಸ ಮಾಡುವ ಅವಶ್ಯಕತೆ ಇದೆ. ಆರೋಗ್ಯಕರ ಆಹಾರ ಪದ್ಧತಿಯಿಂದಾಗಿ ಅಂದಿನವರು ಆರೋಗ್ಯವಂತರಾಗಿದ್ದರು ಎಂದ ಅವರು ಅಂದಿನ ಮತ್ತು ಇಂದಿನ ಜನಜೀವನ ವ್ಯತ್ಯಾಸಗಳನ್ನು ಸವಿಸ್ತಾರವಾಗಿ ತಿಳಿಸಿದರು.
ಚಲನಚಿತ್ರ ರಂಗದಲ್ಲಿ ರಾಷ್ಟçಪ್ರಶಸ್ತಿಯನ್ನು ಪಡೆದ ಚಿತ್ರ ನಿರ್ಮಾಪಕ, ನಿರ್ದೇಶಕ ದಂಪತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮತ್ತು ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರು ಸನ್ಮಾನ ಸ್ವೀಕರಿಸಿ ಮಾತನಾಡಿ, ಕೊಡವ ಜನಾಂಗದ ಸಂಸ್ಕೃತಿ-ಪದ್ಧತಿಯನ್ನು ಸಿನಿಮಾದ ಮೂಲಕ ಜನರಿಗೆ ತಲುಪಿಸುವಂತಹ ಕೆಲಸ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೇಂಗ್ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಡ್ಡೀರ ನಳಿನಿ ಮಾತನಾಡಿ, ಕಕ್ಕಡ ತೀನಿ ಎನ್ನುವುದು ಕೇವಲ ಆಹಾರ ಪದ್ಧತಿ ಮಾತ್ರವಲ್ಲ ಕೊಡವ ಜನಾಂಗದ ಸಂಸ್ಕೃತಿಯ ಒಂದು ಭಾಗ. ನಮ್ಮ ಹಿರಿಯರು ಮುಂದಿನ ಪೀಳಿಗೆಗಾಗಿ ಉತ್ತಮ ಸಂಸ್ಕೃತಿ, ಸಂಪ್ರದಾಯ, ಪದ್ಧತಿಗಳ ಅಡಿಪಾಯ ಹಾಕಿ ಕೊಟ್ಟಿದ್ದಾರೆ. ವಿಶಿಷ್ಟ ಜನಾಂಗವಾದ ಕೊಡವರು, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಮತ್ತು ಪೊಮ್ಮಕ್ಕಡ ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಕ್ಕಡ ತಿಂಗಳಿನಲ್ಲಿ ಮಾಡುವ ತರಾವರಿ ತಿನಿಸುಗಳ ಪೈಪೋಟಿಯನ್ನು ಆಯೋಜಿಸಲಾಗಿತ್ತು. ಕಕ್ಕಡ ತೀನಿ ಸ್ಪರ್ಧೆ, ಸಮೂಹ ಗಾಯನ, ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕುಂಚೆಟ್ಟಿರ ಶಿಲ್ಪ ಪೆಮ್ಮಯ್ಯ ಮತ್ತು ತೇಲಪಂಡ ಲಕ್ಷಿö್ಮ ಪ್ರಾರ್ಥಿಸಿದರು. ಅತಿಥಿಗಳ ಪರಿಚಯವನ್ನು ಬಾಚರಣಿಯಂಡ ಅನಿತಾ ಗಣಪತಿ ನೆರವೇರಿಸಿದರು. ಪಟ್ಟಮಾಡ ಮಿಲನ ಸ್ವಾಗತಿಸಿ, ಪಟ್ಟಮಾಡ ಜಯಂತಿ ಚಂಗಪ್ಪ ವಂದಿಸಿದರು.