ಗ್ರAಥವಿಲ್ಲದ ಕೋಣೆ ಆತ್ಮವಿಲ್ಲದ ದೇಹದಂತೆ, ಉತ್ತಮ ಗ್ರಂಥಗಳು ನಾಡಿನ ಸಂಸ್ಕೃತಿಯ ಪ್ರತೀಕ. ಪುಸ್ತಕ ಪ್ರೇಮವಿಲ್ಲದವನು ಹಣವಂತನಾದರೂ ದರಿದ್ರನೆ. ಒಂದು ಉತ್ತಮ ಪುಸ್ತಕ, ಒಬ್ಬ ಉತ್ತಮ ಗೆಳೆಯನಿದ್ದಂತೆ. ಈ ಮಾತುಗಳು ಗ್ರಂಥಾಲಯದ ಮಹತ್ವವನ್ನು ಒಂದೇ ಸಾಲಿನಲ್ಲಿ ಹೇಳುತ್ತವೆ. ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ ೧೨ ರಂದು ರಾಷ್ಟಿçÃಯ ಗ್ರಂಥಾಲಯ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ರಾಷ್ಟಿçÃಯ ಗ್ರಂಥಪಾಲಕರ ದಿನ ಎಂದೂ ಕೂಡ ಕರೆಯಲಾಗುತ್ತದೆ.

ಈ ದಿನದ ಉದ್ದೇಶ : ಗ್ರಂಥಾಲಯ ವಿಜ್ಞಾನಕ್ಕೆ ಡಾ. ರಂಗನಾಥನ್ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವುದು. ಸಾರ್ವಜನಿಕರಲ್ಲಿ, ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು, ಗ್ರಂಥಾಲಯಗಳ ಮಹತ್ವವನ್ನು ಸಮಾಜಕ್ಕೆ ತಿಳಿಸುವುದು.

ಗ್ರಂಥಾಲಯದ ಹಿನ್ನೆಲೆ ಮತ್ತು ರಂಗನಾಥನ್ ಅವರ ಕೊಡುಗೆ: ಗ್ರಂಥಾಲಯವಿಲ್ಲದ ಸಮಾಜ ಕತ್ತಲೆಯಲ್ಲಿರುತ್ತದೆ ಎಂದಿದ್ದರು ರಂಗನಾಥನ್. ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಬೆಳೆಸುವಲ್ಲಿ, ಪ್ರಚಾರ ಮಾಡುವಲ್ಲಿ ಅವರೇ ಮೊದಲಿಗರು. ೧೯೨೪ ರಲ್ಲಿ ಮದ್ರಾಸಿನಲ್ಲಿ ಮೊದಲ ಸಾರ್ವಜನಿಕ ಗ್ರಂಥಾಲಯ ತೆರೆದ ಇವರು, ಜಗತ್ತಿಗೆ ಗ್ರಂಥಾಲಯ ವಿಜ್ಞಾನದ ಐದು ನಿಯಮಗಳನ್ನು ನೀಡಿದರು.

ದೇಶದಲ್ಲಿ ಡಾ. ಎಸ್.ಆರ್.ರಂಗನಾಥನ್‌ರಷ್ಟು ಗ್ರಂಥಾಲಯದಲ್ಲಿ ಕೃಷಿ ಮಾಡಿದವರು ಮತ್ತೊಬ್ಬರಿಲ್ಲ. ಆದುದರಿಂದ ಅವರನ್ನು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲಾಗಿದೆ. ಇವರ ಕೊಡುಗೆಯನ್ನು ಗೌರವಿಸಿ ೧೯೬೮ ರಿಂದ ಆಗಸ್ಟ್ ೧೨ನ್ನು ರಾಷ್ಟಿçÃಯ ಗ್ರಂಥಾಲಯ ದಿನವಾಗಿ ಆಚರಿಸಲಾಗುತ್ತಿದೆ. ಇಂದು ಗ್ರಂಥಾಲಯ ಕೇವಲ ಪುಸ್ತಕ ಇಡುವ ಸ್ಥಳವಲ್ಲ. ಅದು ಜ್ಞಾನದ ಕೇಂದ್ರ, ಸಂಸ್ಕೃತಿಯ ಕನ್ನಡಿ, ಸಂಶೋಧನೆಯ ಅಡಿಪಾಯ ಮತ್ತು ಡಿಜಿಟಲ್ ಕಲಿಕೆಯ ವೇದಿಕೆಯಾಗಿದೆ.

