ಮಡಿಕೇರಿ, ಆ. ೧೩: ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ರಾಷ್ಟಾçದ್ಯಂತ ನಡೆಯುತ್ತಿರುವ ಹರ್ ಘರ್ ತಿರಂಗಾ ಅಭಿಯಾನದಡಿಯಲ್ಲಿ ಕಾಪ್ಸ್ ವಿದ್ಯಾಸಂಸ್ಥೆಯ ಎನ್.ಸಿ.ಸಿ ಕೆಡೆಟ್‌ಗಳಿಂದ ತಾ.೧೧ ರಂದು ಸೈಕಲ್ ಜಾಥಾ ನಡೆಯಿತು. ೩೬ ಮಂದಿ ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದರು. ವಿದ್ಯಾಸಂಸ್ಥೆಯ ಆವರಣದಿಂದ ಪಾಲಿಬೆಟ್ಟ ರಸ್ತೆವರೆಗೆ ಜಾಥಾ ನಡೆಯಿತು. ಪ್ರಾಂಶುಪಾಲರಾದ ಡಾ ಎಮ್ ರಾಮಚಂದ್ರನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ರಾಷ್ಟç ನಿರ್ಮಾಣದಲ್ಲಿ ಯುವಜನರ ಹಾಗೂ ಎನ್.ಸಿ.ಸಿ ಪಾತ್ರದ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.