ಮಡಿಕೇರಿ, ಆ. ೭: ಕೂಡಿಗೆಯಲ್ಲಿರುವ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಚೆಂಬು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿರುವ ೬ ದಿನಗಳ ಉಚಿತ ಇಡಿಪಿ ತರಬೇತಿ ಕಾರ್ಯಕ್ರಮಕ್ಕೆ ಮಡಿಕೇರಿ ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ಗಂಗಾಧರ ನಾಯ್ಕ್ ಅವರು ಚಾಲನೆ ನೀಡಿದರು.
ಕೂಡಿಗೆ ಯೂನಿಯನ್ ಬ್ಯಾಂಕ್ ತರಬೇತಿ ಸಂಸ್ಥೆಯ ನಿರ್ದೇಶಕರಾದ ಪ್ರಕಾಶ್ ಕುಮಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ತರಬೇತಿಯಲ್ಲಿ ಫಿನಾಯಿಲ್, ಸೋಪ್ ಆಯಿಲ್, ಸೋಪ್ ಪೌಡರ್, ಹಾರ್ಪಿಕ್, ಮೇಣದಬತ್ತಿ, ಸರ್ಕಾರಿ ಸಾಲ ಸೌಲಭ್ಯಗಳು ಹಾಗೂ ಇನ್ನೂ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಬಳಿಕ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮಾತನಾಡಿ, ಮಹಿಳೆಯರು ಇದರ ಸದುಪಯೋಗ ಪಡೆದು ಸ್ವ ಉದ್ಯೋಗ ಮಾಡಿ ಸ್ವಾವಲಂಬಿಗಳಾಗಿ ಎಂದು ಮಾರ್ಗದರ್ಶನ ನೀಡಿದರು.
ಜಿಲ್ಲಾ ಪಂಚಾಯತ್ ಡಿಸ್ಟಿçಕ್ಟ್ ಮ್ಯಾನೇಜರ್ ಚಾಂದಿನಿ ಅವರು ಮಾತನಾಡಿ, ಎಲ್ಲರೂ ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘಕ್ಕೆ ಸೇರಿ ಮಹಿಳೆಯರು ಸ್ವ ಉದ್ಯೋಗಿಗಳಾಗಬೇಕು ಎಂದು ಹೇಳಿದರು.
ತರಬೇತುದಾರರಾದ ಲೀಲಾವತಿ, ಕೂಡಿಗೆ ಯೂನಿಯನ್ ಬ್ಯಾಂಕ್ ತರಬೇತಿ ಸಂಸ್ಥೆ ಇದರ ಸಿಬ್ಬಂದಿಗಳಾದ ನವ್ಯ ಹಾಗೂ ಸಲಾವುದ್ದಿನ್, ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಪ್ರಿಯಾ ಕೆ.ಎಲ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಬಿರಾರ್ಥಿಗಳು ಹಾಜರಿದ್ದರು.