ಗೋಣಿಕೊಪ್ಪಲು, ಆ. ೬: ಅಸ್ಸಾಂ ರಾಜ್ಯದಿಂದ ಕೊಡಗಿನ ವಾಣಿಜ್ಯ ನಗರಿ ಗೋಣಿಕೊಪ್ಪಲುವಿಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಗೋಣಿಕೊಪ್ಪ ಪೊಲೀಸರು ಪತ್ತೆಹಚ್ಚಿದ್ದಾರೆ. ಕಾರ್ಮಿಕರ ಸೋಗಿನಲ್ಲಿ ಬಂದು ಈ ಕೃತ್ಯ ಎಸಗುತ್ತಿದ್ದ ಅಸ್ಸಾಂ ಮೂಲದ ೫ ಮಂದಿಯನ್ನು ಪೊಲೀಸರು ಬಂದಿಸಿ ಜೈಲಿಗಟ್ಟಿದ್ದಾರೆ.
ಗೋಣಿಕೊಪ್ಪ ಸಮೀಪದ ಅತ್ತೂರು ತಿರುಮಲ ಕಾಫಿ ತೋಟದ ಲೈನ್ಮನೆಯಲ್ಲಿ ಪ್ರಸ್ತುತ ವಾಸವಿರುವ ಅಜತ್ಅಲಿ (೨೫), ಆಸದೊಲ್ಹಕ್ (೩೪), ಪೊನ್ನಂಪೇಟೆ ಕೊಡವ ಸಮಾಜ ಹತ್ತಿರದ ತಿಮ್ಮಯ್ಯರವರ ಲೈನ್ ಮನೆಯಲ್ಲಿ ವಾಸವಿರುವ ಆಸಾತುಲ್ಲಾಹಕ್ (೨೫), ಪೊನ್ನಂಪೇಟೆ ಹೆಚ್.ಪಿ. ಪೆಟ್ರೋಲ್ ಬಂಕ್ನ ಕೆಲಸಗಾರ ನೂರ್ಹಕ್ (೨೩) ಮತ್ತು ಅಜಿತಾಲಿ ಎಂಬುವವರೇ ಅಸ್ಸಾಂ ಮೂಲದ ಬಂಧಿತ ಆರೋಪಿಗಳಾಗಿದ್ದಾರೆ.
ದೂರದ ಅಸ್ಸಾಂನಿAದ ತಡರಾತ್ರಿ ವೇಳೆ ಗೋಣಿಕೊಪ್ಪಕ್ಕೆ ಗಾಂಜಾ ಸರಬರಾಜು ಆಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಗೋಣಿಕೊಪ್ಪ ನಗರದಲ್ಲಿ ಅಕ್ರಮವಾಗಿ ಗಾಂಜಾ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದವರನ್ನು ಬಂದಿಸಿ, ಅವರಿಂದ ೬.೯ ಕೆ.ಜಿಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಮಿಕರ ಹೆಸರಿನಲ್ಲಿ ಕೊಡಗಿಗೆ ಬರುವ ಕೆಲವರು, ಹಣದ ವ್ಯಾಮೋಹಕ್ಕೆ ಬಿದ್ದು ಈ ಅಕ್ರಮ ದಂಧೆಗೆ ಇಳಿದಿದ್ದಾರೆ. ಸಣ್ಣ ಸಣ್ಣ ಪ್ಲಾಸ್ಟಿಕ್ ಪ್ಯಾಕೆಟ್ಗಳಲ್ಲಿ ಗಾಂಜಾವನ್ನು ತುಂಬಿ, ಕೇವಲ ೫೦ ಗ್ರಾಂ ಗಾಂಜಾವನ್ನು ರೂ. ೫೦೦ರಂತೆ ಯುವಕರಿಗೆ ಮತ್ತು ಸ್ಥಳೀಯರಿಗೆ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ದಕ್ಷಿಣ ಕೊಡಗಿನ ತಿತಿಮತಿ, ಪೊನ್ನಂಪೇಟೆ ಹಾಗೂ ಹರಿಶ್ಚಂದ್ರಪುರದ ಕೆಲವು ಹೊಟೇಲ್ನವರು ಈ ಅಸ್ಸಾಂ ಕಾರ್ಮಿಕರಿಗೆ ಬೆಂಬಲ ನೀಡಿರುವುದು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ತನಿಖೆಯಿಂದ ಬಹಿರಂಗಗೊAಡಿದೆ.
ಕೊಡಗು ಜಿಲ್ಲಾ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕೃತ್ಯವನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದೆ.ವಿರಾಜಪೇಟೆ ಡಿ.ವೈ.ಎಸ್.ಪಿ. ಮಹೇಶ್ಕುಮಾರ್ ಹಾಗೂ ಗೋಣಿಕೊಪ್ಪ ಸಿ.ಪಿ.ಐ. ಶಿವರಾಜ್ ಆರ್. ಮುಧೋಳ್ ನೇತೃತ್ವದಲ್ಲಿ ಗೋಣಿಕೊಪ್ಪ ಎಸ್.ಐ. ಕಾಳೆಗೌಡ, ಕ್ರೆöÊಂ ಎಸ್.ಐ. ವೆಂಕಟೇಶ್, ಸಿಬ್ಬಂದಿಗಳಾದ ಶ್ರೀನಿವಾಸ್, ಮಹೇಂದ್ರ, ಗಿರೀಶ್, ಶುಭಂ, ಸತೀಶ್, ಲೋಕೇಶ್, ರಘು, ಭರತ್, ಬಾಳಪ್ಪ, ಮತ್ತು ತಂಡ ಕಾರ್ಯಚರಣೆಯಲ್ಲಿ ಪಾಲ್ಗೊಂಡಿತ್ತು.
ಕೊಡಗಿನ ಯುವಜನತೆಯನ್ನು ದಾರಿ ತಪ್ಪಿಸುತ್ತಿರುವ ಇಂತಹ ಗಾಂಜಾ ಕಳ್ಳಸಾಗಾಣಿಕೆ ಜಾಲದ ವಿರುದ್ಧ ಪೊಲೀಸ್ ಇಲಾಖೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಪ್ರಮುಖ ನಗರದ ಮಾರುಕಟ್ಟೆ
ದಿನದಂದು ಗಾಂಜಾ ವ್ಯಾಪಾರಕ್ಕಿಳಿಯುವ ಇವರು ಉಳಿದ ದಿನದಂದು ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಸುತ್ತಮುತ್ತಲಿನ ತೋಟದಲ್ಲಿ, ಪೆಟ್ರೋಲ್ ಬಂಕಿನಲ್ಲಿ, ಹೊಟೇಲ್ಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಪೊಲೀಸರ ಕಾರ್ಯಾಚರಣೆಗೆ ನಾಗರಿಕರು ಪ್ರಶಂಸೆ ವ್ಯಕ್ತತಪಡಿಸಿದ್ದಾರೆ.
ಚಿತ್ರ, ಸುದ್ದಿ, : ಹೆಚ್.ಕೆ.ಜಗದೀಶ್