ಮಡಿಕೇರಿ, ಆ. ೧೧: ಆಲೆಮಾಡ ಕುಟುಂಬದ ವತಿಯಿಂದ ಆಲೆಮಾಡ ತೋಕ್ ನಮ್ಮೆ - ೨೦೨೬ ಅಂತರ-ಕೊಡವ ಕುಟುಂಬಗಳ ಶೂಟಿಂಗ್ ಪಂದ್ಯಾವಳಿಯನ್ನು ಅಕ್ಟೋಬರ್ ೧೦ ಮತ್ತು ೧೧ರಂದು ಪೊನ್ನಂಪೇಟೆ ಕೆಪಿಎಸ್ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಪಂದ್ಯಾವಳಿಯು ಕೊಡವ ಶೂಟರ್ಸ್ ಫೆಡರೇಶನ್ ಸಹಯೋಗದಲ್ಲಿ ಹಾಗೂ ಅದರ ನಿಯಮಾವಳಿಗಳಿಗೆ ಅನುಗುಣವಾಗಿ ನಡೆಯಲಿದೆ ಎಂದು ಪಂದ್ಯಾವಳಿಯ ನಿರ್ದೇಶಕ ಆಲೆಮಾಡ ಕೀರ್ತನ್ ತಮ್ಮಯ್ಯ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನ ದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತ ನಾಡಿದರು.

ಕಳೆದ ವರ್ಷ ಪೆಮ್ಮಂಡ ಕುಟುಂಬದ ವತಿಯಿಂದ ಆಯೋಜಿಸಲಾಗಿದ್ದ ಶೂಟಿಂಗ್ ಪಂದ್ಯಾವಳಿಗೆ ಕೊಡವ ಕುಟುಂಬಗಳಿAದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈ ವರ್ಷ ಎರಡನೇ ವರ್ಷದ ಶೂಟಿಂಗ್ ಪಂದ್ಯಾವಳಿಯನ್ನು ಆಲೆಮಾಡ ಕುಟುಂಬದ ವತಿಯಿಂದ ಆಯೋಜಿಸಲಾಗುತ್ತಿದೆ. ಈ ಬಾರಿ ಕೊಡವ ಕುಟುಂಬಗಳಿAದ ಹೆಚ್ಚಿನ ಉತ್ಸಾಹದ ನಿರೀಕ್ಷೆಯಿದ್ದು, ಸುಮಾರು ೩೫೦ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.

ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರು ಇರಲಿದ್ದು, ೧೨ ಬೋರ್ ಶಾಟ್‌ಗನ್ ಹಾಗೂ .೨೨ ರೈಫಲ್ ವಿಭಾಗಗಳಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳು ನಡೆಯಲಿದೆ. ಪ್ರತಿ ಕೊಡವ ಕುಟುಂಬದಿAದ ಗರಿಷ್ಠ ನಾಲ್ಕು ತಂಡಗಳು ಭಾಗವಹಿಸಲು ಅವಕಾಶವಿದೆ. ಇದರ ಜೊತೆಗೆ ಓಪನ್ ಈವೆಂಟ್ ಏರ್‌ಗನ್ ಸ್ಪರ್ಧೆಯನ್ನೂ ಆಯೋಜಿಸಲಾಗಿದ್ದು, ಈ ಸ್ಪರ್ಧೆಗೆ ಅದೇ ದಿನ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದರು.

ನೋAದಣಿ ಪ್ರಕ್ರಿಯೆಯು ಆಗಸ್ಟ್ ೧೬ ರಿಂದ ಆರಂಭವಾಗಲಿದ್ದು, ಸ್ಪರ್ಧಿಗಳು hಣಣಠಿs://ತಿತಿತಿ.ಚಿಟemಚಿಜಚಿ-oಞಞಚಿ.oಟಿಟiಟಿe/ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೆ ಸೆ. ೩೦ ಕೊನೆಯ ದಿನವಾಗಿದೆ. ಆಫ್‌ಲೈನ್ ನೋಂದಣಿಗಾಗಿ ತಮ್ಮಯ್ಯ ೯೭೪೧೨೦೩೧೨೩, ಬೋಪಣ್ಣ ೯೯೦೧೨೨೧೯೪೫ ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಈ ಶೂಟಿಂಗ್ ಪಂದ್ಯಾವಳಿಯಲ್ಲಿ ಒಟ್ಟು ರೂ. ಮೂರು ಲಕ್ಷ ಮೌಲ್ಯದ ಬಹುಮಾನ ಮೊತ್ತ ಘೋಷಿಸಲಾಗಿದೆ. ಮೊದಲ ಬಹುಮಾನವಾಗಿ ೬೦ ಸಾವಿರ ನಗದು ಟ್ರೋಫಿ, ದ್ವಿತೀಯ ೫೦ ಸಾವಿರ ನಗದು, ಟ್ರೋಫಿ, ತೃತೀಯ ಬಹುಮಾನ ೪೦ ಸಾವಿರ ನಗದು, ಟ್ರೋಫಿ, ನಾಲ್ಕನೇ ಬಹುಮಾನ ರೂ. ೩೦ ಸಾವಿರ ನಗದು, ಟ್ರೋಫಿ ಹಾಗೂ ಐದನೇ ಬಹುಮಾನ ರೂ. ೨೦ ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ತಂಡಲ್ಲಿ ಮಹಿಳೆಯರು, ಪುರುಷರು ಒಟ್ಟಾಗಿ ಪಾಲ್ಗೊಳ್ಳಬಹುದಾಗಿದೆ.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೊಡವ ಸಮುದಾಯದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಕೀರ್ತನ್ ತಮ್ಮಯ್ಯ ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಪಂದ್ಯಾವಳಿ ಆಯೋಜನಾ ಸಮಿತಿ ಅಧ್ಯಕ್ಷ ಆಲೆಮಾಡ ಸೋಮಣ್ಣ, ಕಾರ್ಯದರ್ಶಿ ಆಲೆಮಾಡ ಬೋಪಣ್ಣ, ನಿರ್ದೇಶಕರಾದ ಆಲೆಮಾಡ ಪೂವಯ್ಯ, ಆಲೆಮಾಡ ನವೀನ್ ಉಪಸ್ಥಿತರಿದ್ದರು.