ಮಡಿಕೇರಿ, ಆ. ೮ : ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿಯವರು ಇಂದು ನಗರದಲ್ಲಿರುವ ಗದ್ದುಗೆ, ಕೋಟೆಗೆ ಭೇಟಿ ನೀಡಿದ್ದರು. ಗದ್ದುಗೆಗೆ ಆಗಮಿಸಿದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಗದ್ದುಗೆಯನ್ನು ಪರಿಶೀಲನೆ ಮಾಡಿದ ಶ್ರೀಗಳು ಅಲ್ಲಿ ಪುಷ್ಪಾರ್ಚನೆ ನೆರವೇರಿಸಿದರು. ನಂತರ ಮಹದೇವಪೇಟೆಯಲ್ಲಿರುವ ಬಸವೇಶ್ವರ ದೇವಾಲಯಕ್ಕೆ ತೆರಳಿದ ಶ್ರೀಗಳು ಅಲ್ಲಿ ಪೂಜೆ ಪ್ರಾರ್ಥನೆ ನೆರವೇರಿಸಿ ಬಳಿಕ ಭಕ್ತರಿಂದ ಪಾದಪೂಜೆ ಸ್ವೀಕರಿಸಿದರು. ಬಳಿಕ ಕೋಟೆಗೆ ತೆರಳಿ ಕೋಟೆ ಆವರಣದಲ್ಲಿರುವ ಪ್ರಾಚ್ಯವಸ್ತು ಸಂಗ್ರಾಹಾಲಯವನ್ನು ವೀಕ್ಷಿಸಿದರು. ನಂತರ ಕೋಟೆಯನ್ನು ಪರಿಶೀಲನೆ ಮಾಡಿದರು. ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಅರಮನೆ ಹಾಗೂ ಮಡಿಕೇರಿ ವೈಶಿಷ್ಟö್ಯತೆಗಳ ಬಗ್ಗೆ ಶ್ರೀಗಳ ಗಮನ ಸೆಳೆದರು.

ಕೊಡುಗೆ ಅಪಾರ : ಅಧ್ಯಾತ್ಮಿಕ ಕ್ಷೇತ್ರಕ್ಕೆ ಕೊಡಗಿನ ಅರಸರ ಕೊಡುಗೆ ಅಪಾರವಾದದ್ದು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಗದ್ದುಗೆ ಹಾಗೂ ಕೋಟೆ ಪರಿಶೀಲನೆ ನಂತರ ಕೋಟೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಲವಾರು ಸ್ಮಾರಕಗಳನ್ನು ಸಂರಕ್ಷಿಸುತ್ತಾ ಬಂದಿದೆ. ಕೋಟೆಯ ಜೀರ್ಣೋದ್ಧಾರ ಸಂಬAಧ ಮಾಹಿತಿ ಆಯೋಗದ ಮಾಜಿ ಆಯುಕ್ತರಾದ ಜೆ.ಎಸ್.ವಿರೂಪಾಕ್ಷಯ್ಯ ಅವರ ಶ್ರಮ ಶ್ಲಾಘನೀಯವಾದದ್ದು. ಕೋಟೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತಿದ್ದರೂ ಟಿಕೆಟ್ ವ್ಯವಸ್ಥೆ ಮಾಡದ ಬಗ್ಗೆ ಸಂಬAಧಿಸಿದ ಅಧಿಕಾರಿಗಳ ಬಳಿ ಮಾಹಿತಿ ಬಯಸಿದಾಗ ಪ್ರವಾಸಿಗರಿಗೆ ಕೋಟೆಯಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಂಡು, ಕರ್ನಾಟಕದ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ಯೋಜನೆಗಳನ್ನು ಜಾರಿಗೊಳಿಸಿದ ನಂತರ ಟಿಕೆಟ್ ವ್ಯವಸ್ಥೆ ಮಾಡಲು ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ ಎಂದು ಸುತ್ತೂರು ಶ್ರೀಗಳು ಹೇಳಿದರು. ರಾಜರ ಗದ್ದುಗೆಯಲ್ಲಿ ಒತ್ತುವರಿ ಸೇರಿದಂತೆ ಕೆಲವೊಂದು ಸಮಸ್ಯೆಗಳಿದ್ದು, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ನ್ಯಾಯಾಲಯದಲ್ಲೂ ಕೆಲ ಪ್ರಕರಣ ನಡೆಯುತ್ತಿದೆ ಆದ್ದರಿಂದ ನ್ಯಾಯಾಲಯದ ಆದೇಶ ಬರುವವರೆಗೂ ಈಗ ಇರುವ ಗದ್ದುಗೆಗಳನ್ನು ಸಂರಕ್ಷಿಸುವ ಕಾರ್ಯಗಳನ್ನು ಕೈಗೊಳ್ಳುವಂತಾಗಬೇಕು. ಗದ್ದುಗೆ ಜೀರ್ಣೊದ್ಧಾರ ಸಂಬAಧ ಶಾಸಕ ಮಂತರ್ ಗೌಡ ಅವರು ಜವಬ್ದಾರಿ ತೆಗೆದುಕೊಳ್ಳುವ ಭರವಸೆ ನೀಡಿದ್ದು ಆದಷ್ಟು ಶೀಘ್ರವಾಗಿ ಗದ್ದುಗೆ ಜೀರ್ಣೋದ್ಧಾರ ಕಾರ್ಯ ನಡೆಯುವಂತಾಗಲಿ ಎಂದು ಸುತ್ತೂರು ಶ್ರೀಗಳು ಆಶಿಸಿದರು.