ಗ್ರಂಥಾಲಯಗಳ ವಿವಿಧ ರೂಪಗಳು : ನಂತರದ ದಿನಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳು, ಮಕ್ಕಳ ಗ್ರಂಥಾಲಯ, ಸಂಚಾರಿ ಗ್ರಂಥಾಲಯ, ಪಂಚಾಯಿತಿ ಗ್ರಂಥಾಲಯಗಳು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗ್ರಂಥಾಲಯದ ಕೊಡುಗೆ ಅಪಾರವಾಗಿದೆ. ಸರ್ಕಾರ ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಒಂದು ಗ್ರಂಥಾಲಯ ತೆರೆಯುವಂತೆ ಮಾಡಿದೆ.

ಓದಿನ ಮಹತ್ವ : ಪುಸ್ತಕವೇ ಬೆಳಕು, ಓದೇ ಸಿರಿ. ಅಕ್ಷರವೇ ಆಸ್ತಿ, ಜ್ಞಾನವೇ ಶಕ್ತಿ. ಜ್ಞಾನದ ಬಾಗಿಲಿನಂತಿರುವ ಪುಸ್ತಕ ಓದುವುದರಿಂದ ನಮ್ಮ ಯೋಚನಾ ಶಕ್ತಿ, ಭಾಷಾ ಕೌಶಲ್ಯ, ಸೃಜನಶೀಲತೆ ಹೆಚ್ಚುತ್ತದೆ.

ಗ್ರಂಥಾಲಯವು ಸ್ಪರ್ಧಾತ್ಮಕ ಯುಗದ ಆಯುಧವಾಗಿದ್ದು, ಐಎಎಸ್, ಕೆಎಎಸ್, ಬ್ಯಾಂಕ್ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಗ್ರಂಥಾಲಯವೇ ಮೊದಲ ತರಗತಿ. ಮೊಬೈಲ್ ವ್ಯಸನದಿಂದ ದೂರಮಾಡಿ, ಮನಸ್ಸಿಗೆ ಶಾಂತಿ ಕೊಡುವ ಏಕೈಕ ಸ್ಥಳ ಗ್ರಂಥಾಲಯ. ಶ್ರೀಮಂತ, ಬಡವ ಎಂಬ ಭೇದವಿಲ್ಲದೆ ಎಲ್ಲರಿಗೂ ಜ್ಞಾನ ಸಂಪಾದನೆಗೆ ಸಮಾನ ಅವಕಾಶ ಕೊಡುವ ಏಕೈಕ ಸ್ಥಳ ಗ್ರಂಥಾಲಯ. "ಕೋಶ ಓದಿ ನೋಡು, ದೇಶ ಸುತ್ತಿ ನೋಡು" ಎಂಬAತೆ ಒಂದು ಪುಸ್ತಕ ನೂರು ದೇಶ ಸುತ್ತಿದ ಅನುಭವ ನೀಡುತ್ತದೆ.

