ಮಡಿಕೇರಿ, ಆ.೧೫: ಕೊಡಗಿನ ಸರ್ವರ ಅಭಿವೃದ್ಧಿ ಮತ್ತು ಸಮಗ್ರ ಪ್ರಗತಿಗೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿದ್ದ ೮೦ನೇ ಸ್ವಾತಂತ್ರೊö್ಯÃತ್ಸವದ ಧ್ವಜಾರೋಹಣ ನೆರವೇರಿಸಿ ಅವರು ನಾಡಿನ ಜನತೆಗೆ ಸಂದೇಶ ನೀಡಿದರು. ಕೊಡಗು ಜಿಲ್ಲೆ ಪ್ರಕೃತಿ ಮತ್ತು ಅಧ್ಯಾತ್ಮ ಪರಸ್ಪರ ಬೆಸೆದುಕೊಂಡಿವೆ. ಅರಣ್ಯವನ್ನು ದೇವರಂತೆ ಕಾಣುವ ಸಂಸ್ಕೃತಿ, ನದಿಯನ್ನು ತಾಯಿಯಂತೆ ಪೂಜಿಸುವ ಮನೋಭಾವ ಮತ್ತು ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಜೀವನ ಪದ್ಧತಿ ಕೊಡಗಿನ ವಿಶಿಷ್ಟ ಪರಂಪರೆಯಾಗಿದೆ. ಕೊಡಗಿನ ಪ್ರಕೃತಿಯನ್ನು ಸಂರಕ್ಷಿಸುತ್ತಲೇ ಪ್ರವಾಸೋದ್ಯಮ, ಕೃಷಿ, ಕಾಫಿ, ತೋಟಗಾರಿಕೆ ಮತ್ತು ಸ್ಥಳೀಯ ಉದ್ಯೋಗಗಳನ್ನು ಬೆಳೆಸುವದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.
ಕೊಡಗು ಕಾಫಿ
ಕೃಷಿಗೆ ಬಲ, ಕಾಫಿಗೆ ಮೌಲ್ಯವರ್ಧನೆ, ಯುವಕರಿಗೆ ಉದ್ಯೋಗ, ಪ್ರವಾಸೋದ್ಯಮಕ್ಕೆ ಹೊಸ ಅವಕಾಶ, ಮಹಿಳೆಯರಿಗೆ ಆರ್ಥಿಕ ಶಕ್ತಿ, ಗ್ರಾಮಗಳಿಗೆ ಉತ್ತಮ ಮೂಲಸೌಕರ್ಯ ಮತ್ತು ಪ್ರಕೃತಿಯ ಸಂಪೂರ್ಣ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ.
ಕೊಡಗಿನ ಆರ್ಥಿಕತೆಯ ಬೆನ್ನೆಲುಬಾಗಿರುವ ಕಾಫಿ ಬೆಳೆಗಾರರು ಮತ್ತು ಕೃಷಿಕರ ಬದುಕು ಬಲವಾಗಬೇಕು. ಹವಾಮಾನ ಬದಲಾವಣೆ, ಅತಿವೃಷ್ಟಿ, ಅನಿಶ್ಚಿತ ಮಳೆ, ಬೆಲೆ ಏರಿಳಿತ ಮತ್ತು ವನ್ಯಜೀವಿ ಸಂಘರ್ಷದAತಹ ಸವಾಲುಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುತ್ತಿದ್ದೇವೆ.ಕೊಡಗಿನ ಕೃಷಿಯನ್ನು ಕೇವಲ ಉತ್ಪಾದನೆಯಾಗಿ ನೋಡುವುದಲ್ಲ; ಮೌಲ್ಯವರ್ಧನೆ, ಸಂಸ್ಕರಣೆ, ಬ್ರ್ಯಾಂಡಿAಗ್, ರಫ್ತು ಮತ್ತು ಪ್ರವಾಸೋದ್ಯಮದೊಂದಿಗೆ ಸಂಪರ್ಕಿಸುವ ಹೊಸ ಆರ್ಥಿಕತೆಯಾಗಿ ರೂಪಿಸಬೇಕಾಗಿದೆ. ಕೊಡಗಿನ ಕಾಫಿ ವಿಶ್ವದ ಮಾರುಕಟ್ಟೆಯಲ್ಲಿ ಇನ್ನಷ್ಟು ಬಲವಾಗಿ ಗುರುತಿಸಿಕೊಳ್ಳಬೇಕು. “ಕೊಡಗು ಕಾಫಿ”ಎಂಬ ಹೆಸರೇ ಜಾಗತಿಕ ಗುಣಮಟ್ಟದ ಸಂಕೇತವಾಗುವ ದಿನವನ್ನು ನಾವು ನಿರ್ಮಿಸೋಣ ಎಂದು ಸಚಿವರು ಆಶಿಸಿದರು.
