ದಿವಂಗತ ಐ.ಡಿ. ಮಂದಪ್ಪ (ಬಾಬಿ) ಅವರ ಪತ್ನಿ ಕರಡ ಗ್ರಾಮದ ಐತಿಚಂಡ ಶಾಂತಿ ಸುಬ್ಬವ್ವ (೮೬) (ತಾಮನೆ-ಚೆಂಬಾAಡ) ಅವರು ಶನಿವಾರ ನಿಧನರಾದರು. ಮೃತರು ವಕೀಲರಾದ ದೇವಯ್ಯ (ನಂದ) ಹಾಗೂ ಇಬ್ಬರು ಪುತ್ರಿಯರಾದ ಕರ್ತಚಿರ ಕಾವೇರಮ್ಮ ಮತ್ತು ವಕೀಲರಾದ ಪಟ್ಟಡ ರೀನಾ ಪ್ರಕಾಶ್ ಇವರುಗಳನ್ನು ಅಗಲಿದ್ದಾರೆ. ಅಂತ್ಯಸAಸ್ಕಾರ ಕರಡದ ಕುಟುಂಬದ ರುದ್ರಭೂಮಿ ಯಲ್ಲಿ ತಾ. ೧೬ ರಂದು ನಡೆಯಲಿದೆ.
* ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮ ನಿವಾಸಿ ಪ್ರಭ (೪೩) ತಾ. ೧೫ ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.
* ಕದನೂರು ಗ್ರಾಮದ ಪಾಲೇಕಂಡ ನಾಣಿ ನಾಣಯ್ಯ (೭೮) ತಾ. ೧೫ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೧೬ರಂದು ೧೧.೩೦ ಗಂಟೆಗೆ ಕುಟುಂಬದ ರುದ್ರಭೂಮಿಯಲ್ಲಿ ನಡೆಯಲಿದೆ.
* ಮದೆನಾಡು ನಿವಾಸಿ ಕೊಲ್ಯದ ಭವಾನಿ ರಾಮಪ್ಪ (೮೪) ಅವರು ತಾ. ೧೫ ರಂದು ನಿಧನರಾದರು. ಮೃತರು ಪತಿ ನಿವೃತ್ತ ಪತ್ರಾಂಕಿತ ಅಧಿಕಾರಿ ಕೊಲ್ಯದ ರಾಮಪ್ಪ, ಪುತ್ರ ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೧೬ ರಂದು (ಇಂದು) ಮದೆನಾಡಿನ ಮೃತರ ಸ್ವಗೃಹದಲ್ಲಿ ಅಪರಾಹ್ನ ೨ ಗಂಟೆಗೆ ನಡೆಯಲಿದೆ.