ಕುಶಾಲನಗರ, ಆ. ೧೪: ಹಿಂದೂ ಜಾಗರಣಾ ವೇದಿಕೆ ಕುಶಾಲನಗರ ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಗರದ ಮುಖ್ಯ ರಸ್ತೆಗಳಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

ಪಟ್ಟಣದ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟ ಪಂಜಿನ ಮೆರವಣಿಗೆ ಕುಶಾಲನಗರ ಗಣಪತಿ ದೇವಸ್ಥಾನ ಮೂಲಕ ರಥ ಬೀದಿಯಲ್ಲಿ ಸಾಗಿ ರೈತ ಸಹಕಾರ ಭವನದಲ್ಲಿ ಸಮಾಪ್ತಿಗೊಂಡಿತು.