ಮಡಿಕೇರಿ, ಆ. ೧೦: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ದಶಮಂಟಪ ಸಮಿತಿ ಸಭೆ ಇಂದು ನಗರದ ರಾಜ್‌ದರ್ಶನ್ ಸಭಾಂಗಣದಲ್ಲಿ ನಡೆಯಿತು. ಕಳೆದ ಬಾರಿಯ ದಸರಾದಲ್ಲಿ ಮಂಟಪಗಳ ತೀರ್ಪುಗಾರಿಕೆ ವಿರುದ್ಧ ಆಕ್ರೋಶಗೊಂಡು ಗದ್ದಲವೆಬ್ಬಿಸಿದ್ದ ಕರವಲೆ ಭಗವತಿ ಸಮಿತಿಗೆ ಈ ಬಾರಿ ದಶಮಂಟಪ ಸಮಿತಿಯ ಅಧಿಕಾರವನ್ನು ಹಸ್ತಾಂತರಿಸುವ ಸಂಬAಧ ಹಾಗೂ ಧ್ವನಿವರ್ಧಕ ಬಳಕೆ ಸಂಬAಧ ಮಂಟಪ ಸಮಿತಿಗಳ ಅಭಿಪ್ರಾಯ ಪಡೆಯಲು ದಶಮಂಟಪ ಸಮಿತಿ ಅಧ್ಯಕ್ಷ ಕೋಟೆ ಗಣಪತಿ ದೇವಾಲಯ ಸಮಿತಿಯ ಬಿ.ಎಂ. ಹರೀಶ್ ಅಧ್ಯಕ್ಷತೆಯಲ್ಲಿ ಸಭೆ ನಡೆದು ಕರವಲೆ ಭಗವತಿ ದಸರಾ ಮಂಟಪ ಸಮಿತಿಗೆ ದಶಮಂಟಪ ಸಮಿತಿಯ ಅಧಿಕಾರ ಹಸ್ತಾಂತರಿಸಲು ಒಪ್ಪಿಗೆ ಸಿಕ್ಕಿತು. ಅಲ್ಲದೆ ಮಂಟಪಗಳಲ್ಲಿ ಧ್ವನಿವರ್ಧಕ ಬಳಕೆ ಸಂಬAಧ ಮಡಿಕೇರಿ ಹಾಗೂ ವೀರಾಜಪೇಟೆ ಶಾಸಕರುಗಳನ್ನು ತಾ. ೧೫ ರಂದು ದಶಮಂಟಪ ಸಮಿತಿಯಿಂದ ಭೇಟಿ ಮಾಡಿ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ದಶಮಂಟಪ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್ ಕಳೆದ ಬಾರಿ ನಡೆದ ಕಹಿ ಘಟನೆ ಮತ್ತೆ ಮರುಕಳಿಸಬಾರದು. ಎಲ್ಲರ ಸಮ್ಮುಖದಲ್ಲೇ ತೀರ್ಪುಗಾರಿಕೆ ನಡೆದಿದೆ. ಹೀಗಿದ್ದರೂ ಅಂತಹ ಘಟನೆ ನಡೆದದ್ದೂ ಸರಿಯಲ್ಲ. ಮುಂದೆ ಹೀಗಾಗದಂತೆ ಎಲ್ಲರೂ ಎಚ್ಚರ ವಹಿಸೋಣ. ಕರವಲೆ ಭಗವತಿ ಸಮಿತಿಗೆ ಅಧಿಕಾರ ಹಸ್ತಾಂತರಿಸಲು ಎಲ್ಲರೂ ಒಪ್ಪಿದರೆ ನಮ್ಮ ಅಭ್ಯಂತರವಿಲ್ಲ. ಕರವಲೆ ಭಗವತಿ ಸಮಿತಿಗೆ ನಮ್ಮ ಸಹಕಾರವಿದೆ ಎಲ್ಲರೂ ಸೇರಿ ಒಟ್ಟಾಗಿ ದಸರಾವನ್ನು ಉತ್ತಮವಾಗಿ ನಡೆಸುವಂತಾಗಬೇಕೆAದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಮಾತನಾಡಿ, ದಶಮಂಟಪಗಳು ಸೇರಿ ತೀರ್ಪುಗಾರರ ಆಯ್ಕೆ ಮಾಡಿಯೂ ಕಹಿ ಘಟನೆಗಳು ನಡೆಯುವುದು ಸರಿಯಲ್ಲ; ಮುಂದೆ ಹೀಗಾಗದಂತೆ ಮಂಟಪ ಸಮಿತಿಗಳು ದೃಢ ನಿರ್ಧಾರ ಕೈಗೊಳ್ಳಬೇಕು. ಕಹಿ ಘಟನೆಗಳಿಂದ ಸರ್ಕಾರದಿಂದ ಸಿಗುವ ಅನುದಾನಕ್ಕೂ ತೊಂದರೆ ಆಗಲಿದೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಉತ್ತಮ ರೀತಿಯಲ್ಲಿ ದಸರಾ ಆಚರಣೆ ಮಾಡುವಂತಾಗಬೇಕೆAದು ನುಡಿದರು.
