ವೀರಾಜಪೇಟೆ, ಆ. ೧೪: ವೀರಾಜಪೇಟೆ ಕಾವೇರಿ ಕಾಲೇಜಿನ ಎನ್‌ಸಿಸಿ ಘಟಕ, ೬/೧೯ ಕರ್ನಾಟಕ ಬೆಟಾಲಿಯನ್ ವತಿಯಿಂದ ಸ್ವಾತಂತ್ರೊö್ಯÃತ್ಸವ ಅಂಗವಾಗಿ ತಿರಂಗ ಯಾತ್ರೆ ನಡೆಯಿತು.

ಕಾಲೇಜಿನ ಆವರಣದಲ್ಲಿ ಪದವಿ ವಿಭಾಗದ ಪ್ರಾಂಶುಪಾಲ ಡಾ. ಕೆ.ಜಿ. ವೀಣಾ ಮೆರವಣಿಗೆಗೆ ಚಾಲನೆ ನೀಡಿದರು.

ಬಳಿಕ ಎನ್.ಸಿ.ಸಿ. ೧೮ ಕೆಡೆಟ್‌ಗಳು ತ್ರಿವರ್ಣ ಧ್ವಜವನ್ನು ಹಿಡಿದು ಭಾರತ ಮಾತೆಗೆ ಜಯ ಘೋಷ ಹಾಕುತ್ತ ನಿಸರ್ಗ ಲೇಜೌಟ್, ಪಂಜರಪೇಟೆ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿದರು.

ಈ ಸಂದರ್ಭ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಬೋಜಮ್ಮ, ಐಕ್ಯೂಎಸಿ ಸಂಯೋಜಕ ಎಲ್.ಆರ್. ರಾಘವೇಂದ್ರ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಮುಖ್ಯಸ್ಥ ಸೋಮಣ್ಣ, ಉಪನ್ಯಾಸಕರಾದ ಪವಿತ್ರ, ಸುನಿಲ್ ಇದ್ದರು.