ಪ್ರವಾಸೋದ್ಯಮ ಬೆಳವಣಿಗೆಯ ಗುರಿ
ಕೊಡಗು ಈಗಾಗಲೇ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಆದರೆ ನಮ್ಮ ಗುರಿ ಕೇವಲ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವುದಲ್ಲ. ಪರಿಸರ ಸ್ನೇಹಿ ಪ್ರವಾಸೋದ್ಯಮ, ಅಧ್ಯಾತ್ಮಿಕ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ಕಾಫಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಗಳನ್ನು ಸಮಗ್ರವಾಗಿ ಬೆಳೆಸಬೇಕು ಎನ್ನುವುದು ನನ್ನ ಗುರಿಯಾಗಿದೆ. ಪ್ರವಾಸಿಗರು ಕೊಡಗಿಗೆ ಬಂದು ಕೇವಲ ಬೆಟ್ಟ-ಜಲಪಾತಗಳನ್ನು ನೋಡಿ ಹಿಂದಿರುಗಬಾರದು; ಕೊಡಗಿನ ಸಂಸ್ಕೃತಿ, ವೀರ ಪರಂಪರೆ, ಕಾಫಿ, ಆಹಾರ, ಸಂಗೀತ, ದೇವಾಲಯಗಳು ಮತ್ತು ಜನಜೀವನವನ್ನು ಅನುಭವಿಸಿ ಹೋಗಬೇಕು. ಇದರಿಂದ ಸ್ಥಳೀಯ ಯುವಕರಿಗೆ ಮಾರ್ಗದರ್ಶಕ, ಹೋಂಸ್ಟೇ, ಸಾರಿಗೆ, ಆಹಾರ, ಕೈಗಾರಿಕೆ, ಕೃಷಿ ಉತ್ಪನ್ನಗಳ ಮಾರಾಟ ಸೇರಿದಂತೆ ಸಾವಿರಾರು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು ಎಂದು ಸಚಿವರು ಅಭಿಪ್ರಾಯಿಸಿದರು.
ಪರಿಸರ ನ್ಯಾಯ ಸಂಕಲ್ಪ
ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ವೈಜ್ಞಾನಿಕ ಪರಿಹಾರಗಳು, ತ್ವರಿತ ಪರಿಹಾರಧನ, ಸುರಕ್ಷತಾ ಕ್ರಮಗಳು ಮತ್ತು ಅರಣ್ಯ ಸಂರಕ್ಷಣೆಯನ್ನು ಸಮನ್ವಯಗೊಳಿಸಬೇಕು. “ಅರಣ್ಯವೂ ಉಳಿಯಬೇಕು; ಅರಣ್ಯದಂಚಿನ ಜನರೂ ನೆಮ್ಮದಿಯಿಂದ ಬದುಕಬೇಕು” ಎನ್ನುವುದು ನಮ್ಮ ಪರಿಸರ ನ್ಯಾಯದ ಸಂಕಲ್ಪವಾಗಿದೆ ಎಂದು ಸಚಿವರು ಹೇಳಿದರು.
ಸ್ವಾತಂತ್ರö್ಯ ಹೋರಾಟ
ಕೊಡಗಿನ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಹುತಾತ್ಮ ಗುಡ್ಡೆಮನೆ ಅಪ್ಪಯ್ಯಗೌಡ, ಜನಾಂದೋಲನ ನಡೆಸಿದ ಪಂದ್ಯAಡ ಐ. ಬೆಳ್ಯಪ್ಪ ಅವರು ಸ್ಮರಣೀಯ ಎಂದರು.