ದಿನಪತ್ರಿಕೆಗಳು-ಗ್ರಂಥಾಲಯದ ಕಣ್ಣು : ಗ್ರಂಥಾಲಯದ ಪ್ರಮುಖ ಅಂಗವೆAದರೆ ದಿನಪತ್ರಿಕೆಗಳು. ಪ್ರತಿದಿನ ಬೆಳಿಗ್ಗೆ ಹೊಸ ಸುದ್ದಿ, ಲೇಖನ, ಉದ್ಯೋಗ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಗಳ ಮಾಹಿತಿ ಇಲ್ಲಿಂದಲೇ ದೊರೆಯುತ್ತದೆ. ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳು, ವಾರಪತ್ರಿಕೆಗಳು ಇಲ್ಲಿ ಉಚಿತವಾಗಿ ದೊರೆಯುತ್ತವೆ. ವಿದ್ಯಾರ್ಥಿಗಳು, ನಿವೃತ್ತರು, ಸ್ಪರ್ಧಾರ್ಥಿಗಳು ಪ್ರತಿದಿನ ಬಂದು ಓದಿ ತಮ್ಮ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುತ್ತಾರೆ. ಪತ್ರಿಕೆ ಓದುವ ಅಭ್ಯಾಸವೇ ಜ್ಞಾನದ ಮೊದಲ ಮೆಟ್ಟಿಲಾಗಿದ್ದು, ಪತ್ರಿಕೆ ಅಥವಾ ಪುಸ್ತಕದಲ್ಲಿ ಓದಿದ್ದು, ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. ಮತ್ತು ಆ ವಿಷಯಗಳು ಸತ್ಯಕ್ಕೆ ಹತ್ತಿರವಾಗಿಯೂ ಕೂಡ ಇರುತ್ತವೆ.

ಡಿಜಿಟಲ್ ಗ್ರಂಥಾಲಯ ಮತ್ತು ಸವಾಲು : ಇಂದಿನ ಡಿಜಿಟಲ್ ಯುಗದಲ್ಲಿ ಗ್ರಂಥಾಲಯಗಳು e-booಞ, e-ರಿouಡಿಟಿಚಿಟ, ಇಂಟರ್ನೆಟ್ ಸೌಲಭ್ಯದೊಂದಿಗೆ ಆಧುನಿಕವಾಗಿವೆ. ಆದರೂ ಜನರು ಗ್ರಂಥಾಲಯಕ್ಕೆ ಬರುವ ಪ್ರಮಾಣ ಕಡಿಮೆಯಾಗುತ್ತಿದೆ. ಒಂದು ಗಂಟೆ ಮೊಬೈಲ್ ಕಡಿಮೆ ಮಾಡಿ, ಒಂದು ಗಂಟೆ ಪುಸ್ತಕ ಓದಿ ಎಂಬುದು ಈ ದಿನದ ಮುಖ್ಯ ಸಂದೇಶವಾಗಬೇಕು.ಓದುವ ಅಭ್ಯಾಸವೇ ದೇಶದ ಭವಿಷ್ಯ. ಗ್ರಂಥಾಲಯಕ್ಕೆ ಹೋಗೋಣ, ಜ್ಞಾನ ಬೆಳೆಸೋಣ. ಓದುವವನು ಬೆಳೆಯುತ್ತಾನೆ, ಓದಿಸುವವನು ಬೆಳೆಸುತ್ತಾನೆ.

ಬನ್ನಿ, ಈ ರಾಷ್ಟಿçÃಯ ಗ್ರಂಥಾಲಯ ದಿನದಂದು ಹತ್ತಿರದ ಗ್ರಂಥಾಲಯಕ್ಕೆ ಭೇಟಿ ಕೊಡೋಣ. ಸದಸ್ಯತ್ವ ಪಡೆಯೋಣ. ದಿನಪತ್ರಿಕೆ ಓದಿ, ಪುಸ್ತಕ ಎತ್ತಿಕೊಂಡು ಓದುವ ಅಭ್ಯಾಸವನ್ನು ಮೈಗೂಡಿಸಿಕೊಂಡು ಮೊಬೈಲ್ ಎಂಬ ಮಾಯಾಪೆಟ್ಟಿಗೆಯಿಂದ ಸ್ವಲ್ಪ ಸಮಯವಾದರೂ ದೂರ ಇದ್ದು, ಓದಿನ ಮೂಲಕ ಮೆದುಳನ್ನು ಚುರುಕುಗೊಳಿಸಿ, ಮನಸ್ಸನ್ನು ಸಂತಸಪಡಿಸೋಣ.

-ಚನ್ನನಾಯಕ. ಎಂ. ಎಂ,

ಪೊನ್ನAಪೇಟೆ.

ಮೊ : ೭೭೬೦೫೨೭೭೧೪