ಮಡಿಕೇರಿ,ಆ.೭: ನಿಷೇಧಿತ ಎಂಡಿಎAಎ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂದಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಜುಲೈ ತಿಂಗಳ ೨೬ರಂದು ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಿಗೆಕಟ್ಟೆ ರಸ್ತೆ ಸಮೀಪ ಎಂಡಿಎAಎ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಾಲು ಸಹಿತ ಮೂವರನ್ನು ಬಂದಿಸಿದ್ದಾರೆ. ಪರಿಯಾಪಟ್ಟಣ ತಾಲೂಕಿನ ಕುಮದನಹಳ್ಳಿ ಗ್ರಾಮದ ಕೆ.ಆರ್. ಮುತ್ತುರಾಜ್ (೨೪), ಚಿಟ್ಟೇನ ಹಳ್ಳಿ ಗ್ರಾಮದ ಕೆ.ಎಸ್. ಪ್ರಶಾಂತ್ (೩೪), ಬೆಂಗಳೂರು ಚೆನ್ನಕೇಶವನಗರದ ಪೂಣಚ್ಚ (೩೯) ಬಂದಿತ ಆರೋಪಿಗಳಾಗಿದ್ದು, ಅವರುಗಳ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂದಿತರಿAದ ೧೦.೦೫ ಗ್ರಾಂ ಎಂಡಿಎAಎ ಹಾಗೂ ಕೃತ್ಯಕ್ಕೆ ಬಳಸಲಾದ ಒಂದು ಆಟೋ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಎಸ್ಪಿ ಪಿ.ಎ. ಸೂರಜ್, ವೃತ್ತ ನಿರೀಕ್ಷಕ ಚಂದ್ರಶೇಖರ್, ಠಾಣಾಧಿಕಾರಿ ಅನ್ನಪೂರ್ಣ, ಅಪರಾಧ ಪತ್ತೆದಳದ ಯೋಗೇಶ್, ನಿರಂಜನ್, ಪ್ರವೀಣ್, ರಾಜೇಶ್, ಶರತ್ ರೈ, ನಗರ ಠಾಣಾ ಸಿಬ್ಬಂದಿಗಳಾದ ಮುನೀರ್, ರಂಜಿತ್ ಪಾಲ್ಗೊಂಡಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.