ಪಂದ್ಯAಡ ಬೆಳ್ಯಪ್ಪ, ಕೊಳ್ಳಿಮಾಡ ಕರುಂಬಯ್ಯ, ಸಿ.ಎಂ. ಪೂಣಚ್ಚ ಸೇರಿದಂತೆ ಸ್ಥಳೀಯ ನಾಯಕರು ಗಾಂಧೀಜಿಯವರನ್ನು ಕೊಡಗಿಗೆ ಆಹ್ವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ೧೯೩೪ರ ಫೆಬ್ರವರಿ ೨೧ರಿಂದ ೨೩ರವರೆಗೆ ಗಾಂಧೀಜಿಯವರು ಕೊಡಗಿನಲ್ಲಿ ಪ್ರವಾಸ ಕೈಗೊಂಡಿದ್ದ ಗಾಂಧೀಜಿಯವರ ಆಗಮನದಿಂದ ಈ ಮಣ್ಣಿನಲ್ಲಿ ಸ್ವಾತಂತ್ರ್ಯದ ಕಿಡಿ ಇನ್ನಷ್ಟು ಪ್ರಜ್ವಲಿಸಿತು ಎಂದರು. ಕೊಡಂದೇರ ಪೂವಯ್ಯ, ಕೋದಂಡ ಅಪ್ಪಯ್ಯ, ಸಿ.ಎಂ. ವೆಂಕಪ್ಪಯ್ಯ, ಗುಂಡುಗುಟ್ಟಿ ಮಂಜುನಾಥಯ್ಯ, ಎಂ.ಎA. ಸಿದ್ದಿಕ್, ಎಚ್.ಆರ್. ಕೃಷ್ಣಯ್ಯ, ಮಂಡೇಪAಡ ಕಾರ್ಯಪ್ಪ, ಮುಕ್ಕಾಟಿರ ಭೋಜಪ್ಪ, ಮಲ್ಲಂಗಡ ಚಂಗಪ್ಪ, ಮಾರಯ್ಯ ಮತ್ತು ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಇಂತಹ ಅಸಂಖ್ಯಾತ ವೀರರಿಗೆ ನಮ್ಮ ಗೌರವಪೂರ್ವಕ ನಮನ ಎಂದು ಸಚಿವರು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಭಾರತದ ಸೇನಾ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಎರಡು ಮಹಾನ್ ಹೆಸರುಗಳಾಗಿವೆ ಎಂದರು.
ಅಭಿವೃದ್ಧಿಗೆ ಹಲವು ಯೊಜನೆಗಳು
ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ೧.೮೫ ಲಕ್ಷ ವಯಸ್ಕ ಮಹಿಳೆಯರು ಹಾಗೂ ೪.೫೪ ಲಕ್ಷ ಹೆಣ್ಣುಮಕ್ಕಳು/ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಪ್ರಯೋಜನ ಪಡೆದಿದ್ದಾರೆ. ದಿನಕ್ಕೆ ಸರಾಸರಿ ೧೬,೭೪೭ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ೮ ಆಗಸ್ಟ್ ೨೦೨೬ರವರೆಗೆ ರಸ್ತೆ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕಕ್ಕೆ ರೂ.೮೨.೯೨ ಕೋಟಿ ಆದಾಯ ಬಂದಿದೆ ಎಂದರು.
ಗೃಹಲಕ್ಷಿö್ಮ ಏಪ್ರಿಲ್ ೨೦೨೬ರವರೆಗೆ ೧.೨೧ ಲಕ್ಷ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಏಪ್ರಿಲ್ ೨೦೨೬ರವರೆಗೆ ಕೊಡಗಿನ ಕುಟುಂಬದ ಯಜಮಾನಿ ಮಹಿಳೆಯರಿಗೆ ತಿಂಗಳಿಗೆ ರೂ. ೨,೦೦೦ರಂತೆ ಒಟ್ಟು ರೂ. ೬೭೩.೨೮ ಕೋಟಿ ಡಿಬಿಟಿ ಮೂಲಕ ಜಮೆ ಮಾಡಲಾಗಿದೆ.
ಗೃಹಜ್ಯೋತಿ ಇಲ್ಲಿಯವರೆಗೆ ೨.೦೩ ಲಕ್ಷ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಜಿಲ್ಲೆಗೆ ಜುಲೈ ೨೦೨೬ರವರೆಗೆ ರೂ. ೨೬,೪೬೨.೯೨ ಕೋಟಿ ಸಹಾಯಧನ ನೀಡಲಾಗಿದೆ.