ದಸರಾ ಸಮಿತಿ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಕಳೆದ ಬಾರಿ ನಡೆದಂತಹ ಕಹಿ ಘಟನೆ ಮುಂದೆ ನಡೆಯಬಾರದು ಎಂದರಲ್ಲದೆ ಸದ್ಯದಲ್ಲಿಯೇ ಶಾಸಕರು, ಉಸ್ತುವಾರಿ ಸಚಿವರನ್ನು ಒಳಗೊಂಡ ದಸರಾ ಸಮಿತಿ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ ಎಂದು ತಿಳಿಸಿದರು.
ಬಳಿಕ ಮಂಟಪ ಸಮಿತಿಗಳ ಅಭಿಪ್ರಾಯ ಕೇಳಲಾಯಿತು. ಈ ವೇಳೆ ಪೇಟೆ ರಾಮಮಂದಿರ ದೇವಾಲಯದ ಪವನ್ ಮಾತನಾಡಿ, ಕರವಲೆ ಭಗವತಿ ಸಮಿತಿಗೆ ಅಧಿಕಾರ ಹಸ್ತಾಂತರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿ ದರು. ದಂಡಿನ ಮಾರಿಯಮ್ಮ ದೇವಾಲಯದ ನಾಗರಾಜ್ ಮಾತನಾಡಿ, ಬಹುಮಾನದ ವಿಚಾರದಲ್ಲಿ ಮುಂದೆ ಗಲಾಟೆ ಗಳಾಗಬಾರದು; ಎಲ್ಲಾ ಮಂಟಪ ಗಳು ಒಟ್ಟಾಗಿ ದಸರಾ ಯಶಸ್ವಿಗೊಳಿಸೋಣ ಎಂದರು. ಕಂಚಿಕಾಮಾಕ್ಷಿ ಸಮಿತಿಯ ಮಹೇಶ್ ಮಾತನಾಡಿ, ಮುಂದೆ ಅಹಿತರಕರ ಘಟನೆಗಳು ನಡೆಯದಿರಲಿ ಎಂದರಲ್ಲದೆ ಕರವಲೆ ಭಗವತಿ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡುವಂತೆ ಹೇಳಿದರು. ಕುಂದುರುಮೊಟ್ಟೆ ದೇವಾಲಯದ ಮಂಜುನಾಥ್ ಮಾತನಾಡಿ, ಸಮರ್ಪಕ ಬೈಲಾವಿಲ್ಲದ ಕಾರಣ ಅಹಿತಕರ ಘಟನೆಗಳು ನಡೆದಾಗ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ನಿರ್ಧರಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಬೈಲಾ ರಚನೆ ಆಗಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಕರವಲೆ ಭಗವತಿ ಸಮಿತಿಯವರು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದರು.
ಕೋದಂಡರಾಮ ದೇವಾಲಯದ ಗೋಪಿ ಮಾತನಾಡಿ, ಕರವಲೆ ಭಗವತಿ ಸಮಿತಿಗೆ ಎಲ್ಲರೂ ಸಹಕಾರ ನೀಡೋಣ; ಮುಂದೆ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸೋಣ ಎಂದರು. ಕೋಟೆ ಮಾರಿಯಮ್ಮ ದೇವಾಲಯದ ಬಿ.ಕೆ. ಜಗದೀಶ್ ಮಾತನಾಡಿ. ಕಳೆದ ಬಾರಿ ನಡೆದಂತ ಕಹಿ ಘಟನೆಗಳು ಮರುಕಳಿಸಬಾರದರು.
