ಮಡಿಕೇರಿ, ಆ. ೮: ಜಿಲ್ಲೆಯಲ್ಲಿ ತಾ. ೧೦ ರಂದು ರಾಷ್ಟಿçÃಯ ಜಂತುಹುಳು ನಿವಾರಣಾ ಕಾರ್ಯಕ್ರಮ (ಎನ್‌ಡಿಡಿ) ಹಾಗೂ ತಾ. ೧೭ ರಂದು ಮಾಪ್ ಅಪ್ ದಿನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ತಾ. ೧೦ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ನಗರದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಅವರು ತಿಳಿಸಿದ್ದಾರೆ.