ಅನ್ನಭಾಗ್ಯ ಕೊಡಗಿನಲ್ಲಿ ೯೭,೫೭೦ ಅರ್ಹ ಪಡಿತರ ಚೀಟಿ ಕುಟುಂಬಗಳ ಸದಸ್ಯರಿಗೆ ಪಡಿತರ ವಿತರಣೆಯಾಗುತ್ತಿದೆ. ರಾಷ್ಟಿçÃಯ ಆಹಾರ ಭದ್ರತಾ ಯೋಜನೆಯ ೫ ಕೆ.ಜಿ. ಮತ್ತು ಅನ್ನಭಾಗ್ಯದ ಹೆಚ್ಚುವರಿ ೫ ಕೆ.ಜಿ. ಸೇರಿ ಒಟ್ಟು ೧೦ ಕೆ.ಜಿ. ಅಕ್ಕಿ ವಿತರಣೆ ಆಗುತ್ತಿದೆ.
ಯುವನಿಧಿ ಜೂನ್ ೨೦೨೬ರ ಅಂತ್ಯಕ್ಕೆ ೨,೩೪೭ ಅಭ್ಯರ್ಥಿಗಳು ನೋಂದಣಿಯಾಗಿದ್ದು ೨,೦೧೩ ಜಿಲ್ಲೆಯ ಫಲಾನುಭವಿಗಳಿಗೆ ರೂ. ೫.೯೭ ಕೋಟಿ ನೇರವಾಗಿ ಖಾತೆಗೆ ವರ್ಗಾವಣೆ ಆಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪರಿಶಿಷ್ಟ ಪಂಗಡಗಳ ಕಲ್ಯಾಣ
ನಿವೇಶನ ರಹಿತ ಪರಿಶಿಷ್ಟ ಪಂಗಡದವರಿಗೆ ನಿವೇಶನ ಒದಗಿಸಲು ೬೧.೨೫ ಎಕರೆ ಜಾಗ ಕಾಯ್ದಿರಿಸಲಾಗಿದೆ. ವೀರಾಜಪೇಟೆ ತಾಲೂಕಿನ ಕೆದÀಮುಳ್ಳೂರಿನಲ್ಲಿ ೭.೫೦ ಎಕರೆ ಪ್ರದೇಶದಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ೪೦ ವಸತಿರಹಿತ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ. ಮುಖ್ಯಮಂತ್ರಿಯವರ ಆದಿವಾಸಿ ಗೃಹ ಭಾಗ್ಯ ಯೋಜನೆಯಡಿ ತಲಾ ರೂ. ೪.೫೦ ಲಕ್ಷ ಘಟಕ ವೆಚ್ಚದಲ್ಲಿ ೧೭೫ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಮತ್ತು ಕೆರೆ ಪುನಶ್ಚೇತನ
ಮಡಿಕೇರಿ ನಗರಸಭೆ ಮತ್ತು ವಿರಾಜಪೇಟೆ ಪುರಸಭೆಯ ೩ ಕೆರೆಗಳ ಅಭಿವೃದ್ಧಿಗೆ ೪.೮೪ ಕೋಟಿ ನೀಡಲಾಗಿದೆ. ರೋಶನಾರ ಕೆರೆ - ೧.೫೭ ಕೋಟಿ, ಪಂಪಿನ ಕೆರೆ - ೧.೬೭ ಕೋಟಿ, ವಿರಾಜಪೇಟೆಯ ಶಿವಕೆರೆ - ೧.೬೦ ಕೋಟಿ ಒದಗಿಸಲಾಗಿದೆ ಎಂದರು.
ಆರೋಗ್ಯ ಮೂಲಸೌಕರ್ಯ
ವೀರಾಜಪೇಟೆ ತಾಲೂಕು ಆಸ್ಪತ್ರೆಯನ್ನು ೯೫.೬೦ ಕೋಟಿ ವೆಚ್ಚದಲ್ಲಿ ೨೫೦ ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರ ಅಡಿಪಾಯ ಕಾಮಗಾರಿ ಪ್ರಗತಿಯಲ್ಲಿದೆ. ಕುಶಾಲನಗರದಲ್ಲಿ ೪೧ ಕೋಟಿ ವೆಚ್ಚದಲ್ಲಿ ೧೦೦ ಹಾಸಿಗೆಗಳ ಹೊಸ ತಾಲೂಕು ಆಸ್ಪತ್ರೆ; ನಿವೇಶನ ಗುರುತಿಸಲಾಗಿದ್ದು, ಕಾಮಗಾರಿ ಆರಂಭಿಸಬೇಕಿದೆ. ಖಾಲಿ ಇರುವ ತಜ್ಞ ವೈದ್ಯರು ಹಾಗೂ ಸಾಮಾನ್ಯ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಊPಗಿ ಲಸಿಕಾ ಕಾರ್ಯಕ್ರಮದಲ್ಲಿ ಗುರಿ ಸಾಧಿಸಿ ರಾಜ್ಯದಲ್ಲಿ ಕೊಡಗು ೩ನೇ ಸ್ಥಾನ ಪಡೆದಿದೆ ಎಂದು ಸಚಿವರು ಹೇಳಿದರು.
