ಸೋಮವಾರಪೇಟೆ, ಆ. ೮ : ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಧ್ವನಿಯನ್ನು ಅನುಕರಣೆಯ ಮೂಲಕ ಎ.ಐ. ವೀಡಿಯೋ ಸೃಷ್ಟಿಸಿ ಅವಮಾನಿಸಲಾಗಿದೆ ಎಂದು ಆರೋಪಿಸಿ, ಕೊಡಗು ಜಿಲ್ಲಾ ಕಾಂಗ್ರೆಸ್‌ನ ಪದಾಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕೊಡಗು ಜಿಲ್ಲಾ ಕಾಂಗ್ರೆಸ್ ಎಂಬ ಹೆಸರಿನಲ್ಲಿ ಮಾಜೀ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ರವರ ಎ.ಐ. ಭಾವಚಿತ್ರದ ಮೂಲಕ ವೀಡಿಯೋ ಸೃಷ್ಟಿಸಿದ್ದು, ಇದರಲ್ಲಿ ಅಪ್ಪಚ್ಚು ರಂಜನ್ ಅವರೇ ಮಾತನಾಡಿದಂತೆ ಚಿತ್ರಿಸಿ ಅವಮಾನಿಸುವ ಉದ್ದೇಶದಿಂದ ವೀಡಿಯೋವನ್ನು ಇನ್ಸಾ÷್ಟçಗ್ರಾಂ, ವಾಟ್ಸಾö್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾಜಿ ಶಾಸಕರ ಧ್ವನಿ, ಮಾತು, ಎ.ಐ. ಪೋಟೋವನ್ನು ಬಳಸಿ ರಂಜನ್ ಅವರನ್ನು ಜಿಲ್ಲಾ ಕಾಂಗ್ರೆಸ್‌ನ ಕೆಲ ಪದಾಧಿಕಾರಿಗಳು ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಪ್ರಮುಖರು ಅವಮಾನಿಸಿ ಹೀಯಾಳಿಸಿದ್ದಾರೆ ಎಂದು ಬಿಜೆಪಿ ಕೃಷಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಚಂದ್ರ ಅವರು ದೂರು ನೀಡಿದ್ದಾರೆ.