ೆÆÃಮವಾರಪೇಟೆ, ಆ. ೬: ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಎಚ್.ಆರ್.ದಿಶಿತಾ ಪ್ರಮಾಣ ವಚನ ಬೋಧಿಸಿದರು. ಉಪಾಧ್ಯಕ್ಷ ಎಸ್.ಕೆ.ಧ್ರುವ, ಕಾರ್ಯದರ್ಶಿ ಎನ್.ಪಿ.ಗುರು ಪ್ರಸಾದ್, ಕ್ರೀಡಾ ನಾಯಕಿ ಎ.ಎಂ.ವೈಭವಿ, ಸಹ ಕ್ರೀಡಾನಾಯಕ ಬಿ.ಪ್ರೀತೇಶ್, ಶೈಕ್ಷಣಿಕ ನಾಯಕಿ ಬಿ.ಜೆ.ಸಾಹಿತ್ಯ, ಶೈಕ್ಷಣಿಕ ಸಹ ನಾಯಕ ಎಸ್.ಎ.ರಿಯಾನ್ ಪ್ರಮಾಣ ವಚನ ಸ್ವೀಕರಿಸಿದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪು ಗೊಳ್ಳುವುದು ಶಿಕ್ಷಣದ ಮೂಲಕ ವಾಗಿದ್ದು, ಕಲಿಕೆಯ ಜೊತೆಗೆ ಶಿಸ್ತು, ಪ್ರಾಮಾಣಿಕತೆ ಮತ್ತು ಉತ್ತಮ ಮೌಲ್ಯಗಳನ್ನು ಜೀವನ ದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ನಾಯಕತ್ವದ ಜವಾಬ್ದಾರಿ ವಹಿಸಿರುವ ವಿದ್ಯಾರ್ಥಿಗಳು ಇತರರಿಗೆ ಮಾದರಿ ಯಾಗಬೇಕು ಎಂದು ಕರೆ ನೀಡಿದರು. ಪ್ರಾಂಶುಪಾಲೆ ಮಿಲ್ಡ್ರೆಡ್ ಗೋನ್ಸಾಲ್ವೆಸ್ ಮಾತನಾಡಿ, ಮಕ್ಕಳ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಾಲೆ ಮತ್ತು ಮನೆ ಎರಡೂ ಮಕ್ಕಳ ಬೆಳವಣಿಗೆಯ ಕೇಂದ್ರಗಳಾಗಿದ್ದು, ಪೋಷಕರು ಮಕ್ಕಳೊಂದಿಗೆ ನಿರಂತರ ಸಂವಹನ ನಡೆಸಬೇಕು. ಮಕ್ಕಳ ಪ್ರತಿಭೆ, ಆಸಕ್ತಿ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು ಎಂದರು.

ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಭಾತ್ಮೀದಾರ ಕೆ.ಎಂ.ಜಗದೀಶ್, ನಿರ್ದೇಶಕ ಕೆ.ಎಸ್.ರಾಮಚಂದ್ರ, ನೀತಿವಾದಿ ಮತ್ತು ರೇಖಾಚಿತ್ರ ಕಲಾವಿದ ಟಿ.ಎಸ್.ಕಾರ್ತಿಕ್ ಹಾಗೂ ಉಪನ್ಯಾಸಕರು ಇದ್ದರು.