ಶನಿವಾರಸಂತೆ: ಆ. ೧೫: ಪಟ್ಟಣದ ಶ್ರೀ ವಿಘ್ನೇಶ್ವರ ವಿದ್ಯಾಸಂಸ್ಥೆಯ ಬಾಲಿಕಾ ಪದವಿಪೂರ್ವ ಕಾಲೇಜು, ಪ್ರೌಢಶಾಲೆ ಹಾಗೂ ಗೋಲ್ಡನ್ ಸ್ಕೂಲ್ ಮೂರೂ ವಿಭಾಗಗಳ ವಿದ್ಯಾರ್ಥಿನಿಯರಿಗೆ ಹದಿಹರೆಯದ ಸಮಸ್ಯೆಗಳು, ಋತುಚಕ್ರದ ಮುನ್ನೆಚ್ಚರಿಕೆ ಕ್ರಮಗಳು, ದೈಹಿಕ-ಮಾನಸಿಕ ಆರೋಗ್ಯದ ಬಗ್ಗೆ ಉಪನ್ಯಾಸ ಕಾರ್ಯಾಗಾರ ವನ್ನು ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಸಹಾಯಕ ಉಪನ್ಯಾಸಕಿ ಪುಷ್ಪರಾಣಿ ಉಪನ್ಯಾಸ ನೀಡಿ, ಹದಿಹರೆಯದಲ್ಲಿ ಮೂಡುವ ಭಾವನೆಗಳು, ಸಂಕೋಚ, ಭಯ, ಶುಚಿತ್ವ, ಮಾನಸಿಕ-ದೈಹಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾ ಶಿಕ್ಷಣದ ಮೇಲೂ ಹದಿಹರೆಯ ಹೇಗೆ ಪರಿಣಾಮ ಬೀರುತ್ತದೆ, ಹೇಗೆ ಎಚ್ಚರಿಕೆಯಿಂದ ಇರಬೇಕು ಎಂದು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಮೊಹಮ್ಮದ್ ಜಹೀರ್ ವಹಿಸಿದ್ದರು.ಮುಖ್ಯ ಅತಿಥಿ ಕಸಾಪ ಹೋಬಳಿ ಅಧ್ಯಕ್ಷ ಬಿ.ಬಿ ನಾಗರಾಜ್, ಪ್ರೌಢಶಾಲೆ ಮುಖ್ಯಶಿಕ್ಷಕಿ ಸುಚಿತ್ರಾ, ಗೋಲ್ಡನ್ ಶಾಲೆ ಮುಖ್ಯಶಿಕ್ಷಕ ಷಣ್ಮುಖಯ್ಯ, ಉಪನ್ಯಾಸಕರಾ ಸರ್ಪ್ರಾಜ್, ತೀರ್ಥಾನಂದ್, ಚೈತ್ರಾ, ಶಿಕ್ಷಕರಾದ ಅಂಜನಪ್ಪ, ಸಂದೇಶ್, ಸವಿತಾ, ಶ್ರೀಕಲಾ ಹಾಜರಿದ್ದರು.