ಗೋಣಿಕೊಪ್ಪಲು, ಆ. ೮: ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಹಾತೂರು, ಅತ್ತೂರು, ಮಾಯಮುಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಒಂಟಿ ಮನೆ, ದೇವಾಲಯ, ಅಂಗಡಿ, ಲೈನ್ಮನೆ ಹಾಗೂ ಶಾಲೆಗಳಿಗೆ ಕನ್ನ ಹಾಕುತ್ತಾ ಸಿಕ್ಕಿದ ವಸ್ತುಗಳನ್ನು ದೋಚುತ್ತಾ ಗ್ರಾಮದಲ್ಲಿ ಭಯದ ವಾತಾವರಣಕ್ಕೆ ಕಾರಣರಾಗುತ್ತಿರುವ ಕಳ್ಳರ ಗುಂಪೊAದು ಇದೀಗ ಗೋಣಿಕೊಪ್ಪ ಸಮೀಪದ ಅತ್ತೂರು ಗ್ರಾಮದ ಇತಿಹಾಸ ಪ್ರಸಿದ್ದಗಳಲ್ಲೊಂದಾಗಿರುವ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ನುಗ್ಗಿರುವ ಕಳ್ಳರು ದೇವಸ್ಥಾನದಲ್ಲಿದ್ದ ಭಂಡಾರದ ಪೆಟ್ಟಿಗೆ, ದೇವರಿಗೆ ತೊಡಿಸುವ ಬಂಗಾರ ಸೇರಿದಂತೆ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಮುಂಜಾನೆ ವೇಳೆ ಎಂದಿನAತೆ ಅರ್ಚಕರು ತಮ್ಮ ಮನೆಯಿಂದ ದೇವಾಲಯಕ್ಕೆ ಪೂಜೆಗೆಂದು ಬಂದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿಸಿದ ಅರ್ಚಕರು ದೇವಾಲಯದ ಆಡಳಿತ ಮಂಡಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಆಡಳಿತ ಮಂಡಳಿಯ ಪದಾಧಿಕಾರಿಗಳು ದೇವಾಲಯಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಆರ್.ಮುಧೋಳ್, ಠಾಣಾಧಿಕಾರಿ ಕಾಳೆಗೌಡ, ಅಪರಾಧ ಪತ್ತೆದಳದ ಎಸ್ಐ ವೆಂಕಟೇಶ್, ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯ ಸಮಿತಿಯ ದೂರಿನ ಅನ್ವಯ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಾಲಯದ ಆಡಳಿತ ಮಂಡಳಿಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಕೂಡಲೇ ಕಳ್ಳರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿದ್ದಾರೆ. ಸರಣಿ ಕಳ್ಳತನದ ಹಿಂದೆ ಅನುಭವಿ ಕಳ್ಳರ ತಂಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ದೇವಾಲಯದಿಂದ ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ದೋಚಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ದೇವಾಲಯವನ್ನು ಜೀರ್ಣೋದ್ದಾರ ಮಾಡುತ್ತಿದ್ದು ಕಳೆದ ಒಂದು ವರ್ಷದಿಂದ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ದೇವಾಲಯ ಹಿಂಭಾಗದ ಗೋಡೆಯನ್ನು ದುರಸ್ತಿ ಮಾಡುವ ಸಲುವಾಗಿ ಬಿಡಲಾಗಿತ್ತು. ಇದೇ ಜಾಗದಿಂದ ಕಳ್ಳರು ಒಳ ಪ್ರವೇಶಿಸಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಸಮೀಪದಲ್ಲಿರುವ ದೇವಾಲಯದ ಅರ್ಚಕರಿಗೆ ಕಳ್ಳತನ ಮಾಡುವ ಸಂದರ್ಭದಲ್ಲಿ ಯಾವುದೇ ಶಬ್ದ ಕೇಳಿ ಬಾರದಿರುವುದು ಕಳ್ಳರಿಗೆ ಅನುಕೂಲವಾಗಿದೆ.
-ಹೆಚ್.ಕೆ.ಜಗದೀಶ್