ಮಡಿಕೇರಿ, ಆ.೧೩: ಕೇಂದ್ರ ಕಸ್ತೂರಿರಂಗನ್ ವರದಿಯ ೭ನೇ ಅಧಿಸೂಚನೆ ಹೊರಡಿಸಿದ್ದು, ಇದರಿಂದ ಕೃಷಿಕರಿಗೆ, ರೈತರಿಗೆ ತೊಂದರೆಯಾಗಲಿದೆ. ಈ ವಿಚಾರವಾಗಿ ಬಿಜೆಪಿ ಪಕ್ಷಾತೀತವಾಗಿ ಹೋರಾಟ ಮಾಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಕಸ್ತೂರಿ ರಂಗನ್ ವರದಿ ಸಂಬAಧ ಸಂಸದರೊAದಿಗೆ ಮಾತುಕತೆ ನಡೆಸಲಾಗಿದ್ದು, ಜನರಿಗೆ ತೊಂದರೆಯಾಗದ ರೀತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದೊಂದಿಗೆ ವ್ಯವಹರಿಸುವದಾಗಿ ಅವರು ತಿಳಿಸಿದ್ದಾರೆ. ಸಂಸದರು ಮತ್ತೊಮ್ಮೆ ಎಲ್ಲಾ ಸಂಘ ಸಂಸ್ಥೆಗಳು, ಪಂಚಾಯ್ತಿ ಮಟ್ಟದ ಸದಸ್ಯರುಗಳು, ರೈತರಿಂದ ಮಾಹಿತಿ ಪಡೆಯಲಿದ್ದಾರೆ ಎಂದು ಹೇಳಿದರು. ಈ ವರದಿ ಜಾರಿಯಾಗಬಾರದೆಂಬದು ಬಿಜೆಪಿಯ ನಿಲುವಾಗಿದ್ದು, ಇದಕ್ಕೆ ಜನತೆ ಕೂಡ ವಿರೋಧ ವ್ಯಕ್ತಪಡಿಸಿ ಆಕ್ಷೇಪಣೆ ಸಲ್ಲಿಸಬೇಕು. ರಾಜಕೀಯ ಮಾಡದೆ, ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು, ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಆಕ್ಷೇಪಣೆ ತಲುಪಿಸಬೇಕು. ಅರಣ್ಯಕ್ಕೂ ಜನರಿಗೂ ತೊಂದರೆ ಆಗದ ರೀತಿಯಲ್ಲಿ ವರದಿ ಜಾರಿಯಾಗಬೇಕು. ಈ ವಿಚಾರದಲ್ಲಿ ಬಿಜೆಪಿ ಪಕ್ಷಾತೀತವಾಗಿ ಹೋರಾಟ ಮಾಡಲಿದೆ ಎಂದು ರವಿ ಕಾಳಪ್ಪ ಹೇಳಿದರು.
ಸಮಸ್ಯೆಗಳ ಸರಣಿ
ಜಿಲ್ಲೆಯಲ್ಲಿ ಮಳೆಯಿಂದಾಗಿ ರೈತರ ಬೆಳೆ, ಬಡವರ ಮನೆಗಳಿಗೆ ಸಾಕಷ್ಟು ಹಾನಿಯಾಗಿದೆ. ರಸ್ತೆ, ಚರಂಡಿಗಳೂ ದುಸ್ಥಿತಿಗೀಡಾಗಿವೆ. ಸರಕಾರ ಹಾಗೂ ಶಾಸಕರುಗಳು ಸ್ಪಂದಿಸಿ ಜಿಲ್ಲೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಹಿಂದೆ ಬಿಜೆಪಿ ಶಾಸಕರುಗಳಿದ್ದಾಗ ಯಾವದೇ ಸರಕಾರವಿದ್ದರೂ ವಿಶೇಷ ಪ್ಯಾಕೇಜ್ ಒದಗಿಸಿದ್ದರು. ಬೆಳೆ ಹಾನಿಗೆ ರೈತರಿಗೆ ಪರಿಹಾರ ಕೂಡ ಸಿಕ್ಕಿದೆ. ಇದೀಗ ಕಳೆದ ಮೂರು ವರ್ಷಗಳಿಂದ ಅನುದಾನ, ಪರಿಹಾರ ಕೂಡ ಇಲ್ಲದಂತಾಗಿದೆ. ಕೂಡಲೇ ಪರಿಹಾರ ಒದಗಿಸಬೇಕು, ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಯಾವದೇ ನಷ್ಟವಾಗಿಲ್ಲವೆಂದು ಶಾಸಕರುಗಳು ಹೇಳಿಕೆ ನೀಡಲಿ ಎಂದು ರವಿ ಕಾಳಪ್ಪ ಹೇಳಿದರು. ಜಿಲ್ಲೆಯಲ್ಲಿ ಸಮಸ್ಯೆಗಳ ಸರಣಿಗಳಿವೆ, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಕಳೆದ ಮೂರು ತಿಂಗಳಿನಿAದ ವೃದ್ಧಾಪ್ಯ ವೇತನ, ವಿಧವಾ ವೇತನ ಸಿಗುತ್ತಿಲ್ಲ, ಅವುಗಳಿಗೆ ೩೨ ಸಾವಿರ ಆದಾಯ ಮಿತಿ ಕೇಳಲಾಗುತ್ತಿದೆ, ಉಚಿತ ಅಕ್ಕಿ ನೀಡುವ ಅನ್ನಭಾಗ್ಯಕ್ಕೆ ಜಾತಿ ಪ್ರಮಾಣ ಪತ್ರ ಕೇಳಲಾಗುತ್ತಿದೆ, ಅಕ್ಕಿ ಕೊಡಲು ಜಾತಿ ಯಾಕೆ ನೋಡಬೇಕೆಂದು ಪ್ರಶ್ನಿಸಿದ ಅವರು, ಸರಕಾರ ಒಂದು ರೀತಿಯಲ್ಲಿ ಯೋಜನೆ ಜಾರಿ ಮಾಡಿ ಅದು ಅನುಷ್ಠಾನವಾಗದಂತೆ ನೋಡಿಕೊಳ್ಳುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸದಿದ್ದಲ್ಲಿ ಸಂಘಟಿತ ಹೋರಾಟ ಮಾಡಲಾಗುವದೆಂದು ಎಚ್ಚರಿಸಿದರು.
