ಭಾಗಮಂಡಲ, ಆ. ೧೨: ಪ್ರತಿ ವರ್ಷದಂತೆ ಈ ವರ್ಷವೂ ಸಂಪ್ರದಾಯ ಬದ್ಧವಾಗಿ ಪೊಲಿಂಕಾನ ಉತ್ಸವವನ್ನು ಭಾಗಮಂಡಲದಲ್ಲಿ ಆಚರಿಸಲಾಯಿತು.

ಅರ್ಚಕರಾದ ಹರೀಶ್ ಭಟ್ ಮತ್ತು ರವಿ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಪ್ರತಿ ವರ್ಷ ಬಿರುಸಿನ ಮಳೆಯ ನಡುವೆ ಪೊಲಿಂಕಾನ ಉತ್ಸವವನ್ನು ಆಚರಿಸಿದರೂ ಈ ವರ್ಷ ಭಿನ್ನವಾಗಿ ಮಳೆಯ ಕೊರತೆಯ ನಡುವೆ ಸಾಂಪ್ರದಾಯಿಕ ಆಚರಣೆ ಅದ್ದೂರಿಯಿಂದ ನಡೆಯಿತು. ಮಳೆಯ ರೌದ್ರಾವತಾರ ಕಡಿಮೆಯಾಗಿ ಕಾವೇರಿ ನದಿ ಶಾಂತಗೊಳ್ಳಲಿ ಎಂಬ ಉದ್ದೇಶದಿಂದ ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವವನ್ನು ಬುಧವಾರ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಆಚರಿಸಲಾಯಿತು. ಈ ಹಿಂದೆ ಕಾವೇರಿ ತುಂಬಿ ಹರಿದು ಪ್ರವಾಹವಾಗಿ ಹರಿಯುವ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು.

ಭಗಂಡೇಶ್ವರ ದೇವಾಲಯದಲ್ಲಿ ಬಾಳೆದಿಂಡಿನ ಉತ್ಸವ ಮಂಟಪದೊAದಿಗೆ ಕಾವೇರಿ ಮಾತೆಗೆ ವಸ್ತಾçಭರಣ, ಕರಿಮಣಿ, ಬಿಚ್ಚೋಲೆ, ಸೀರೆ, ಬೆಳ್ಳಿತಟ್ಟೆ, ಬೆಳ್ಳಿತೊಟ್ಟಿಲು, ಬೆಳ್ಳಿಮಗು, ಕರಿಮಣಿ ಬಿಚ್ಚೋಲೆ ಬೆಳ್ಳಿಯ ತಟ್ಟೆಯಲ್ಲಿಟ್ಟು ಪೂಜಿಸಲಾಯಿತು. ಚಂಡೆವಾದ್ಯದೊAದಿಗೆ ಬಾಳೆದಿಂಡುಗಳಿAದ ರಚಿಸಲಾದ ಪೊಲಿಂಕಾನ ಮಂಟಪವನ್ನು ಭಗಂಡೇಶ್ವರ ದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆ ಬಂದು ಮಂಗಳಾರತಿ ನಡೆಸಿದ ನಂತರ ತ್ರಿವೇಣಿ ಸಂಗಮದ ಬಳಿ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಂತರ ನದಿ ನೀರಿನಲ್ಲಿ ಬಾಳೆದಿಂಡಿನ ಮಂಟಪವನ್ನು ತೇಲಿಬಿಡಲಾಯಿತು.

೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈ ಸಂದರ್ಭ ಮಾಜಿ ಸಚಿವ ಸುರೇಶ್ ಕುಮಾರ್, ಪಾರುಪತ್ತೆಗಾರ ಪೊನ್ನಣ್ಣ, ಮಂಜು, ದೇವಂಗೋಡಿ ಹರ್ಷ ಕುದುಪಜೆ ಪ್ರಕಾಶ್, ರವಿ ಹೆಬ್ಬಾರ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್, ಭಾಗಮಂಡಲ ತಕ್ಕರಾದ ಬಲ್ಲಡ್ಕ ಅಪ್ಪಾಜಿ ಸೇರಿದಂತೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.