ಸಂರಕ್ಷಣೆ ನಮ್ಮ ಜವಬ್ದಾರಿ

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಕೋಟೆ ಹಾಗೂ ಗದ್ದುಗೆಯ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಬೇಕಿದೆ. ಕೋಟೆಗೆ ಅಗತ್ಯ ಸೌಲಭ್ಯ ಒದಗಿಸುವ ಸಂಬAಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸ್ಮಾರಕ ಜಾಗ ಒತ್ತುವರಿ ತೆರವು ಸಂಬAಧ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮಕೈಗೊಳ್ಳಲಾಗುವುದು ಎಂದು ನುಡಿದರು.

ಜೆ.ಎಸ್. ವಿರೂಪಾಕ್ಷಯ್ಯ ಮಾತನಾಡಿ ಕೋಟೆ ಹಾಗೂ ಗದ್ದುಗೆಯ ಹಿನ್ನೆಲೆ ಹಾಗೂ ಅವುಗಳ ಸಂರಕ್ಷಣೆ ಸಂಬAಧ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ವಿವರಿಸಿದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ದಕ್ಷಿಣ ವಲಯ ಅಧೀಕ್ಷಕ ಸುಜಿತ್ ನಯನ್ ಮಾತನಾಡಿ ಸ್ಮಾರಕಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನಮ್ಮ ಇಲಾಖೆ ಶ್ರಮ ಪಟ್ಟು ಕಾರ್ಯ ನಿರ್ವಹಿಸುತ್ತಿದೆ ಎಂದರು.

ಈ ಸಂದರ್ಭ ಅರಮೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ .ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬ ಶಿವಯ್ಯ, ಉಪಾಧ್ಯಕ್ಷ ಹೆಚ್.ಪಿ .ಉದಯಕುಮಾರ್, ತಹಶೀಲ್ದಾರ್ ಶ್ರೀಧರ್, ಮ್ಯೂಸಿಯಂನ ಕ್ಯೂರೇಟರ್ ರೇಖಾ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೋಹನ್ ಹಕ್ಕೆ, ನಟರಾಜು, ಪರಮೇಶ್, ಮಡಿಕೇರಿ ವೀರಶೈವ ಸಮಾಜದ ರುದ್ರಪ್ರಸನ್ನ, ಯುವ ಘಟಕದ ಅಧ್ಯಕ್ಷ ಎಂ. ಕುಮಾರ್ ವಿವಿಧ ಮಠಾಧೀಶರು, ಮತ್ತಿತರರು ಹಾಜರಿದ್ದರು.