ಕರಿಕೆ, ಆ, ೬: ಇಲ್ಲಿಗೆ ಸಮೀಪದ ಸಂಪಾಜೆ ಬಳಿಯ ಮಂಗಳೂರು ಉಪ ವಿಭಾಗದ ಸುಳ್ಯ ಅರಣ್ಯ ವಲಯದ ಪೂಮಾಲೆ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಕಾಟಿ (ಕಾಡುಕೋಣ-ಎಮ್ಮೆ) ಹತ್ಯೆ ಮಾಡಿ ಮಾಂಸ ಮಾರಾಟ ಮಾಡುವ ಸಂದರ್ಭದಲ್ಲಿ ಬಂದ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಮಾಲುಸಮೇತ ಕೊಡಗು ಸಂಪಾಜೆ ವಲಯ ಅರಣ್ಯ ಸಿಬ್ಬಂದಿಗಳು ಬಲೆಗೆ ಕೆಡುವುವಲ್ಲಿ ಯಶಸ್ವಿಯಾಗಿದ್ದಾರೆ.

ಎಂ. ಚೆಂಬು ಗ್ರಾಮದ ಗೌತಮ್ ಕುಕ್ಕೇಟಿ (೨೪) ಹಾಗು ಕೆ. ಪೆರಾಜೆ ಗ್ರಾಮದ ಶರತ್ ಕೊಳಂಗಾಯ (೩೬) ಬಂದಿತರು. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂದಿತರಿAದ ಒಂದು ಮಾರುತಿ ಇಕೋ ವಾಹನ (ಕೆ.ಎ. ೧೨ ಎಂ. ಸಿ ೦೩೭೦,) ಅಂದಾಜು ೧೭ ತೋಟಗಳು, ಒಂದು ಏರ್ ಗನ್ ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ನ್ಯಾಯಾಂಗ ಬಂಧÀನಕ್ಕೆ ಒಪ್ಪಿಸಲಾಗಿದೆ. ಆದರೆ ಕಾಟಿ ಹತ್ಯೆಗೆ ಬಳಸಿದ ಬಂದೂಕು ಪತ್ತೆಯಾಗಿರುವುದಿಲ್ಲ. ಸಂಪಾಜೆ ವಲಯ ಅರಣ್ಯ ಅಧಿಕಾರಿ ಡಿನ್ಸಿ ದೇಚಮ್ಮ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ವಿಜೇಯಂದ್ರ ಕುಮಾರ್, ಸುರೇಶ, ಶ್ರೀರಕ್ಷಾ ಹಾಗೂ ಗಸ್ತು ಅರಣ್ಯ ಪಾಲಕರಾದ ಯಮುನಾ ಕೋಳೂರ, ಕಾರ್ತಿಕ್, ಶ್ರೀಕಾಂತ್, ಸಿದ್ದರಾಮ ನಾಟೆಕಾರ್, ಸಿದ್ದೇಶ್ ಎಂ ಪಾಲ್ಗೊಂಡಿದ್ದರು. ಇದೊಂದು ದೊಡ್ಡ ದಂಧೆಯಾಗಿದ್ದು, ಕೆಲದಿನಗಳ ಹಿಂದೆ ಬೆಟ್ಟತ್ತೂರುವಿನಲ್ಲಿ ಕಾಟಿ ಬೇಟೆಗಾರರು ಇಲಾಖೆ ಸಿಬ್ಬಂದಿ ಮೇಲೆ ಜೀಪ್ ಹತ್ತಿಸಲು ಯತ್ನ ಮಾಡಿದಾಗ ಗುಂಡು ಹಾರಿಸಿ ಕಾಟಿ ಮಾಂಸ ಸಮೇತ ಆರೋಪಿಗಳನ್ನು ಬಂದಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿತ್ತು. ಈ ಬಗ್ಗೆ ಪೊಲೀಸ್ ಇಲಾಖೆ ಕೂಡ ಮಾಹಿತಿ ಕಲೆಹಾಕಿ ಬಂದೂಕು ಹಾಗು ಮದ್ದು ಗುಂಡು ಯಾವ ಮೂಲಗಳಿಂದ ಸರಬರಾಜು ಆಗುತ್ತಿದೆ ಎಂಬುದಾಗಿ ತನಿಖೆ ಮಾಡಬೇಕಿದೆ. ಸುಧೀರ್ ಹೊದ್ದೆಟ್ಟಿ