ಮಡಿಕೇರಿ, ಆ. ೧೪: ಆಗಸ್ಟ್ ೧೫ರ ಈ ದಿನ ಇಡೀ ಭಾರತದಾದ್ಯಂತ ಸ್ವಾತಂತ್ರೊö್ಯÃತ್ಸವದ ಸಂಭ್ರಮ ಮನೆ ಮಾಡುತ್ತಿದೆ. ಎಲ್ಲೆಲ್ಲೂ ದೇಶಭಕ್ತಿ ಭಾರತಾಂಬೆಯ ಬಗ್ಗೆ ಅಭಿಮಾನ ಪೂರಕವಾದ ಸನ್ನಿವೇಶಗಳು ಮೇಳೈಸುತ್ತವೆ. ಇದು ಇಡೀ ದೇಶದ ಹಬ್ಬ... ಎಲ್ಲೆಲ್ಲೂ ರಾಷ್ಟçಧ್ವಜಾರೋಹಣದೊಂದಿಗೆ ಜೈಹಿಂದ್ ಘೋಷಣೆ ಪ್ರತಿಯೊಬ್ಬರ ಹೃದಯಾಂತರಾಳದಿAದ ಹೊರಬರುತ್ತಿದೆ.
ದೇಶಕ್ಕೆ ಸ್ವಾತಂತ್ರö್ಯ ಲಭಿಸಿ ೭೯ ವರ್ಷಗಳಾಗುತ್ತವೆ. ಈ ಸುಧೀರ್ಘ ವರ್ಷಗಳಲ್ಲಿ ದೇಶ ಸದೃಢಗೊಂಡಿರುವುದು ನಿಜ. ಇದು ಹೆಮ್ಮೆಯ ವಿಚಾರವೂ ಹೌದು. ಆದರೆ, ಈ ಹಿಂದೊಮ್ಮೆ ಪ್ರತ್ಯೇಕ ರಾಜ್ಯದೊಂದಿಗೆ ತನ್ನದೇ ಆದ ಸರಕಾರ, ಆಡಳಿತ ವ್ಯವಸ್ಥೆಯೊಂದಿಗೆ ಸುಭದ್ರವಾಗಿದ್ದ ಕೊಡಗು ಮಾತ್ರ ಅಭದ್ರತೆ ಎದುರಿಸುವಂತಾಗುತ್ತಿದೆ.
ಚರAಡಿ, ರಸ್ತೆಯಂತಹ ವಿಚಾರಗಳು ಬೇರೆ ಇನ್ನಿತರ ಅಭಿವೃದ್ಧಿ ವಿಚಾರಗಳೂ ಒತ್ತಟ್ಟಿಗಿರಲಿ. ಆದರೆ ಬಹುಮುಖ್ಯವಾಗಿ ಇಡೀ ಕೊಡಗು ಪ್ರಸ್ತುತ ತಲ್ಲಣಗೊಳ್ಳುವಂತಾಗಿರುವುದು, ಕಾಡಾನೆ, ಹುಲಿ, ಚಿರತೆ, ಕಾಡೆಮ್ಮೆಗಳಂತಹ ವನ್ಯಜೀವಿಗಳಿಂದ. ಕಾಡು ಬಿಟ್ಟು ನಾಡಿನತ್ತ ರಾಜಾರೋಷವಾಗಿ ನುಗ್ಗಿ ಬರುತ್ತಿರುವ ವನ್ಯಜೀವಿಗಳ ಹಾವಳಿ ದಿನೇ ದಿನೇ ಎಲ್ಲೆ ಮೀರುತ್ತಿದೆ. ಯಾವದಾದರೊಂದು ಕಡೆಯಲ್ಲಿ ವನ್ಯಪ್ರಾಣಿಗಳ ದಾಳಿ ವಿಚಾರ ಇದೀಗ ದಿನನಿತ್ಯದ ಸುದ್ದಿಯಾಗುತ್ತಿದೆ. ಆದರೂ ಈ ವಿಚಾರ ಗಂಭೀರವೇ ಅಲ್ಲವೇನೋ ಎಂಬAತೆ ಸರಕಾರಗಳಿಂದ ನಗಣ್ಯವಾಗುತ್ತಿರುವುದು ಮಾತ್ರ ವಿಪಯಾಸ.
ಇದರಿಂದಾಗಿ ಕೊಡಗಿನ ಜನರು ಕಂಗಾಲಾಗುತ್ತಿದ್ದಾರೆ. ಸಂಜೆ - ರಾತ್ರಿಯ ಸಮಯ ಹೋಗಲಿ, ಹಾಡಹಗಲೇ ರಸ್ತೆಗಳಲ್ಲಿ, ತೋಟಗಳಲ್ಲಿ ಮಾನವನ ಮೇಲೆ ದಾಳಿಗಳಾಗುತ್ತಿವೆ. ಇತ್ತೀಚಿನ ಕೆಲ ಸಮಯದಿಂದ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಂಭೀರ ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ಅಂಗವಿಹೀನರಾಗಿ ಬದುಕನ್ನೇ ಕಳೆದುಕೊಳ್ಳುವಂತಾಗಿದೆ.
