ಪೊನ್ನಂಪೇಟೆ, ಆ. ೧೪: ಪೊನ್ನಂಪೇಟೆಯಲ್ಲಿರುವ ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಕಚೇರಿಗೆ ಬಾಡಿಗೆ ರಹಿತವಾಗಿ ಮಳಿಗೆ ಒದಗಿಸಿಕೊಟ್ಟಿರುವ ಆಲೆಮಾಡ ದೇಚಮ್ಮ, ಬಾಳಿಮನೆ ಗೋಪಾಲಕೃಷ್ಣ ದಂಪತಿಯನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಪುತ್ರ ಬಾಳಿಮನೆ ಅಮೇಯ ಉಪಸ್ಥಿತರಿದ್ದರು.

ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತಿರ ಪಿ. ಸೋಮಣ್ಣ ಮಾತನಾಡಿ, ಹಿರಿಯರು ಸಾರ್ವಜನಿಕ ಕಾರ್ಯದಲ್ಲಿ ತೊಡಗಿಕೊಳ್ಳಲು ಕಚೇರಿಯನ್ನು ಉಚಿತವಾಗಿ ನೀಡಿರುವ ದಂಪತಿ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಮನವಿಗೆ ಸ್ಪಂದಿಸಿರುವುದರಿAದ ನಾವು ನಿತ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ. ಹಿರಿಯರಿಗೂ ಗೌರವ ನೀಡಿದಂತಾಗಿದೆ ಎಂದರು.

ಸAಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ನಮ್ಮ ಮನವಿಗೆ ಸ್ಪಂದಿಸಿ ನೀಡಿರುವ ಬೆಂಬಲ ಹಿರಿಯರು ಸಾರ್ವಜನಿಕವಾಗಿ ಪಾಲ್ಗೊಂಡು ಸಮಾಜಕ್ಕೆ ಮತ್ತಷ್ಟು ಕೊಡುಗೆ ನೀಡಲು ಸಹಕಾರಿಯಾಗಿದೆ. ಇಂತಹ ಮಹನೀಯರಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ಸಿಗುವಂತಾಗಿದೆ ಎಂದರು.

ಆಲೆಮಾಡ ದೇಚಮ್ಮ ಮಾತನಾಡಿ, ಹಿರಿಯರಿಗೆ ನೀಡಿದ ಸಣ್ಣಮಟ್ಟದ ಕೊಡುಗೆಯಿಂದ ಹೆಚ್ಚು ತೃಪ್ತಿ ಸಿಗುವಂತಾಗಿದೆ. ಹಿರಿಯರನ್ನು ಕಾಣುವಾಗ ಮನಸ್ಸು ನಿರಾಳವಾಗುತ್ತದೆ ಎಂದರು.

ವೇದಿಕೆ ಕಾರ್ಯದರ್ಶಿ ಚೇಂದೀರ ಬೋಪಣ್ಣ, ಉಪಾಧ್ಯಕ್ಷ ಮಂಡೆಚAಡ ಗಣಪತಿ, ಖಜಾಂಚಿ ಐನಂಡ ಮಂದಣ್ಣ, ಜಂಟಿ ಕಾರ್ಯದರ್ಶಿ ನೆರೆಯಂಡಮ್ಮನ ಸುಬ್ರಮಣಿ, ಲೆಕ್ಕ ಪರಿಶೋಧಕ ಬೊಳಿಯಂಗಡ ದಾದು ಪೂವಯ್ಯ ಉಪಸ್ಥಿತರಿದ್ದರು.