ಕರಿಕೆ, ಆ.೯: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದೆ. ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಪಾಠ ಕಲಿಯುವಂತಾಗಿದೆ.

ಶಾಲೆಯಲ್ಲಿ ಸುಮಾರು ೩೧ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ೪ ಜನ ಅತಿಥಿ ಶಿಕ್ಷಕರು ಭೋದನೆ ಮಾಡುತ್ತಿದ್ದಾರೆ. ಖಾಯಂ ಶಿಕ್ಷಕರಿಲ್ಲದ ಶಾಲೆಯ ಮೇಲ್ಛಾವಣಿ ಶಿಥಿಲಗೊಂಡಿದ್ದು ಗೋಡೆಗಳು ಬಿರುಕು ಬಿಟ್ಟಿವೆ. ಕೆಲವು ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಗಿಡಗಂಟಿ ಬೆಳೆದು ಭೂತ ಬಂಗಲೆಗಳAತಾಗಿವೆ. ಆಡಳಿತ ವ್ಯವಸ್ಥೆಯು ಇತ್ತ ಸೂಕ್ತ ಗಮನ ಹರಿಸಿ ಅಪಾಯ ಸಂಭವಿಸುವ ಮೊದಲು ದುರಸ್ತಿಗೊಳಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ. -ಸುಧೀರ್