ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ಆ. ೬: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಾತರಿಪಡಿಸಿಕೊಂಡ ಕಳ್ಳರು ಒಂಟಿ ಮನೆಯನ್ನು ಗುರಿಯಾಗಿಸಿಕೊಂಡು ತಡರಾತ್ರಿ ವೇಳೆ ಮನೆಯ ಮುಂಬಾಗಿಲಿನ ಬೀಗವನ್ನು ಕಬ್ಬಿಣದ ಸಲಾಖೆಯಿಂದ ಮೀಟಿ ಒಳನುಗ್ಗಿ ಮನೆಯಲ್ಲಿರುವುದನ್ನೆಲ್ಲಾ ಜಾಲಾಡಿ ಮನೆಯಲ್ಲಿದ್ದ ಚಿನ್ನ, ಬೆಳ್ಳಿ, ನಗದು ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಿದ್ದಾರೆ. ಮನೆಯವರು ಬಂದು ನೋಡಿದ ಸಂದರ್ಭ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ.

ಗೋಣಿಕೊಪ್ಪ, ವೀರಾಜಪೇಟೆಯ ಮುಖ್ಯರಸ್ತೆಯ ಭದ್ರಕಾಳಿ ದೇವಾಲಯದ ಅನತಿದೂರದಲ್ಲಿರುವ ಕುಂದ ಕೈಮುಡಿಕೆ ರಸ್ತೆಯಲ್ಲಿ ಕಳೆದ ೧೦ ವರ್ಷಗಳಿಂದ ಮಾಜಿ ಸೈನಿಕ ಕೊಂಗೆಪAಡ ಜಯ ಮಂದಣ್ಣ ವಾಸವಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕೆಲಸಕ್ಕೆ ನೇಮಕಗೊಂಡಿದ್ದು, ಜಯ ಮಂದಣ್ಣ ಹಾಗೂ ಕುಟುಂಬ ಆಗಿಂದ್ದಾಗೆ ಮನೆಗೆ ಬಂದು ವಾಪಸ್ಸು ಕರ್ತವ್ಯಕ್ಕೆ ಮರಳುತ್ತಿದ್ದರು.

ಕಳೆದ ಕೆಲವು ದಿನಗಳಿಂದ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿರುವ ಕಳ್ಳರು ತಡರಾತ್ರಿ ವೇಳೆ ಮನೆಗೆ ನುಗ್ಗಿ ಮುಂಭಾಗಿಲನ್ನು ಮುರಿದು ಒಳಪ್ರವೇಶಿಸಿ ಮನೆಯಲ್ಲಿರುವ ಎಲ್ಲಾ ಗಾಡ್ರೇಜ್‌ಗಳನ್ನು ಹೊಡೆದು ಹೊರಗೆಳೆದು ಅಲ್ಲಿದ್ದ ಚಿನ್ನದ ನಾಣ್ಯಗಳು, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ೩೦ ಸಾವಿರ ನಗದು, ೪೦ ಬಂದೂಕಿನ ತೋಟಾಗಳು, ೧೨ ಮದ್ಯದ ಬಾಟಲಿಗಳು, ದೇವರ ಕೋಣೆಯಲ್ಲಿದ್ದ ಬೆಳ್ಳಿಯ ದೀಪಗಳು ಹಾಗೂ ೪೦ ಸಾವಿರ ಬೆಲೆಯ ಪೀಚೆಕತ್ತಿಯನ್ನು ಕದ್ದೊಯ್ದಿದ್ದಾರೆ. ಬುಧವಾರದಂದು ಜಯ ಮಂದಣ್ಣನವರ ಮಗ ಮನೆಗೆ ಬಂದ ಸಂದರ್ಭ ಕಳ್ಳತನ ಮಾಡಿರುವ ವಿಷಯ ಗೋಚರಿಸಿದೆೆ. ಕೂಡಲೇ ಗೋಣಿಕೊಪ್ಪ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗೋಣಿಕೊಪ್ಪ ಠಾಣಾಧಿಕಾರಿ ಕಾಳೇಗೌಡ, ಅಪರಾಧÀ ವಿಭಾಗದ ಎಸ್‌ಐ ವೆಂಕಟೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಮಾಲೀಕ ಜಯ ಮಂದಣ್ಣ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಾತೂರು ವ್ಯಾಪ್ತಿಯಲ್ಲಿ ದೇವಾಲಯ, ಶಾಲೆ ಸೇರಿದಂತೆ ಇತರ ಕಡೆಗಳಲ್ಲಿ ಸರಣಿ ಕಳ್ಳತನ ಇತ್ತೀಚೆಗೆ ನಡೆದಿತ್ತು. ಕಳ್ಳತನವನ್ನು ಪೊಲೀಸರು ಬೇದಿಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದರು. ನಂತರ ಗ್ರಾಮದಲ್ಲಿ ಗಸ್ತು ಹೆಚ್ಚು ಮಾಡಿದ್ದರು. ಆದರೂ ಕಳ್ಳರು ಒಂಟಿ ಮನೆಯನ್ನು ಗುರಿಯಾಗಿರಿಸಿಕೊಂಡು ಕಳ್ಳತನಕ್ಕೆ ಮುಂದಾಗುತ್ತಿರುವುದು ಪೊಲೀಸರನ್ನು ನಿದ್ದೆಗೆಡಿಸಿದೆ.