ಮಡಿಕೇರಿ, ಆ. ೧೩: ೮೦ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿ.ಎಸ್.ಎನ್.ಎಲ್ ವತಿಯಿಂದ ಹೊಸ ಸಂಪರ್ಕಗಳಿಗೆ ಉಚಿತ ೪ಜಿ ಸಿಮ್ ಗಳನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಉಚಿತ ಸಿಮ್ ಪಡೆದ ಬಳಿಕ ರೂ.೧ ರೀಚಾರ್ಜ್ ಮಾಡಿದರೆ ಗ್ರಾಹಕರಿಗೆ ಎಲ್ಲಾ ನೆಟ್ವರ್ಕ್ಗಳಿಗೆ ಅನಿಯಮಿತ(ಅನ್ ಲಿಮಿಟೆಡ್) ಕರೆಗಳು ದೊರಕಲಿದೆ. ಇದರೊಂದಿಗೆ ದಿನಕ್ಕೆ ೧೦೦ ಎಸ್.ಎಂ.ಎಸ್ ಹಾಗೂ ೨೪ ದಿನಗಳ ಅವಧಿಗೆ ಪ್ರತಿನಿತ್ಯ ೧ ಜಿ.ಬಿ ಡೇಟಾ ಕೂಡ ಸಿಗಲಿದೆ. ಸಿಮ್ ಪಡೆದವರಿಗೆ ಬಿ.ಎಸ್.ಎನ್.ಎಲ್ ಸೆಲ್ಫ್ಕೇರ್ ಆ್ಯಪ್ ಮೂಲಕ ಸಾವಿರಕ್ಕೂ ಅಧಿಕ ಚಾನೆಲ್ಸ್, ಸಿನಿಮಾಗಳು, ವೆಬ್ಸೀರೀಸ್, ಹಾಡು, ಭಕ್ತಿಗೀತೆ ಹಾಗೂ ಇತರ ಸೇವೆಗಳು ಉಚಿತವಾಗಿ ಲಭ್ಯವಾಗಲಿದೆ. ಹೊಸ ಸಿಮ್ಗಳನ್ನು ಬಿ.ಎಸ್.ಎನ್.ಎಲ್ ಸೆಲ್ಫ್ಕೇರ್ ಆಪ್ ಅಥವಾ ವಾಟ್ಯಾ÷್ಸಪ್ ಸಂಖ್ಯೆ ೧೮೦೦೪೪೪೪ ಅನ್ನು ಸಂಪರ್ಕಿಸಿ ಪಡೆಯಬಹುದಾಗಿದೆ. ಸೆಪ್ಟೆಂಬರ್ ೧೨ರವರೆಗೆ ಈ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.