ಕುಶಾಲನಗರ, ಆ. ೭: ಪಿರಿಯಾಪಟ್ಟಣದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕುಶಾಲನಗರದ ಶಿವಧಾರೆ ನೃತ್ಯ ಸಂಸ್ಥೆಗೆ ತೃತೀಯ ಬಹುಮಾನ ಲಭಿಸಿದೆ.

ಪಿರಿಯಾಪಟ್ಟಣದ ದೇವರಾಜ ಅರಸು ಭವನದಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಹಾಸನ, ಕೊಡಗು ಸೇರಿದಂತೆ ನಾನಾ ಕಡೆಗಳಿಂದ ನೃತ್ಯ ಪಟುಗಳು ಭಾಗವಹಿಸಿದ್ದರು. ಶಿವಧಾರೆ ನೃತ್ಯ ಸಂಸ್ಥೆಗೆ ಸೀನಿಯರ್ ವಿಭಾಗದಲ್ಲಿ ಪ್ರದರ್ಶಿಸಿದ ನೃತ್ಯಕ್ಕೆ ತೃತೀಯ ಬಹುಮಾನ ಲಭ್ಯವಾಗಿದೆ. ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ನ ತರಬೇತುದಾರ ಮಾಸ್ಟರ್ ಚೇತನ್ ರವಿ ಅವರ ನೇತೃತ್ವದಲ್ಲಿ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿತ್ತು.