ದಶಮಂಟಪ ಸಮಿತಿಯ ನೋಂದಣಿ ಕಾರ್ಯ ಆಗಬೇಕೆಂದರಲ್ಲದೆ ಕರವಲೆ ಭಗವತಿ ಸಮಿತಿಗೆ ಬೆಂಬಲ ವ್ಯಕ್ತಪಡಿಸಿದರು. ದೇಚೂರು ಹಾಗೂ ಚೌಡೇಶ್ವರಿ ದೇವಾಲಯ ಸಮಿತಿಗಳು ಸಭೆಯ ತೀರ್ಮಾನಕ್ಕೆ ತಮ್ಮ ಬೆಂಬಲವಿದೆ ಎಂದರು. ಕರವಲೆ ಭಗವತಿ ಸಮಿತಿ ಪರವಾಗಿ ಕುಶ ಮಾತನಾಡಿ, ಕಳೆದ ಬಾರಿ ಕಹಿ ಘಟನೆ ನಡೆದಿದೆ. ಅಂತಹ ಘಟನೆ ನಡೆಯಬಾರದಿತ್ತು. ಆ ಘಟನೆ ಸಂಬAಧ ನಾವು ದಸರಾ ಸಮಿತಿಯ ಕ್ಷಮೆಯಾಚಿಸಿದ್ದೇವೆ ಎಂದು ಹೇಳಿದರು.
ಕೊನೆಯಲ್ಲಿ ಮಾತನಾಡಿದ ದಶಮಂಟಪ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್ ಮಂಟಪ ಸಮಿತಿಗಳ ಅನಿಸಿಕೆ ಗಮನಿಸಿದಾಗ ಕರವಲೆ ಭಗವತಿ ಸಮಿತಿಗೆ ದಶಮಂಟಪ ಸಮಿತಿಯ ಅಧಿಕಾರ ಹಸ್ತಾಂತರಿಸಲು ಎಲ್ಲರ ಒಪ್ಪಿಗೆ ಇದೆ ಎಂಬAತಿದೆ ಎಂದು ನುಡಿದರಲ್ಲದೆ, ಅಧಿಕಾರ ಹಸ್ತಾಂತರಿಸಬಹುದೇ ಎಂದು ಸಭೆಯನ್ನು ಕೋರಿದಾಗ ಸಭೆ ಅಧಿಕಾರ ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿತು. ತಾ. ೧೬ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕೋಟೆ ಗಣಪತಿ ಸನ್ನಿಧಿಯಲ್ಲಿ ಕರವಲೆ ಭಗವತಿ ಸಮಿತಿಗೆ ದಶಮಂಟಪ ಸಮಿತಿಯ ಅಧಿಕಾರವನ್ನು ಹಸ್ತಾಂತರಿಸುವುದಾಗಿ ಬಿ.ಎಂ. ಹರೀಶ್ ಪ್ರಕಟಿಸಿದರು.
ಮಂಟಪಗಳಲ್ಲಿ ಧ್ವನಿವರ್ಧಕ ಬಳಕೆ ಸಂಬAಧ ಚರ್ಚೆ ನಡೆಯಿತು. ವಕೀಲ ರಂಜಿತ್ ಅವರು ಕಾನೂನಿನಡಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿಯಿತ್ತರು. ಬಳಿಕ ಶಾಸಕದ್ವಯರಾದ ಡಾ. ಮಂತರ್‌ಗೌಡ, ಎ.ಎಸ್. ಪೊನ್ನಣ್ಣ ಅವರುಗಳನ್ನು ಭೇಟಿ ಮಾಡಿ ಧ್ವನಿವರ್ಧಕ ಬಳಕೆ ಸಂಬAಧ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವ ಬಗ್ಗೆ ಅಧ್ಯಕ್ಷ ಬಿ.ಎಂ. ಹರೀಶ್ ಸಭೆಗೆ ಮಾಹಿತಿಯಿತ್ತರು.
ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ದಶಮಂಟಪ ಸಮಿತಿ ಮಾಜಿ ಅಧ್ಯಕ್ಷ ಕೋದಂಡರಾಮ ದೇವಾಲಯದ ಮಂಜುನಾಥ್ ಹಾಗೂ ದೇಚೂರು ರಾಮಮಂದಿರ ದೇವಾಲಯ ಸಮಿತಿಯ ಹಿರಿಯ ಸದಸ್ಯ ದೇವೇಂದ್ರ ಅವರುಗಳಿಗೆ ಸಂತಾಪ ಸೂಚಿಸಲಾಯಿತು.
ವೇದಿಕೆಯಲ್ಲಿ ದಸರಾ ಸಮಿತಿ ಅಧ್ಯಕ್ಷ ಪಿ. ಕಲಾವತಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ, ಕಳೆದ ಬಾರಿಯ ಕೋಟೆ ಗಣಪತಿ ಮಂಟಪ ಸಮಿತಿ ಅಧ್ಯಕ್ಷ ವಿಘ್ನೇಶ್ ಉಪಸ್ಥಿತರಿದ್ದರು. ದಶಮಂಟಪ ಸಮಿತಿ ಗೌರವಾಧ್ಯಕ್ಷ ಬಿ.ಎಂ. ರಾಜೇಶ್ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಸತೀಶ್ ಶೇಟ್ ವಂದಿಸಿದರು.