ಕುಶಾಲನಗರ, ಆ. ೧೨: ಭೀಮನ ಅಮವಾಸ್ಯೆ ಹಿನ್ನೆಲೆ ಕುಶಾಲನಗರ ಕಾವೇರಿ ನದಿಯ ತಟದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಟ್ರಸ್ಟ್, ಎಸ್ಎನ್ಡಿಪಿ ಕುಶಾಲನಗರ ಶಾಖೆ ಮತ್ತು ಕೇರಳ ಸಮಾಜದ ಸಹಭಾಗಿತ್ವದಲ್ಲಿ ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿಯ ತಟದಲ್ಲಿ ನಾಲ್ಕನೆ ವರ್ಷದ ಪಿತೃ ಪಿಂಡ ಪ್ರದಾನ ನಡೆಯಿತು.
ಬೆಳಿಗ್ಗೆ ೬ ಗಂಟೆಯಿAದ ನದಿ ತಟದಲ್ಲಿ ರಾಮಣ್ಣ ಶಾಂತಿ ಅವರ ನೇತೃತ್ವದಲ್ಲಿ ಪಿತೃ ಪಿಂಡ ತರ್ಪಣ ಪೂಜೆ ವಿಧಿ ವಿಧಾನಗಳು ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲೆ, ಹೊರ ಜಿಲ್ಲೆಗಳಿಂದ ಸುಮಾರು ೫೦೦ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಶ್ರೀ ಮುತ್ತಪ್ಪ ಟ್ರಸ್ಟ್ ಅಧ್ಯಕ್ಷ ಕೆ. ವರದ, ಎಸ್ಎನ್ಡಿಪಿ ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಟಿ. ಗಣೇಶ್, ಉಪಾಧ್ಯಕ್ಷ ಕರಣ್, ಕಾರ್ಯದರ್ಶಿ ಅನೀಶ್ ಕುಮಾರ್, ಖಜಾಂಚಿ ಟಿ.ಎಸ್.ಉದಯ್ ಹಾಗೂ ಸದಸ್ಯರು ಇದ್ದರು.