ಮಡಿಕೇರಿ, ಆ. ೭: ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಕ್ರಮಾಂಕದ ಟೂರ್ನಮೆಂಟ್ನಲ್ಲಿ ಕೊಡಗಿನ ಯುವಿಕ ತಿಮ್ಮಯ್ಯ ಭಾಗವಹಿಸಿ ರನ್ನರ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂಡರ್ -೧೧ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ಯುವಿಕ ಈ ಸಾಧನೆ ಗೈದಿದ್ದಾರೆ. ಡಬಲ್ಸ್ ವಿಭಾಗದಲ್ಲಿ ತನ್ನ ಜೊತೆ ಆಟಗಾರ್ತಿ ಶನಯ ಅವರೊಂದುಗೂಡಿ ಕಂಚು ಪದಕ ಕೂಡ ಗೆದ್ದಿದ್ದರು.
ಈ ಮೂಲಕ ಈ ವಿಭಾಗದಲ್ಲಿ ರಾಜ್ಯಕ್ಕೆ ೨ನೇ ಕ್ರಮಾಂಕದ ಸ್ಥಾನ ಪಡೆದಿದ್ದಾರೆ. ಇವರು ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ೫ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಗೋಣಿಕೊಪ್ಪದ ಮಂಡಿರ ತಮ್ಮಯ್ಯ - ಶೃತಿ ಕಾವೇರಮ್ಮ ದಂಪತಿಯ ಪುತ್ರಿ. ಶನಯ ಅವರು ಕೂಡ ಕ್ಯಾಲ್ಸ್ ನ ೫ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಕೈಕೇರಿಯ ಸತ್ಯ-ಕಾವ್ಯ ದಂಪತಿಯ ಪುತ್ರಿ.