ಕುಶಾಲನಗರ, ಆ. ೫: ದೇಶ ಹಾಗೂ ಧರ್ಮದ ಮೇಲೆ ವಿವಿಧ ರೀತಿಯ ಸವಾಲುಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಸಮಾಜ ಜಾಗೃತರಾಗಿ ಸಂಘಟಿತರಾಗಿ ದೇಶ ಮತ್ತು ಧರ್ಮದ ರಕ್ಷಣೆಗೆ ಮುಂದಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖ ಗುರುರಾಜ್ ಕರೆ ನೀಡಿದರು.

ಕುಶಾಲನಗರದ ಗೌಡ ಸಮಾಜ ಸಭಾಂಗಣದಲ್ಲಿ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ ರಾಷ್ಟçದ ಸ್ಥಾಪನೆಗಾಗಿ ಸಂಘರ್ಷ ಮತ್ತು ಸಾಧನೆಯ ದಿಶೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ದೇಶ ಹಾಗೂ ಧರ್ಮಕ್ಕೆ ವಿವಿಧ ರೀತಿಯ ಸವಾಲುಗಳು ಎದುರಾಗುತ್ತಿದ್ದು, ಹಿಂದೂ ಸಮಾಜ ತನ್ನ ಸಾಮರ್ಥ್ಯವನ್ನು ಅರಿತು ಜಾಗೃತಿಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು. ಸಮಾಜ ಕೇವಲ ಪ್ರೇಕ್ಷಕರಾಗಿ ಉಳಿಯದೆ ರಾಷ್ಟç ಮತ್ತು ಧರ್ಮದ ಹಿತದೃಷ್ಟಿಯಿಂದ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ ೬೪ ಸ್ಥಳಗಳಲ್ಲಿ ಗುರುಪೂರ್ಣಿಮೆ ಮಹೋತ್ಸವಗಳನ್ನು ಆಯೋಜಿಸ ಲಾಗಿದ್ದು, ಸಂಭವನೀಯ ತುರ್ತು ಪರಿಸ್ಥಿತಿಗಳನ್ನು ಗಮನದಲ್ಲಿಟ್ಟು ಕೊಂಡು ಪ್ರಥಮ ಚಿಕಿತ್ಸೆ, ಅಗ್ನಿಶಾಮಕ ಹಾಗೂ ಸ್ವರಕ್ಷಣಾ ತರಬೇತಿ ಪಡೆಯುವಂತೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖರಾದ ಚಂದನ ಉಪಾಧ್ಯಾಯ, ಧರ್ಮದಲ್ಲಿ ತಿಳಿಸಲಾದ ಆಚರಣೆಗಳನ್ನು ಪಾಲಿಸುವುದರ ಜೊತೆಗೆ ಧರ್ಮಕಾರ್ಯಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಜಾತಿ ಭೇದಭಾವವನ್ನು ಮೀರಿ ಸಮಾಜದ ಏಕತೆ ಬಲಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶ್ರೀ ವ್ಯಾಸಪೂಜೆ, ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸಂದೇಶ ವಾಚನ, ರಾಮರಾಜ್ಯದ ಸ್ಥಾಪನೆಗಾಗಿ ಸಂಕಲ್ಪ ಹಾಗೂ ನಾಮಜಪ, ಧರ್ಮರಕ್ಷಕರು ಮತ್ತು ಹಿಂದುತ್ವನಿಷ್ಠರ ಸತ್ಕಾರ, ಸ್ವರಕ್ಷಣೆಯ ಸರಳ ವಿಧಾನಗಳ ಪ್ರಾತ್ಯಕ್ಷಿಕೆ ಹಾಗೂ ಡಾ. ಆಠವಲೆ ಅವರ ಕಾರ್ಯಾಧಾರಿತ ಕಿರುಚಿತ್ರ ಪ್ರದರ್ಶನ ನಡೆಯಿತು. ರಾಷ್ಟç ಮತ್ತು ಧರ್ಮಕ್ಕೆ ಸಂಬAಧಿಸಿದ ಗ್ರಂಥ ಹಾಗೂ ಮಾಹಿತಿ ಫಲಕಗಳ ಪ್ರದರ್ಶನವೂ ಏರ್ಪಡಿಸಲಾಗಿತ್ತು.