ಮಡಿಕೇರಿ, ಆ.೫: ೨೦೨೫-೨೬ನೇ ಸಾಲಿನಲ್ಲಿ ಒಂದನೇ ತರಗತಿಯಿಂದ ಅಂತಿಮ ವರ್ಷದ ಪದವಿ/ ಡಿಪ್ಲೋಮಾದವರೆಗೆ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ (ಹವಾಲ್ದಾರ್ ರ‍್ಯಾಂಕಿನ ಮೇಲಿನ ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ) ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ನವೆಂಬರ್ ೩೧ ಕೊನೆಯ ದಿನವಾಗಿದೆ.

ಹವಾಲ್ದಾರ್ ಮತ್ತು ಕೆಳಗಿನ ರ‍್ಯಾಂಕಿನ ಮಾಜಿ ಸೈನಿಕರು ಶಿಷ್ಯವೇತನಕ್ಕಾಗಿ ವೆಬ್‌ಸೈಟ್ WWW.ಏSಃ.ಉಔಗಿ.Iಓ ಆನ್‌ಲೈನ್‌ನಲ್ಲಿ ಡಿಸೆಂಬರ್ ಮಾಹೆಯ ಒಳಗಡೆ ಅರ್ಜಿ ಸಲ್ಲಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.