ನಾಪೋಕ್ಲು, ಆ. ೫: ಹೊದವಾಡ ಗ್ರಾಮದಲ್ಲಿ ವಾಸದ ಮನೆ ಮಳೆ ಗಾಳಿಯಿಂದಾಗಿ ಬಿರುಕುಬಿಟ್ಟು ಅಪಾಯ ಮಟ್ಟದಲ್ಲಿದೆ. ಹೊದ್ದೂರು ಗ್ರಾಮ ಪಂಚಾಯಿತಿಯ ಹೊದವಾಡ ಗ್ರಾಮದ ನಿವಾಸಿ ಜಯಂತಿ ಎಂಬವರ ವಾಸದ ಮಣ್ಣಿನ ಮನೆಯ ಮಣ್ಣಿನ ಗೋಡೆ ಮಳೆ ಹಾಗೂ ಶೀತದಿಂದ ಬಿರುಕುಬಿಟ್ಟಿದೆ. ಘಟನಾ ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.