ಚೆಯ್ಯಂಡಾಣೆ, ಆ. ೧೧: ಬಾವಲಿ ಅಂಗನವಾಡಿ ಕೇಂದ್ರದಲ್ಲಿ ಪಾರಾಣೆ ಮತ್ತು ಬಾವಲಿ ಅಂಗನವಾಡಿ ಕಾರ್ಯಕರ್ತೆಯರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನೆರಿಯಂಡಮ್ಮAಡ ಬೆಳ್ಳಿಮ್ಮಯ್ಯ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎದೆ ಹಾಲಿನ ಮಹತ್ವ, ಪ್ರಯೋಜನ ಹಾಗೂ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಆಶಾ ಕಾರ್ಯಕರ್ತೆಯರಾದ ಜಯ,ಜಯಂತಿ ಕುಮಾರಿ ಹಾಗೂ ಅಂಗನವಾಡಿ ಕಾರ್ಯಕರ್ತೆ ರೋಹಿಣಿ ಅವರು ಸಮಗ್ರ ಮಾಹಿತಿ ನೀಡಿದರು. ಈ ಸಂದರ್ಭ ಅಂಗನವಾಡಿಕೇAದ್ರದ ಸಹಾಯಕಿ ಯಮುನಾ, ಮಕ್ಕಳ ಪೋಷಕರು, ಊರಿನ ಹಿರಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪುಟಾಣಿ ಮಕ್ಕಳು ಹಾಜರಿದ್ದರು.