ವೀರಾಜಪೇಟೆ, ಆ. ೯: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವೀರಾಜಪೇಟೆ ತಾಲೂಕು ಕೃಷಿ ಕಾರ್ಯಕ್ರಮದಡಿ ಕುಂದ ಕಾರ್ಯಕ್ಷೇತ್ರದ ಪ್ರಗತಿಪರ ಕೃಷಿಕ ಮೋಹನ್ ಟಿ. ಅವರ ಗದ್ದೆಯಲ್ಲಿ ಯಾಂತ್ರೀಕೃತ ಯಂತ್ರಶ್ರೀ ಭತ್ತದ ಸಸಿ ನಾಟಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೊಡಗು ಜಿಲ್ಲಾ ನಿರ್ದೇಶಕ ವಿಠಲ್ ಸಾಲಿಯಾನ್ ಅವರು ಗದ್ದೆ ನಾಟಿಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ, ರೈತರಿಗೆ ಆಧುನಿಕ ಯಾಂತ್ರಿಕೃತ ಬೇಸಾಯದ ಕುರಿತು ಅಗತ್ಯ ಮಾಹಿತಿ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದರು.

ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರಶ್ರೀ ಯೋಜನೆಯನ್ನು ಬಳಸಿಕೊಳ್ಳುವುದರಿಂದ ಕೃಷಿ ವೆಚ್ಚ ಕಡಿಮೆಯಾಗುವುದಲ್ಲದೆ, ಕನಿಷ್ಟ ಸಮಯದಲ್ಲಿ ಹೆಚ್ಚು ಉತ್ಪಾದನೆ ಪಡೆಯಲು ಸಾಧ್ಯ ಎಂದು ಈ ಸಂದರ್ಭ ತಿಳಿಸಿದರು.

ಕಾರ್ಯಕ್ರಮದಲ್ಲಿ ಯಂತ್ರದ ಚಾಲಕ ಲಕ್ಷö್ಮಣ, ಕೃಷಿ ಮೇಲ್ವಿಚಾರಕ ವಸಂತ ಹಾಗೂ ಸ್ಥಳೀಯ ಪ್ರಗತಿಪರ ರೈತರು ಉಪಸ್ಥಿತರಿದ್ದರು.