ರಾಜೀನಾಮೆಗೆ ಆಗ್ರಹ
ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕೆಂದು ರವಿ ಕಾಳಪ್ಪ ಆಗ್ರಹಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಸಚಿವರಾಗಿರುವ ನಾಗೇಂದ್ರ ಅವರು ಈ ಹಿಂದೆ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ೧೯೭ ಕೋಟಿ ಹಗರಣ ನಡೆಸಿದ ಹಿನ್ನೆಲೆಯಲ್ಲಿ ರಾಜೀನಾಮೆ ಕೂಡ ನೀಡಿದ್ದರು. ಅವರ ವಿರುದ್ಧ ಈಗಲೂ ತನಿಖೆ ನಡೆಯುತ್ತಿದೆ. ಈ ಹಗರಣದಿಂದಾಗಿ ನಿಗಮದ ಅಮಾಯಕ ಅಧಿಕಾರಿ ಆತ್ಮಹತ್ಯೆ ಕೂಡ ಮಾಡಿಕೊಂಡರು. ನಾಗೇಂದ್ರ ವಿರುದ್ಧ ಆರೋಪ ಪಟ್ಟಿ ಇದ್ದರೂ ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಅನಿವಾರ್ಯತೆ ಮುಖ್ಯಮಂತ್ರಿಗಳಿಗೆ ಏನಿತ್ತು ಎಂದು ಪ್ರಶ್ನಿಸಿದರಲ್ಲದೆ, ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದರು.
ಭ್ರಷ್ಟ ಸಚಿವರನ್ನು ಸಂಪುಟದಿAದ ಕೈಬಿಡುವಂತೆ ಸದನ ಆರಂಭವಾಗುವ ಮುನ್ನವೇ ಬಿಜೆಪಿ ಆಗ್ರಹಿಸಿತ್ತು. ಆದರೂ ಕೈಬಿಟ್ಟಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕು. ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ಹೇಳಿದರು.
ಅನುದಾನ ನೀಡಲಿ
ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ; ಭ್ರಷ್ಟರನ್ನು ಕಂಡರೆ ಕಠಿಣ ಕ್ರಮ ಜರುಗಿಸುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು; ಇದೀಗ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವದಾದರೂ ಏಕೆ, ಮಂತ್ರಿ ಮಾಡಿದ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರ ಅಧಿಕಾರ ಪಡೆಯುವಾಗ ಎಲ್ಲರಿಗೂ ಉಚಿತ ಭಾಗ್ಯ ಎಂದು ಹೇಳಿ ಇದೀಗ ಜಾತಿ ಪ್ರಮಾಣ ಪತ್ರ ಕೇಳುತ್ತಿರುವದಾದರೂ ಏಕೆ, ಮುಖ್ಯಮಂತ್ರಿಗಳು ಉತ್ತಮ ಕೆಲಸ ಮಾಡಲಿ ಎಲ್ಲರ ಸಹಕಾರವಿರುತ್ತದೆ. ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಸಿಗುತ್ತದೆಂಬ ಭಾವನೆ ಹುಸಿಯಾಗಿದೆ. ಉಪ ಸಭಾಧ್ಯಕ್ಷ ಸ್ಥಾನವನ್ನೂ ಕಸಿದುಕೊಳ್ಳಲಾಗಿದೆ. ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನವನ್ನಾದರೂ ಒದಗಿಸಲಿ ಎಂದು ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಬಿ.ಕೆ.ಅರುಣ್‌ಕುಮಾರ್, ಮಾಧ್ಯಮ ಪ್ರಮುಖ್ ಸಜೀಲ್ ಕೃಷ್ಣನ್ ಇದ್ದರು.