ವೀರಾಜಪೇಟೆ, ಆ. ೮: ವೀರಾಜಪೇಟೆಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮುಖ್ಯ ಕಚೇರಿ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಪೂಜಾ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಗಿತು.
ಈ ಸಂದರ್ಭ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ವಿಶೇಷ ಪೂಜೆ ಹಾಗೂ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಪೂಜಾ ಕಾರ್ಯದಲ್ಲಿ ಸೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರುಗಳಾದ ಆರ್.ಪಿ. ನೀತು, ಮಡಿಕೇರಿಯ ಕಾರ್ಯನಿರ್ವಹಕ ಅಭಿಯಂತರಾದ ರಾಮಚಂದ್ರಪ್ಪ, ನಿವೃತ್ತ ಅಧಿಕಾರಿ ಪಿ.ಎಸ್ ಸುರೇಶ್, ವೀರಾಜಪೇಟೆ ಸಹಾಯಕ ಅಭಿಯಂತ ಕೆ.ವಿ ಸೋಮೇಶ್, ಸಿದ್ದಾಪುರದ ಕೆ.ಎಸ್ ಸೊರಾಗ್, ಅಮ್ಮತಿಯ ಮನೋಜ್ ಕುಮಾರ್, ಪಾಲಿಬೆಟ್ಟದ ಶಿವರಾಜ್, ಗುತ್ತಿಗೆದಾರರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ಎಂ.ಗಣೇಶ್, ನೌಕರರ ಸಂಘದ ಅಧ್ಯಕ್ಷ ಕೆ.ಬಿ ಕೃಷ್ಣರಾಜ್, ತಾಲೂಕು ಅಧ್ಯಕ್ಷ ಯೋಗರಾಜ್ ಹಾಗೂ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ಗೋಣಿಕೊಪ್ಪದಿಂದ ವಿದ್ಯುತ್ ನಿಗಮದ ಸಿಬ್ಬಂದಿಗಳು, ಗುತ್ತಿಗೆದಾರರು,. ಶಾಖಾ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.