ಕಷ್ಟಪಟ್ಟು ಬೆಳೆಸುವ ಕೃಷಿ ಫಸಲುಗಳು ನಾಶಗೊಳ್ಳುತ್ತಿರುವುದಲ್ಲದೆ, ಕೃಷಿಯನ್ನೇ ನಂಬಿ ಬದುಕು ಸಾಗಿಸುವವರ ಜೀವನವೇ ದುಸ್ತರವಾಗುತ್ತಿವೆ. ಶಾಲಾ ವಠಾರಗಳಿಗೇ ಕಾಡಾನೆಗಳು ಲಗ್ಗೆಯಿಡುತ್ತಿವೆ. ಮಾರ್ಗ ಮಧ್ಯೆ ಹುಲಿ - ಚಿರತೆಗಳ ದರ್ಶನದಿಂದಾಗಿ ವಿದ್ಯಾರ್ಥಿಗಳು ಶಾಲಾ - ಕಾಲೇಜುಗಳಿಗೆ ತೆರಳುವುದು, ಕಾರ್ಮಿಕರು - ಸಾರ್ವಜನಿಕರು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ತೆರಳುವುದು ಕಷ್ಟಕರವಾಗುತ್ತಿವೆ.
ಈ ಗಂಭೀರ ವಿಚಾರ ದಿನೇ ದಿನೇ ಉಲ್ಬಣಿಸುತ್ತಿದ್ದರೂ ಪರಿಸ್ಥಿತಿಯ ಗಂಭೀರತೆಯನ್ನು ಯಾರೂ ಅರ್ಥೈಸಿಕೊಳ್ಳುತ್ತಿಲ್ಲ. ಅರಣ್ಯ ಇಲಾಖೆಯಂತೂ ಅಸಹಾಯಕ ಪರಿಸ್ಥಿತಿಯಲ್ಲಿದೆ. ನಿಸರ್ಗದತ್ತವಾದ ಕೊಡಗಿನಲ್ಲಿ ಮಳೆಯಾಗಿ ಕಾವೇರಿ ತುಂಬದಿದ್ದರೆ ಏನಾಗುತ್ತದೆ ಎಂಬ ವಿಚಾರ ಪಡೆಯುವ ಪ್ರಾಮುಖ್ಯತೆ ಇದೇ ಮಣ್ಣಿನಲ್ಲಿ ಬದುಕು ಸಾಗಿಸುತ್ತಿರುವವರ ವಾಸ್ತವ ಸನ್ನಿವೇಶವನ್ನು ಪ್ರತಿಬಿಂಬಿಸುವ ಮಟ್ಟಿಗೆ ಪ್ರಾಮುಖ್ಯತೆ ಕಾಣುತ್ತಿಲ್ಲ.
ಇದರಿಂದಾಗಿ ಇಂದು ಕೊಡಗು ಸ್ವತಂತ್ರ ಭಾರತದಲ್ಲಿ ಅತಂತ್ರವಾಗುತ್ತಿದೆ ಎಂಬದು ಜನಸಾಮಾನ್ಯರ, ರೈತಾಪಿ ವರ್ಗದ ಕೂಲಿ - ಕಾರ್ಮಿಕರ ಅಳಲಾಗಿದೆ.
ಸರಕಾರ ನಡೆಸಿದವರನ್ನು, ನಡೆಸುತ್ತಿರುವವರನ್ನು ಪರಸ್ಪರ ದೂಷಿಸಿ ಪ್ರಯೋಜನವಿಲ್ಲ. ಸಂಬAಧಿಸಿದ ಇಲಾಖೆ, ಈಗಿನ ರಾಜ್ಯ, ಕೇಂದ್ರ ಸರಕಾರಗಳು ಈ ಗಂಭೀರತೆಯನ್ನು ಅರಿಯದಿದ್ದಲ್ಲಿ ಶಾಶ್ವತವಾದ ಯೋಜನೆಗಳನ್ನು ರೂಪಿಸದೇ ಇದ್ದಲ್ಲಿ ಕೊಡಗಿನ ಜನರು ಸ್ವಾತಂತ್ರö್ಯ ಉತ್ಸವದ ಸಂಭ್ರಮಪಡುವ ಬದಲು ಸ್ವಾತಂತ್ರö್ಯ ಪೂರ್ವದಂತೆಯೇ ಭಯ, ಆತಂಕ ಅನಿಶ್ಚಿತತೆಯ ಬದುಕನ್ನು ಸವೆಸಬೇಕಾದ ಅನಿವಾರ್ಯತೆಯಲ್ಲಿಯೇ ಮುಂದುವರಿಯುವ ನೋವು ಕಾಡತೊಡಗಿದೆ.
- ಶಶಿ ಸೋಮಯ್ಯ