ಕೃಷಿ ಮತ್ತು ತೋಟಗಾರಿಕೆ
ಯಾಂತ್ರೀಕರಣ ಯೋಜನೆಯಡಿ ೫೨ ರೈತರಿಗೆ ಉಪಕರಣ ಖರೀದಿಗೆ ೧೫.೧೫ ಲಕ್ಷ ಸಹಾಯಧನ ನೀಡಲಾಗಿದೆ. ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ೨೨,೧೦೬ ಮಾನವ ದಿನಗಳ ಸೃಜನೆ, ೩೮೫ ಎಕರೆ ಪ್ರದೇಶ ಒಳಗೊಂಡು ೭೭.೧೫ ಲಕ್ಷ ಆರ್ಥಿಕ ಸಾಧನೆ ಮಾಡಲಾಗಿದೆ. ಮೀನುಗಾರಿಕೆಯನ್ನು ಪರ್ಯಾಯ ಆದಾಯ ಮೂಲವಾಗಿ ಉತ್ತೇಜಿಸಲು ೨೦೨೬-೨೭ರಲ್ಲಿ ಜುಲೈ ೨೦೨೬ರವರೆಗೆ ೧೩ ಲಕ್ಷ ಬಿತ್ತನೆ ಮೀನು ಮರಿಗಳ ವಿತರಣೆಯಾಗಿದೆ.
ಕುಡಿಯುವ ನೀರು - ಜಲಜೀವನ್ ಮಿಷನ್
ಎಎಒ ಬ್ಯಾಚ್ ೧, ೨ ಮತ್ತು ೩ರಡಿ ೪೫೫ ಜನವಸತಿಗಳಿಗೆ ನಳ ನೀರು ಸಂಪರ್ಕ ಕಲ್ಪಿಸಲು ೩೫೪.೪೪ ಕೋಟಿ ಕ್ರಿಯಾಯೋಜನೆ ಅನುಮೋದನೆ ದೊರೆತಿದೆ.
ಈವರೆಗೆ ೩೭೪ ಜನವಸತಿಗಳ ಕಾಮಗಾರಿ ಪೂರ್ಣ; ೮೨.೨೧% ಭೌತಿಕ ಪ್ರಗತಿಯಾಗಿದೆ. ಪೂರ್ಣಗೊಂಡ ಕಾಮಗಾರಿಗಳಲ್ಲಿ ೨೪೧ ಜನವಸತಿಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿ ಶುದ್ಧ ಕುಡಿಯುವ ನೀರು ಪೂರೈಕೆಯಾಗಿದೆ. ಈವರೆಗೆ ೨೪೮.೫೬ ಕೋಟಿ ವೆಚ್ಚ ಮಾಡಿದ್ದು, ೭೦.೧೨% ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೧.೪೪ ಲಕ್ಷ ಗ್ರಾಮೀಣ ಮನೆಗಳಿದ್ದು, ಈವರೆಗೆ ೧.೨೩ ಲಕ್ಷ ಮನೆಗಳಿಗೆ ನಳ ಸಂಪರ್ಕ ಒದಗಿಸಿ, ೮೫.೭೪% ಗುರಿ ಸಾಧನೆ ಮಾಡಲಾಗಿದೆ. ಉಳಿದ ಕಾಮಗಾರಿಗಳನ್ನು ಡಿಸೆಂಬರ್ ೨೦೨೬ರ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಸಚಿವರು ತಿಳಿಸಿದರು.
ರಸ್ತೆ ಮತ್ತು ಮೂಲಸೌಕರ್ಯ
೨೦೨೬-೨೭ರಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆಯಿಂದ ೨೦ ಕೋಟಿ ಅನುದಾನ ನೀಡಿದ್ದು, ೧೮ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಲುಸಂಕ ನಿರ್ಮಾಣಕ್ಕೆ ೨೦೦ ಲಕ್ಷ ಅನುದಾನ ನೀಡಿದ್ದು, ೧೯ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ, ನೀಡಲಾಗಿದೆ. ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ವಿರಾಜಪೇಟೆಗೆ ೧೭ ಕಾಮಗಾರಿಗಳಿಗೆ ೩೦ ಕೋಟಿ ಒದಗಿಸಲಾಗಿದೆ. ೧ ಪೂರ್ಣ, ೮ ಪ್ರಗತಿಯಲ್ಲಿ, ೮ ಟೆಂಡರ್ ಹಂತದಲ್ಲಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ೮ ಕಾಮಗಾರಿಗಳಿಗೆ ೧೫ ಕೋಟಿ ನೀಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ರಾಜ್ಯ ವಿಪತ್ತು ಉಪಶಮನ ನಿಧಿಯಡಿ ೧೮ ಕಾಮಗಾರಿಗಳಿಗೆ ೧೦.೫೬ ಕೋಟಿ ಒದಗಿಸಲಾಗಿದೆ. ಸೇತುವೆ ಪುನರ್ ನಿರ್ಮಾಣ ಯೋಜನೆಯಡಿ ವೀರಾಜಪೇಟೆಗೆ ೭ ಕಾಮಗಾರಿಗಳಿಗೆ ೧೨.೫೦ ಕೋಟಿ ಹಾಗೂ ಮಡಿಕೇರಿಗೆ ೩ ಕಾಮಗಾರಿಗಳಿಗೆ ೧೦ ಕೋಟಿ ಒದಗಿಸಲಾಗಿದೆ ಎಂದು ಹೇಳಿದರು.
ಪಥ ಸಂಚಲನ
ಪೊಲೀಸ್, ಗೃಹರಕ್ಷಕ ದಳ, ಎನ್ಸಿಸಿ, ಸೈನಿಕ ಶಾಲೆ, ಸೇವಾದಳ, ಸ್ಕೌಟ್ ಮತ್ತು ಗೈಡ್ಸ್, ವಿವಿಧ ಶಾಲಾ ವಿದ್ಯಾರ್ಥಿಗಳ ತಂಡಗಳಿAದ ಆಕರ್ಷಕ ಪಥಸಂಚಲನ ನೆರವೇರಿತು. ಸಚಿವರಾದಿಯಾಗಿ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು.
ಸಾಂಸ್ಕೃತಿಕ ರಂಗು
ಇದೇ ಸಂದರ್ಭ ಶಾಲಾ ಮಕ್ಕಳಿಂದ ದೇಶಭಕ್ತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಸಂತ ಮೈಕಲರ ಹಿರಿಯ ಪ್ರಾಥಮಿಕ ಶಾಲೆ, ಜ.ತಿಮ್ಮಯ್ಯ ಪಬ್ಲಿಕ್ ಶಾಲೆ, ರಾಜೇಶ್ವರಿ ವಿದ್ಯಾಲಯ, ಸ.ಪ.ಪೂ.ಕಾಲೇಜು ಪ್ರೌಢಶಾಲೆ, ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು.
ಸನ್ಮಾನ-ಗೌರವ
ಇದೇ ಸಂದರ್ಭ ಅಂಗಾAಗ ದಾನ ಮಾಡಿದವರ ಕುಟುಂಬಸ್ಥರು, ಹತ್ತನೇ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಆರೋಗ್ಯ ಕಾರ್ಯಕರ್ತೆಯರು, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಸಕ ಡಾ.ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೊಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಮೆಹರೋಝ್ ಖಾನ್, ಮಡಿಕೇರಿ ನಗರ ಸಭಾಧ್ಯಕ್ಷೆ ಕಲಾವತಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ನಿವೃತ್ತ ಏರ್ ಮಾರ್ಷಲ್ ಕೆ.ಸಿ. ನಂದಾ ಕಾರ್ಯಪ್ಪ, ಜಿಲ್ಲಾಧಿಕಾರಿ ಎಸ್.ಜೆ ಸೋಮಶೇಖರ್, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಅಪರ ಜಿಲ್ಲಾಧಿಕಾರಿ ಸಹನಾ ಎಸ್. ಹಾದಿಮನಿ ಹಾಗೂ ಇತರರು ಪಾಲ್ಗೊಂಡಿದ್ದರು.